ಬೆಂಗಳೂರು: ನಮ್ಮಣ್ಣ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ನಾನು ಈಗಲೂ ಹೇಳ್ತಿನಿ ನನಗೊಂದು ಆಸೆ ಇದೆ. ನನ್ನ ಆಸೆಯಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಅದಕ್ಕೆ ಒಂದು ಕಾಲ ಬರಬೇಕು, ತೀರ್ಮಾನ ಆಗಬೇಕು. ಇವತ್ತು ಮುಖ್ಯಮಂತ್ರಿಗಳು ಆ ಸೀಟ್‌ನಲ್ಲಿ ಕುಳಿತಿದ್ದಾರೆ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡಬಾರದು ಎಂದರು.
ಸದ್ಯ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇದ್ದಾರೆ, ಸ್ಥಾನ ಬೇಕು ಅಂತ ಎಂದು ಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? ಈಗ ನಿಮ್ಮ ಸೀಟ್‌ನ ಖಾಲಿ ಮಾಡಿಸಬೇಕಾದ್ರೆ ಎಳೆದು ಕೂರಿಸಬೇಕಾಗುತ್ತದೆ. ಹೇಗೆ ಆಗುತ್ತದೆ ಅವೆಲ್ಲಾ? ಅವರು ಕೂತಿರುವಾಗ ಅವರ ಗೌರವ ಘನತೆ ಬಗ್ಗೆ ನಂಬಿಕೆ ಇದೆ. ಅವರಿಗೆ ಸಲ್ಲಬೇಕಾದ್ದರ ಬಗ್ಗೆ ಚಿಂತನೆ ಮಾಡಬೇಕು. ಆನಂತರ ಹೈಕಮಾಂಡ್ ತೀರ್ಮಾನ ಮಾಡಬೇಕು. ಡಿ.ಕೆ.ಶಿವಕುಮಾರ್ ನಂಬಿಕೆ ಮೇಲೆ ಬದುಕಿರುವುದು. ಆ ನಂಬಿಕೆ ಮೇಲೆಯೇ ಎಲ್ಲರೂ ಬದುಕುತ್ತಿರುವುದು ಎಂದರು.
ಡಿ.ಕೆ ಶಿವಕುಮಾರ್ ಹೈಕಮಾಂಡ್ ಭೇಟಿ ಯಾವುದು ಹೊಸತಲ್ಲ. ನಿರಂತರವಾಗಿ ಭೇಟಿ ಮಾಡುತ್ತಲ್ಲೇ ಇರುತ್ತಾರೆ. ಹೈಕಮಾಂಡ್ ಮುಂದೆ ಡಿಮ್ಯಾಂಡ್ ಇಡಲು ಏನಿದೆ, ಪಾರ್ಟಿ ಅವರನ್ನ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂದಿದ್ದಾರೆ