ಡಿಸಿಎಂ ಡಿಕೆಶಿವಕುಮಾರ್, ಆರ್.ಅಶೋಕ್ 
ರಾಜಕೀಯ

'ಗ್ರೇಟರ್ ಬೆಂಗಳೂರು ವಿಧೇಯಕ' ನಗರವನ್ನು ಸಿಎಂ-ಡಿಸಿಎಂ ಅಡಿಯಲ್ಲಿ ತರುವ ಗುರಿ ಹೊಂದಿದೆ: ಆರ್.ಅಶೋಕ್ ಆರೋಪ

ಮಸೂದೆಯ ಪ್ರಕಾರ, ಮುಖ್ಯಮಂತ್ರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ, ಬೆಂಗಳೂರು ಅಭಿವೃದ್ಧಿ ಸಚಿವರು ಅದರ ಉಪಾಧ್ಯಕ್ಷರಾಗಿರುತ್ತಾರೆ ಮತ್ತು ನಗರದ ಶಾಸಕರು ಅದರ ಸದಸ್ಯರಾಗಿರುತ್ತಾರೆ.

ಬೆಂಗಳೂರು: 'ಗ್ರೇಟರ್ ಬೆಂಗಳೂರು ವಿಧೇಯಕ' ನಗರವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದ್ದು, ಬೆಂಗಳೂರು ಪಾಲಿಗೆ ಮರಣ ಶಾಸನವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆಯ ಮೂಲಕ ಸರ್ಕಾರವು ಬೆಂಗಳೂರು ನಾಗರಿಕ ಸಂಸ್ಥೆಯನ್ನು ಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದೆ, ಇದು ಸಂವಿಧಾನದ 74 ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ, ಇದು ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ನೀಡುತ್ತದೆ ಎಂದು ಆರೋಪಿಸಿದರು.

ಮಸೂದೆಯ ಪ್ರಕಾರ, ಮುಖ್ಯಮಂತ್ರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ, ಬೆಂಗಳೂರು ಅಭಿವೃದ್ಧಿ ಸಚಿವರು ಅದರ ಉಪಾಧ್ಯಕ್ಷರಾಗಿರುತ್ತಾರೆ ಮತ್ತು ನಗರದ ಶಾಸಕರು ಅದರ ಸದಸ್ಯರಾಗಿರುತ್ತಾರೆ. ಇದು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ 74ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ. ಒಂದು ವೇಳೆ ಸರ್ಕಾರ ಈ ಮಸೂದೆಯನ್ನು ಅಂಗೀಕರಿಸಿದರೆ, ನ್ಯಾಯಾಲಯದ ಮೊರೆ ಹೋಗುಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಮಾತನಾಡಿದ ಅಶೋಕ, ವಿಧೇಯಕವು ಬೆಂಗಳೂರು ಪಾಲಿಗೆ ಮರಣ ಶಾಸನ. ಬೆಂಗಳೂರು ವಿಭಾಗ ಮಾಡಿದರೆ ಪ್ರಯೋಜನ ಇಲ್ಲ. ಹಿಂದೆ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿತ್ತು. ಇದನ್ನೇ ನೆಪ ಮಾಡಿಕೊಂಡು ಕೇಂದ್ರಾಡಳಿತ ಪ್ರದೇಶ ಮಾಡಲು ಕೆಲವರು ಒತ್ತಡ ತಂದಿದ್ದರು, ಅದಕ್ಕಾಗಿ 2007 ರಲ್ಲಿ ನಗರದ ಹೊರವಲಯದಲ್ಲಿರುವ 110 ಹಳ್ಳಿಗಳನ್ನು ಸೇರಿಸುವುದರೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ)ಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯಿತು, ಬಿಬಿಎಂಪಿ ಮಿತಿಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಲು ಇದು ಒಂದು ಕಾರಣವಾಗಿತ್ತು. ಹೊಸದಾಗಿ ಸೇರಿಸಲಾದ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ. . ನೀವು ಬಿಬಿಎಂಪಿಯನ್ನು ವಿಭಜಿಸಿ ಹೆಚ್ಚಿನ ನಿಗಮಗಳನ್ನು ರಚಿಸಿದರೆ, ಕೆಲವು ನಿಗಮಗಳ ಮಿತಿಯಲ್ಲಿ ಕನ್ನಡಿಗರ ಸಂಖ್ಯೆ ಮತ್ತೆ ಕಡಿಮೆಯಾಗುತ್ತದೆ. ಇದು ಮೇಯರ್ ಚುನಾವಣೆಯಲ್ಲಿ ಕನ್ನಡಿಗರ ವಿರುದ್ಧ ಕೆಲಸ ಮಾಡಬಹುದು. ಈಗ ಏಳು ಪಾಲಿಕೆ ಮಾಡುವುದರಿಂದ ಕನ್ನಡ ಹೇಗೆ ಉಳಿಯಲು ಸಾಧ್ಯ. ಮುಂದೆ ಕನ್ನಡೇತರರು ಮೇಯರ್ ಆಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕೇಂದ್ರದ ಮೊರೆ ಹೋಗುತ್ತೇವೆಂದು ಹೇಳಿದರು,

ಬಿಬಿಎಂಪಿಯನ್ನು ವಿಭಜಿಸಿ ಮೂಲಕ ಹೆಚ್ಚಿನ ಪಾಲಿಕೆಗಳನ್ನು ರಚಿಸಿದರೆ, ಕೆಲವು ಪ್ರದೇಶಗಳಲ್ಲಿ ಅಹಿತಕರ ಬೆಳವಣಿಗೆ ಕಂಡುಬರುವ ಸಾಧ್ಯತೆಗಳಿವೆ. ಮಹಾದೇವಪುರ, ಕೆಆರ್ ಪುರ ಅಥವಾ ಹೆಬ್ಬಾಳದಂತಹ ಪ್ರದೇಶಗಳಲ್ಲಿ ಐಟಿ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಹಳೆಯ ಬೆಂಗಳೂರಿನ ಪ್ರದೇಶಗಳಿಗೆ ಹೋಲಿಸಿದರೆ ತೆರಿಗೆಗಳ ಮೂಲಕ ಆಯಾ ನಿಗಮಗಳಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಈ ಪ್ರದೇಶಗಳು ಸಹಾಯ ಮಾಡುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಹಣದ ಸಮಾನ ಹಂಚಿಕೆ ಇರುವುದಿಲ್ಲ. ಇದು ಕಳಪೆ ಹಂಚಿಕೆಯನ್ನು ಪಡೆಯುವ ಪ್ರದೇಶಗಳಲ್ಲಿ ಅಹಿತಕರ ವಾತಾವರಣಕ್ಕೆ ಕಾರಣವಾಗಬಹುದು.

ಕೆಂಪೇಗೌಡರ ವಂಶಸ್ಥರಾಗಿರುವ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರನ್ನು ಛೀದ್ರ ಮಾಡುತ್ತಿರುವುದು ದುರ್ವಿಧಿ. ಕೆಂಪೇಗೌಡರು 36 ನಗರಗಳನ್ನು ಕಟ್ಟಿದರು. ನಾಲ್ಕು ದಿಕ್ಕಿನಲ್ಲೂ ನಾಲ್ಕು ಗೋಪುರ ನಿರ್ಮಾಣ ಮಾಡಿದರು. ಆ ಉದ್ದೇಶಕ್ಕೆ ಈಗ ಕೊಡಲಿ ಪೆಟ್ಟು ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಳು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕವನ್ನು ಒಬ್ಬ ಮುಖ್ಯಮಂತ್ರಿ ನಿರ್ವಹಿಸುತ್ತಾರೆ. 120 ಕೋಟಿಗೂ ಹೆಚ್ಚು ಜನರಿರುವ ದೇಶವನ್ನು ಒಬ್ಬ ಪ್ರಧಾನಿ ನೋಡಿಕೊಳ್ಳುತ್ತಾರೆ, ಹೀಗಿರುವಾಗ ಬೆಂಗಳೂರನ್ನು ಒಬ್ಬ ಮೇಯರ್ ನಿರ್ವಹಿಸಲು ಸಾಧ್ಯವಿಲ್ಲವೇ? ರಾಜ್ಯದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಇದರರ್ಥ ವಿಧಾನಸಭೆಗೆ ಹೆಚ್ಚಿನ ಸ್ಪೀಕರ್‌ಗಳು ಬೇಕೆಂದೇ? ಎಂದು ಪ್ರಶ್ನಿಸಿದರು.

ದೆಹಲಿ ನಾಗರಿಕ ಸಂಸ್ಥೆಯನ್ನು ಮೂರು ನಿಗಮಗಳಾಗಿ ವಿಂಗಡಿಸಿದ ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದರು. ಬಳಿಕ ವಿವಿಧ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಗಣಿಸಿ, ಅದನ್ನು ಮತ್ತೆ ಒಂದು ನಾಗರಿಕ ಸಂಸ್ಥೆಯನ್ನಾಗಿ ಮಾಡಲಾಯಿತು. ದೆಹಲಿ ಮುಖ್ಯಮಂತ್ರಿ ಈಗ ನಾಗರಿಕ ಸಂಸ್ಥೆಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT