ಡಾ. ಯತೀಂದ್ರ ಸಿದ್ದರಾಮಯ್ಯ 
ರಾಜಕೀಯ

ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಯತೀಂದ್ರ ಸಿದ್ದರಾಮಯ್ಯ

ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್‌ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರು: 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್‌ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಯಾರ್ರೀ ಹೇಳಿದ್ದು ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಎಂದು ಕೆಂಡಾಮಂಡಲರಾದರು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ ಎಂದು ಕುಟುಕಿದ್ದಾರೆ.

ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಅನ್ನೋ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಇದನ್ನ ಈಗಲ್ಲ, ಕಳೆದಬಾರಿ ಭಾಗ್ಯಗಳನ್ನ ಕೊಟ್ಟಾಗಲೂ ಹೀಗೆ ಹೇಳ್ತಿದ್ರು. ಯಾರೂ ಸೋಮಾರಿಗಳಾಗಲ್ಲ, ಬಡವರು ಹೊಟ್ಟೆ ತುಂಬಾ ಊಟ ಮಾಡಿ ಸೋಮಾರಿ ಆಗೋದಿಲ್ಲ. ಇದೇ ಪ್ರಶ್ನೆಯನ್ನ ಶ್ರೀಮಂತರ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ಕೇಳಲಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗೆ ಯಾಕೆ ಕಣ್ಣುರಿ? ಯಾರು ಏನೇ ಟೀಕೆ ಮಾಡಿದ್ರೂ ನಾವು ಕೊಟ್ಟೇ ಕೊಡ್ತೀವಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಒಂದು ಸಣ್ಣ ಪ್ರಚೋದನೆ ಭಾರತದ ಭೂಪಟವೇ ಬದಲಾಗಬಹುದು': ಮತ್ತೆ ಪರಮಾಣು ಧಮ್ಕಿ ಹಾಕಿದ ಪಾಕ್ ಸೇನಾ ಮುಖ್ಯಸ್ಥ

ಢಾಕಾದಲ್ಲಿ ಭಾರತೀಯ ಸೇನಾ ಗುಪ್ತಚರ ಅಧಿಕಾರಿಗಳು: ಹಳೆಯ ಸೇನಾ ವಿಮಾನ ನಿಲ್ದಾಣಕ್ಕೆ ಬಾಂಗ್ಲಾ ಸೇನಾ ಮುಖ್ಯಸ್ಥ ಭೇಟಿ; ಸಭೆ!

ಅಮೆರಿಕ-ಭಾರತ ವ್ಯಾಪಾರ ಮಾತುಕತೆ: 'ಪ್ರಗತಿ ಕಂಡುಬಂದಿದೆ, ಯಾವುದೇ ಪ್ರಮುಖ ವ್ಯತ್ಯಾಸಗಳಿಲ್ಲ'; ವಾಣಿಜ್ಯ ಸಚಿವಾಲಯ

ನಾನು ಅಂದುಕೊಂಡರೆ ಸುಲಭವಾಗಿ ಕ್ಷಣಾರ್ಧದಲ್ಲಿ ಸಂಘರ್ಷ ನಿಲ್ಲಿಸಬಲ್ಲೆ: Afghan-Pak ಯುದ್ಧದ ಬಗ್ಗೆ ಟ್ರಂಪ್

ವಿಜಯಪುರ: ಎಸ್ಕೇಪ್ ಆಗಲು ಯತ್ನಿಸಿದ ರೌಡಿಶೀಟರ್ ಪೊಲೀಸರ ಗುಂಡಿಗೆ ಬಲಿ!

SCROLL FOR NEXT