ಮೈಸೂರು: ರಾಹುಲ್ ಗಾಂಧಿ ಸಿದ್ದರಾಮಯ್ಯ ಮುಂದೆ ಬಚ್ಚಾ ಆದರೆ, ದೆಹಲಿಯಲ್ಲಿ ಅವರ ಭೇಟಿಗಾಗಿ ಸಿಎಂ ಕಾಯ್ತಿರೋದು ಬೇಸರ ತಂದಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಈ ದೈನಸಿ ಸ್ಥಿತಿ ಬರಬಾರದಿತ್ತು. ಮೈಸೂರಿಗನಾಗಿ, ಕನ್ನಡಿಗನಾಗಿ ನನಗೆ ಸಿಎಂ ಸ್ಥಿತಿ ಕಂಡು ಬೇಸರವಾಗಿದೆ. ಇಂದಿರಾಗಾಂಧಿ, ಸೋನಿಯಾ ಗಾಂಧಿಯನ್ನೇ ಟೀಕೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಈಗ ಅವರ ಮೊಮ್ಮಗನ ಪಾದ ಪೂಜೆ ಮಾಡಲು ಸಿದ್ಧವಾಗಿರೋದು ಬೇಸರ ತಂದಿದೆ.
ಸಿಎಂ ಸಿದ್ದರಾಮಯ್ಯ ಅವರೇ ನೀವು ಹುಲಿಯಾನಾ ಇಲಿಯಾನಾ ಹೇಳಿ? ಕಳೆದ 2013ರಲ್ಲಿ ಸಿದ್ದರಾಮಯ್ಯ ಹುಲಿಯಾ ಆಗಿದ್ದರು. ಈಗ ಸಿದ್ದರಾಮಯ್ಯ ಇಲಿಯಾಗಿದ್ದಾರೆ. ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ ಎಂದು ಹೇಳಿದರು.
2013ರಲ್ಲಿ ಸಿದ್ದರಾಮಯ್ಯ ಹುಲಿಯಾಗಿದ್ದರು. ಈಗ ಇಲಿಯಾಗಿದ್ದಾರೆ. ಹಿಂದೆ ಇಂದಿರಾಗಾಂಧಿ, ಸೋನಿಯಾ ಗಾಂಧಿಯವರನ್ನೇ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಇಂದು ಅವರ ಮೊಮ್ಮಗನ ಪಾದಪೂಜೆ ಮಾಡಲು ಸಿದ್ಧವಾಗಿರುವುದು ನೋವಿನ ಸಂಗತಿ. ಸಿದ್ದರಾಮಯ್ಯನವರ ಮುಂದೆ ರಾಹುಲ್ ಗಾಂಧಿ ಒಬ್ಬ ಬಚ್ಚಾ. ಅಂಥವನ ಭೇಟಿಗಾಗಿ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆʼ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.
ಟಾಂಗಾ ಸಾಬಿ, ಜಟ್ಕಾ ಸಾಬಿಗಿಂತ ವಿದ್ಯಾವಂತ ಮುಸ್ಲಿಮರ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾದರೆ ಅವರನ್ನು ಪತ್ತೆಹಚ್ಚುವುದು ಹೇಗೆ ಎಂದು ಪ್ರಶ್ನಿಸಿದರು. ಭಾರತವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದನ್ನು ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದ್ದಾರೆಯೇ ಎಂದು ಸಿಂಹ ಪ್ರಶ್ನಿಸಿದರು.
ಸಿದ್ದರಾಮಯ್ಯನವರಂತಹ ನಾಯಕರು ಇರುವಾಗ ನಾವು ದೇಶದೊಳಗೆ ಇಂತಹ ಪರಿಸ್ಥಿತಿಯನ್ನು ಎದುರಿಸಲೇಬೇಕು. ಅವರ ಸರ್ಕಾರದ ಯೋಗ್ಯತೆಗೆ ಜೈಲಿನಲ್ಲಿರುವ ಭಯೋತ್ಪಾದಕನನ್ನೇ ಬಿಗಿಯಾಗಿ ಇಡಲು ಆಗುತ್ತಿಲ್ಲ. ಇನ್ನು ಇವರೇನು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದುʼ ಎಂದು ಕಿಡಿಕಾರಿದರು.
ಮುಸ್ಲಿಂ ವಿದ್ಯಾವಂತರೆ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಇದು ಬಹಳ ಅಪಾಯಕಾರಿ. ಮುಸ್ಲಿಂಮರ ಸಮಸ್ಯೆ ಬಡತನ ಅಲ್ಲ. ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೆ ಅವರ ಸಮಸ್ಯೆ. ವಿದ್ಯಾವಂತ ಮುಸ್ಲಿಂಮರು ಭಯೋತ್ಪಾದಕರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ಎಂದರು.
ಸಿದ್ದರಾಮಯ್ಯ ಸರ್ಕಾರದ ಯೋಗ್ಯತೆಗೆ ಜೈಲಿನಲ್ಲಿನ ಭಯೋತ್ಪಾದಕನನ್ನೆ ಬಿಗಿ ಹಿಡಿಯಲು ಆಗುತ್ತಿಲ್ಲ. ಇನ್ನೂ ಇವರೇನೂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡೋದು. ಯುಪಿಎ ಸರಕಾರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ. ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಒಳಗೆ ನಡೆದ ಮೊದಲ ದೊಡ್ಡ ಸ್ಫೋಟ ಇದು. ಭಾರತದ ಒಳಗಿನ ಮುಲ್ಲಾಗಳೇ ಈ ರೀತಿಯ ಸ್ಫೋಟಕ್ಕೆ ತಯಾರಾಗುತ್ತಿದ್ದಾರೆ. ಮೊದಲು ಭಾರತದೊಳಗೆ ಬಾಂಬ್ ಇಡಲು ಪಾಕಿಸ್ತಾನದಿಂದ ಬರುತ್ತಿದ್ದರು. ಈಗ ನಮ್ಮ ದೇಶದೊಳಗೆ ಇಂತವರು ತಯಾರಾಗಿದ್ದಾರೆ. ದೇಶದ ಒಳಗಡೆ ಇಡುವವರೆ ಬಾಂಬ್ ಇಡಲು ಹೊರಟರೆ ಮೋದಿ ಅದನ್ನು ತಡಿಯಲು ಆಗುತ್ತಾ? ಎಂದು ಪ್ರಶ್ನಿಸಿದರು.