ಪ್ರಿಯಾಂಕ್ ಖರ್ಗೆ 
ರಾಜಕೀಯ

ಸಂಘದಿಂದ ಎರವಲು ಪಡೆದ Ai ಬಳಸುವುದಕ್ಕಿಂತ Oi ಬಳಸಿದರೆ BJP ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು: JDS ಕುರಿತು ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪುರುಷರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಿಕ್ಕಿಂತ ಪರೀಕ್ಷೆಯಲ್ಲಿ 85% ಫಲಿತಾಂಶ ಪಡೆಯುವುದು ಹೆಚ್ಚು ಗೌರವದ ವಿಷಯ. ಅಂದಹಾಗೆ, ನಿಮ್ಮ "ಕುಟುಂಬ"ಕ್ಕೆ ಅಭಿನಂದನೆಗಳು, ನಾನು ಹೇಳಿದ ಮೊದಲನೆಯ ವಿಷಯದಲ್ಲಿ ನಂ1 ಆಗಿರುವುದಕ್ಕೆ.

ಬೆಂಗಳೂರು: ಸಂಘದಿಂದ ಎರವಲು ಪಡೆದ ಎಐ ಬಳಸುವುದಕ್ಕಿಂತ ಒಐ (ಒರಿಜಿನಲ್ ಇಂಟೆಲಿಜೆನ್ಸ್) ಬಳಸಿದರೆ ಬಿಜೆಪಿಯ ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು ಎಂದು ಜೆಡಿಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.

ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಜೆಡಿಎಸ್ ವ್ಯಂಗ್ಯವಾಡಿತ್ತು.

​​SSLC ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ಸಾಲಿನಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ.

ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್​​ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್‌ ಎಂದು ವ್ಯಂಗ್ಯವಾಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆಯವರು, ಪುರುಷರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಿಕ್ಕಿಂತ ಪರೀಕ್ಷೆಯಲ್ಲಿ 85% ಫಲಿತಾಂಶ ಪಡೆಯುವುದು ಹೆಚ್ಚು ಗೌರವದ ವಿಷಯ. ಅಂದಹಾಗೆ, ನಿಮ್ಮ "ಕುಟುಂಬ"ಕ್ಕೆ ಅಭಿನಂದನೆಗಳು, ನಾನು ಹೇಳಿದ ಮೊದಲನೆಯ ವಿಷಯದಲ್ಲಿ ನಂ1 ಆಗಿರುವುದಕ್ಕೆ. ಸಂಘದಿಂದ ಎರವಲು ಪಡೆದ Ai ಬಳಸುವುದಕ್ಕಿಂತ Oi - (ಒರಿಜಿನಲ್ ಇಂಟೆಲಿಜೆನ್ಸ್) ಬಳಸಿದರೆ ಜೆಡಿಎಸ್ ಬಿಜೆಪಿಯ ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಲಿಲ್ಲ-ಮಾತನಾಡಲಾಗುತ್ತಿಲ್ಲ, ತೀವ್ರವಾಗಿ ಸುಟ್ಟು ಹೋದ ಖಮೇನಿ ಮುಖ; ಇರಾನ್ ಪರಮೋಚ್ಛ ನಾಯಕನ ಆರೋಗ್ಯದ ಬಗ್ಗೆ ಬಿಗ್​ ಅಪ್ಡೇಟ್​..!

ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆ

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

SCROLL FOR NEXT