ಬಿವೈ ವಿಜಯೇಂದ್ರ 
ರಾಜಕೀಯ

ಸ್ವಾಮೀಜಿ, BJP ನಾಯಕರ ಹತ್ಯೆಗೆ ಮಹಾರಾಷ್ಟ್ರ ಗೂಂಡಾಗಳಿಗೆ ಸುಪಾರಿ: ಬಿವೈ ವಿಜಯೇಂದ್ರ ಆರೋಪ

ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್ ನೋಟ್ ನಲ್ಲಿ ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ.

ಶಿವಮೊಗ್ಗ: ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್ ನೋಟ್ ನಲ್ಲಿ ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಚಿನ್ ಅವರು ಪ್ರಕರಣನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್​ ಮುಖಂಡ ರಾಜು ಕಪ್ಪನೂರ್ ಪ್ರಿಯಾಂಕ ಖರ್ಗೆಯ ಎಡಗೈ ಬಂಟ. ಈ ಪುಡಾಯರಿಯ ಬೆದರಿಕೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಪ್ರಾಮಾಣಿಕ ತನಿಖೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಪ್ರಿಯಾಂಕ್​ ಖರ್ಗೆ ತುಂಬಾ ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್ ಗಳನ್ನು ಕರೆಸಿ ಸ್ವಾಮಿಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಶಾಸಕ ಹಾಗೂ ಚಂದು ಪಾಟೀಲ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿರೋಧ ಪಕ್ಷದವರು ಬೆಳೆದರೆ ಇವರ ಬೆಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಹೀಗೆ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಮಾತಾಡುತ್ತಿರುವುದು ಸರಿಯಲ್ಲ, ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸ್ನೇಹಿತನಾಗಿ ಸಲಹೆ ಕೊಡುತ್ತಿದ್ದೇನೆ, ನಿಮ್ಮ ಪಾತ್ರ ಇಲ್ಲ ಎಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ. ಸಿಬಿಐ ತನಿಖೆ ಬಗ್ಗೆ ಅನುಮಾನ ಪಡಬೇಡಿ, ಈ ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್'ಗೆ ಕ್ಲೀನ್​ಚಿಟ್​ ಕೊಟ್ಟಿದ್ದು ಸಿಬಿಐ. ಜೊತೆಗೆ ನೀವು ಸಿದ್ದರಾಮಯ್ಯರನ್ನು ನಂಬಬೇಡಿ, ನಿಮ್ಮ ವಿರುದ್ದವೇ ನಿಮ್ಮ ಪಕ್ಷದಲ್ಲೆ ಷಡ್ಯಂತ್ರ ನಡೆಯುತ್ತಿದೆ. ನೀವು ಮುಖ್ಯಮಂತ್ರಿ ಆದರೂ ನಮಗೆ ಸಮಸ್ಯೆ ಇಲ್ಲ. ಆದರೆ, ತನಿಖೆಯನ್ನು ಸಿಬಿಐಗೆ ಕೊಡಿ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT