ಶಾಸಕ ಹೆಚ್.ಸಿ. ಬಾಲಕೃಷ್ಣ ಸಾಂದರ್ಭಿಕ ಚಿತ್ರ 
ರಾಜಕೀಯ

ಬೇರೆ ನಾಯಕರ ರೀತಿ ಡಿಕೆಶಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ರೆ ಇಷ್ಟೊತ್ತಿಗೆ ಎಲ್ಲಿರ್ತಿದ್ರೋ ಗೊತ್ತಿಲ್ಲ: ಶಾಸಕ ಹೆಚ್.ಸಿ ಬಾಲಕೃಷ್ಣ

ಡಿಸಿಎಂ ಡಿ.ಕೆ ಶಿವಕುಮಾರ್, ಬೇರೆ ನಾಯಕರ ರೀತಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ರೆ, ಇಷ್ಟೊತ್ತಿಗೆ ಎಲ್ಲಿರ್ತಿದ್ರೋ ಗೊತ್ತಿಲ್ಲ ಎಂದು ಮಾಗಡಿ ಶಾಸಕ ಹೆಚ್‌.ಸಿ ಬಾಲಕೃಷ್ಣ ಹೇಳಿದ್ದಾರೆ.

ರಾಮನಗರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಿನ ವಾಗ್ವಾದ ಜೋರಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್, ಬೇರೆ ನಾಯಕರ ರೀತಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ರೆ, ಇಷ್ಟೊತ್ತಿಗೆ ಎಲ್ಲಿರ್ತಿದ್ರೋ ಗೊತ್ತಿಲ್ಲ ಎಂದು ಮಾಗಡಿ ಶಾಸಕ ಹೆಚ್‌.ಸಿ ಬಾಲಕೃಷ್ಣ ಹೇಳಿದ್ದಾರೆ. ಈ ಮೂಲಕ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಯಾವುದಕ್ಕೂ ರಾಜಿಯಾಗದೇ ಕಾಂಗ್ರೆಸ್ ನಲ್ಲೇ ಉಳಿದಿದ್ದಾರೆ. ಪಕ್ಷಕ್ಕೋಸ್ಕರ ತ್ಯಾಗ ಮಾಡಿದ್ದಾರೆ, ಪಕ್ಷಕ್ಕೋಸ್ಕರ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.

ಹಿಂದೆ ಸ್ವತಂತ್ರವಾಗಿ ಗೆದ್ದಾಗ ಜನತಾದಳ ಸರ್ಕಾರ ಇತ್ತು. ಆಗಲೂ ಎಲ್ಲೂ ಹೋಗದೇ ಕಾಂಗ್ರೆಸ್ ನಲ್ಲಿ ಉಳಿದುಕೊಂಡರು. ಹಾಗಾಗಿ ನಮ್ಮ ನಾಯಕರಿಗೂ ಅವಕಾಶ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡುತ್ತೇವೆ. ಡಿಕೆಶಿ ಸಿಎಂ ಆದ್ರೆ ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗುತ್ತೆ ಎನ್ನುವ ಸ್ವಾರ್ಥ ಇದೆ ಎಂದರು.

ಇನ್ನೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ವಿಚಾರ ಕುರಿತು‌ ಮಾತನಾಡಿದ ಬಾಲಕೃಷ್ಣ, ಯಾವ ವಿಚಾರಕ್ಕೆ ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ಎಲ್ಲೋ ಸಿಕ್ಕಿದಾಗ ಮಾತನಾಡೋದು ಸಹಜ. ಮನೆಗೆ ಹೋಗಿ ಭೇಟಿ ಮಾಡಿದ್ರೆ ಅದಕ್ಕೆ ಒಂದು ಅರ್ಥ ಇದೆ. ಕಚೇರಿಯಲ್ಲಿ, ರೋಡಲ್ಲಿ, ಮದುವೆಲಿ ಸಿಕ್ಕಿದಾಗ ಮಾತಾಡೋದ್ರಲ್ಲಿ ವಿಶೇಷ ಏನಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ನೌಕೆಗಳನ್ನು ಅತ್ಯುತ್ತಮ ಶಸ್ತ್ರಾಸ್ತ್ರಗಳಿಂದ ತುಂಬುತ್ತಿದ್ದೇವೆ; ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ- ಮಾತುಕತೆಗೂ ಮುನ್ನ ಟ್ರಂಪ್ ಬೆದರಿಕೆ!

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!

ಅಪರಿಚಿತ ದೆವ್ವಕ್ಕಿಂತ ಪರಿಚಿತ ದೆವ್ವವೇ ವಾಸಿ! ಇರಾನ್ ಹೊಸ ಆಡಳಿತ ಹಳೆಯದ್ದಕ್ಕಿಂತ ಕ್ರೂರ: 40 ದಿನಗಳ ಬಳಿಕ ಇಸ್ರೇಲ್ ಹೀಗೆ ಹೇಳಿದ್ದೇಕೆ?

SCROLL FOR NEXT