ಎಚ್ ಡಿ ಕುಮಾರಸ್ವಾಮಿ 
ರಾಜಕೀಯ

'120 ಸೀಟು ಗೆದ್ದು ತೋರಿಸೋ ದಿನ ಬರುತ್ತೆ: ಅಷ್ಟು ಸುಲಭವಾಗಿ ನಾನು ಸಾಯಲ್ಲ; ತಮಿಳುನಾಡಿನಲ್ಲಿ DMK ತಲೆ ಮೇಲೆ ಕೈ ಇಟ್ರಿ- ಬಿಹಾರದಲ್ಲಿ‌ ಎಲ್ಲಿಗೆ ಬಂದು ನಿಂತಿದ್ದೀರಾ?'

ಪ್ರಾದೇಶಿಕ ಪಕ್ಷ ಉಳಿಯೋದು‌ ಎಷ್ಟು ಕಷ್ಟ ಅಂತ ಗೊತ್ತಿದೆ. 18 ಸ್ಥಾನ ಗೆದ್ದು ಇನ್ನೂ ಉಳಿದಿದ್ದೇವೆ. ನಿಮ್ಮ ಕಾಂಗ್ರೆಸ್ ‌ಪರಿಸ್ಥಿತಿ ಏನಾಗಿದೆ? ಬಂಗಾಳದಲ್ಲಿ ಏನ್‌ ಆಯ್ತು? ಕಾಂಗ್ರೆಸ್ 100 ವರ್ಷಗಳ ಪಕ್ಷ, ತಮಿಳುನಾಡಿನಲ್ಲಿ ಡಿಎಂಕೆ ತಲೆ ಮೇಲೆ ಕೈ ಇಟ್ರಿ.

ಬೆಂಗಳೂರು: ಜೆಡಿಎಸ್‌ 120 ಸ್ಥಾನ ಪಡೆಯುವ ಕಾಲವೂ ಬರುತ್ತೆ, ಅಲ್ಲಿಯವರೆಗೂ ನಾನೇನು ಸಾಯೋದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು.

ಕುಮಾರಸ್ವಾಮಿ 120 ಸ್ಥಾನ ಗೆದ್ದು ತೋರಿಸಲಿ ಎಂಬ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 20 ವರ್ಷಗಳಿಂದ ಟೀಕೆ ‌ಮಾಡ್ತಾನೇ ಇದ್ದಾರೆ. ನನ್ನ ವಿರುದ್ಧ ವಿಷ ಕಾರುತ್ತಾರೆ. ನೋಡೋಣ 120 ಸೀಟು ಗೆದ್ದು ತೋರಿಸೋ ದಿನ ಬರುತ್ತದೆ. ಅಲ್ಲಿವರೆಗೂ ‌ನಾನೇನು ಸಾಯಲ್ಲ ಎಂದರು.

ಪ್ರಾದೇಶಿಕ ಪಕ್ಷ ಉಳಿಯೋದು‌ ಎಷ್ಟು ಕಷ್ಟ ಅಂತ ಗೊತ್ತಿದೆ. 18 ಸ್ಥಾನ ಗೆದ್ದು ಇನ್ನೂ ಉಳಿದಿದ್ದೇವೆ. ನಿಮ್ಮ ಕಾಂಗ್ರೆಸ್ ‌ಪರಿಸ್ಥಿತಿ ಏನಾಗಿದೆ? ಬಂಗಾಳದಲ್ಲಿ ಏನ್‌ ಆಯ್ತು? ಕಾಂಗ್ರೆಸ್ 100 ವರ್ಷಗಳ ಪಕ್ಷ, ತಮಿಳುನಾಡಿನಲ್ಲಿ ಡಿಎಂಕೆ ತಲೆ ಮೇಲೆ ಕೈ ಇಟ್ರಿ. ಪಂಜಾಬ್, ಬಿಹಾರದಲ್ಲಿ‌ ಎಲ್ಲಿಗೆ ಬಂದು ನಿಂತಿದ್ದೀರಾ? ನನ್ನದು ಸಣ್ಣ ಪಕ್ಷ 18 ಸ್ಥಾನ ಗೆದ್ದಿದ್ದೇನೆ. ನಿಮ್ಮ ಸ್ಥಾನ ಎಷ್ಟಿದೆ ನೋಡಿಕೊಳ್ಳಿ ಅಂತ ಲೇವಡಿ ಮಾಡಿದ್ರು.

120 ಸ್ಥಾನ ಗೆಲ್ಲುವ ದಿನ ಬರುತ್ತದೆ. ರಾಜ್ಯದ ಜನ ಎಷ್ಟು ದಿನ ಅಂತ ಇವರನ್ನು ಸಹಿಸಿಕೊಳ್ತಾರೆ? 120 ಸ್ಥಾನ ಗೆದ್ದು ತೋರಿಸುವ ದಿನವೂ ಬರಲಿದೆ ಅಂತ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ‌ತಿರುಗೇಟು ಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delimitation ಪರಿಷ್ಕೃತ ಮಸೂದೆ ವಿವಾದ: ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ..!

'ಟೈ ಧರಿಸಿಲ್ಲ' ಎಂದು 'ಕಾಲು ಮುಟ್ಟಿ ಕ್ಷಮೆ ಕೇಳಿ ಅಂದ್ರು': ಕಂಪನಿ ಘನತೆಗೆ ಮಸಿ ಬಳಿಯುವ ಪ್ರಯತ್ನ; ಮಾಜಿ ಉದ್ಯೋಗಿ ಆರೋಪ ತಳ್ಳಿ ಹಾಕಿದ IndiGo

ಬೆಂಗಳೂರಿನ HMT ಭೂಮಿ ಲಪಟಾಯಿಸಿದವರು ಯಾರು? "ಧೈರ್ಯವಿದ್ದರೆ ಆ ಗಗನಚುಂಬಿ ಕಟ್ಟಡಗಳ ಮುಟ್ಟುಗೋಲು ಹಾಕಿ": ರಾಜ್ಯ ಸರ್ಕಾರಕ್ಕೆ HDK ಸವಾಲು..!

ಸಂಪುಟ ವಿಸ್ತರಣೆ ಸರ್ಕಸ್: ಸಚಿವರ ಪಟ್ಟಿ ಬಹುತೇಕ ಫೈನಲ್; 'ಲಕ್ಷ್ಮಿ'ಗೂ ಜಾಕ್‌ಪಾಟ್ ಸಾಧ್ಯತೆ!

Puri Rath Yatra: ಭಾರಿ ಜನಸಾಗರ; ಕಾಲ್ತುಳಿತ ಓರ್ವ ಸಾವು, ನೂರಾರು ಮಂದಿಗೆ ಗಾಯ!