ಡಿಕೆ.ಶಿವಕುಮಾರ್  
ರಾಜಕೀಯ

ವಿರೋಧಿ ಬಣದ ನಾಯಕರನ್ನು ಹೊಂಚುಹಾಕಿ, ಸಂಚು ರೂಪಿಸಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆ: ಡಿಕೆಶಿ ವಿರುದ್ಧ JDS ಕಿಡಿ

ಅಂದು ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಲಾಯಿತು. ಇಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಬ್ದುಲ್ ಜಬ್ಬರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಬೆಂಗಳೂರು: ಕುರ್ಚಿ ಆಸೆಗಾಗಿ ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚುಹಾಕಿ, ಸಂಚು ರೂಪಿಸಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

ಮುಸ್ಲಿಂ ನಾಯಕರನ್ನು ಅಮಾನತುಗೊಳಿಸಿರುವ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪೋಸ್ಟ್ ಮಾಡಿದ್ದು, ತೀವ್ರವಾಗಿ ಕಿಡಿಕಾರಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ಅನ್ಯಾಯ ನಡೆಯುತ್ತಿದೆ. ಅಂದು ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಲಾಯಿತು. ಇಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಬ್ದುಲ್ ಜಬ್ಬರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದಲ್ಲಿ ಎಲ್ಲವೂ ಸರಿಯಲ್ಲ. ಕುರ್ಚಿ ಆಸೆಗಾಗಿ ಡಿಕೆ.ಶಿವಕುಮಾರ್ ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚುಹಾಕಿ, ಸಂಚು ರೂಪಿಸಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆಂದು ಆರೋಪಿಸಿದೆ.

ಅಧ್ಯಕ್ಷರು ತಪ್ಪು ಮಾಡಿದರೆ ಕೇವಲ ಕ್ಷಮೆ ಕೇಳಿದರೆ ಸಾಕು, ಆದರೆ ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ನಾಯಕರಿಗೆ ಮಾತ್ರ ವಜಾ ಮತ್ತು ಉಚ್ಚಾಟನೆಯ ಶಿಕ್ಷೆ ನೀಡುತ್ತಾರೆ. ಹಣಬಲ, ತೋಳ್ಬಲದಿಂದ ಮೆರೆಯುತ್ತಿರುವ ಡಿಕೆಶಿ ಸ್ವಾರ್ಥಕ್ಕೆ ಕಾಂಗ್ರೆಸ್’ಗಾಗಿ ದುಡಿದ ತಳಮಟ್ಟದ ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರನ್ನು ಗುರಿಯಾಗಿಸಿ, ಅವರ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ಅಸಲಿ ಮುಖ ಎಂದು ಟೀಕೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಕ್ಷೇತ್ರ ಪುನರ್ ವಿಂಗಡಣೆ-ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಕುರಿತು ಚರ್ಚೆಗೆ 15 ಗಂಟೆ ನಿಗದಿ; ನಾಳೆ ಸಂಜೆ 4 ಗಂಟೆಗೆ ಮತದಾನ..!

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress MLA ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ!

ಯುದ್ಧದಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ: ಪಶ್ಚಿಮ ಏಷ್ಯಾ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿ ಕರೆ

'ಲವ್ ಜಿಹಾದ್' ಪ್ರಕರಣ: ಮುನ್ನೆಚ್ಚರಿಕೆ ಕ್ರಮವಾಗಿ TCS ನಾಸಿಕ್ ಕಚೇರಿಯ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ!

ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ: ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಜಮೀರ್ ವಿರುದ್ಧ ಕ್ರಮಕ್ಕೆ MLA ಹೆಚ್. ಸಿ. ಬಾಲಕೃಷ್ಣ ಒತ್ತಾಯ

SCROLL FOR NEXT