ಡಿ ಕೆ ಶಿವಕುಮಾರ್  
ರಾಜಕೀಯ

'ಚುನಾವಣೆಯಲ್ಲಿ ನಿಮಗೆ ಬುದ್ಧಿ ಕಲಿಸ್ತೀವಿ ಅಂತಾರೆ, ಯಾರು ಬುದ್ಧಿ ಕಲಿಸ್ತಾರೆ? ದೇವರು ನನಗೆ ಅಧಿಕಾರ ಕೊಟ್ಟಿದ್ದಾನೆ': DK ಶಿವಕುಮಾರ್; Video

ಯಾವಾಗಲೂ ಪಾಸಿಟಿವ್ ವಿಚಾರಗಳನ್ನೇ ನೋಡುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಾವಿಲ್ಲಿದ್ದೇವೆ, ನಾವು ಅದನ್ನ ಮಾಡುತ್ತೇವೆ. ನಿಮಗೆ ಸಮಸ್ಯೆಯಾಗಲು ನಾವು ಬಯಸುವುದಿಲ್ಲ. ನೀವು ಜೀವನವಿಡೀ ಕಷ್ಟಪಟ್ಟು ದುಡಿದು ಸಂಪಾದಿಸಿದ ಆಸ್ತಿಯನ್ನು ಉಳಿಸಿಕೊಳ್ಳಲು ನಾವು ನೆರವಾಗುತ್ತೇವೆ ಎಂದರು.

ಕೆಲವರಿಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ, ನೀವು ನಮ್ಮ ಕೆಲಸ ಮಾಡಿಕೊಟ್ಟಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ಧಿ ಕಲಿಸ್ತೀವಿ ಅಂತಾರೆ, ಯಾರು ಬುದ್ಧಿ ಕಲಿಸ್ತಾರೆ? ಜನರಿಗೆ ಸಹಾಯ ಮಾಡಲು ನನಗೆ ದೇವರು ಅಧಿಕಾರ ಕೊಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್ (Ownership and Management) ಮಸೂದೆ-2026 ಕುರಿತು ನಡೆದ ಸಮಾಲೋಚನಾ ಸಭೆಯ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ನೆಗೆಟಿವ್ ವಿಚಾರಗಳನ್ನು ನೋಡುವುದಿಲ್ಲ, ಯಾವಾಗಲೂ ಪಾಸಿಟಿವ್ ವಿಚಾರಗಳನ್ನೇ ನೋಡುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಾವಿಲ್ಲಿದ್ದೇವೆ, ನಾವು ಅದನ್ನ ಮಾಡುತ್ತೇವೆ. ನಿಮಗೆ ಸಮಸ್ಯೆಯಾಗಲು ನಾವು ಬಯಸುವುದಿಲ್ಲ. ನೀವು ಜೀವನವಿಡೀ ಕಷ್ಟಪಟ್ಟು ದುಡಿದು ಸಂಪಾದಿಸಿದ ಆಸ್ತಿಯನ್ನು ಉಳಿಸಿಕೊಳ್ಳಲು ನಾವು ನೆರವಾಗುತ್ತೇವೆ ಎಂದರು.

ಬೆಂಗಳೂರಿನಂಥ ನಗರದಲ್ಲಿ ಸ್ವಂತಕ್ಕೊಂದು ಸೂರು ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇಡೀ ಪ್ರಪಂಚ ಬೆಂಗಳೂರು ನೋಡ್ತಾ ಇದೆ, ಮುಂಬೈ, ಡೆಲ್ಲಿಯಂಥಹ ದೊಡ್ಡ ಸಿಟಿಗಳಲ್ಲಿರುವ ಆಸ್ತಿ, ಮನೆ ಮಾರಿಕೊಂಡು ಬೆಂಗಳೂರಿನ ಸಂಸ್ಕೃತಿ, ಹವಾಮಾನ, ಶಿಕ್ಷಣ, ಉದ್ಯೋಗಾವಕಾಶಗಳಿಗೆ ಮನಸೋತು ಇಲ್ಲಿಗೆ ಬರುತ್ತಾರೆ. ಅಲ್ಲಿ 20-25 ಕೋಟಿಗೆ ನೀಡಬೇಕಾದ ಮನೆಗೆ ಬೆಂಗಳೂರಿನಲ್ಲಿ 2ರಿಂದ 5 ಕೋಟಿಗೆ ಸಿಗುತ್ತದೆ, ಇದು ಬೆಂಗಳೂರು ನಗರದ ಅನುಕೂಲ, ಸೌಂದರ್ಯ ಎಂದು ಡಿ ಕೆ ಶಿವಕುಮಾರ್ ಹೊಗಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

ಹಗ್ಗ 16 ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆ: ಏನೋ ದಬಾಕಕ್ಕೆ ಹೋಗವನೆ, ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು; ಯಶ್ ತಾಯಿ

ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ವಿಳಂಬ; ಸರ್ಕಾರದ ವಿರುದ್ಧ AIDSO ಆಕ್ರೋಶ

2027ರ ಏಕದಿನ ವಿಶ್ವಕಪ್‌ಗೆ ಬ್ಯಾಕಪ್ ಆಟಗಾರನಿಗಾಗಿ ಹುಡುಕಾಟ; ಗೌತಮ್ ಗಂಭೀರ್, ಶುಭಮನ್ ಗಿಲ್ ಗಮನಸೆಳೆದ ತಿಲಕ್ ವರ್ಮಾ!