ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಮತ್ತು ಬಾಲಕೃಷ್ಣ 
ರಾಜಕೀಯ

ಶೋಭಕ್ಕ ಬಿಡದಿ ಟೌನ್ ಶಿಪ್ ಗೆ ಟೆಂಡರ್ ಕರೆದಿದ್ದು ನಿಮ್ಮ 'ಯಜಮಾನ'; ನನ್ನ ಆಶಯವನ್ನು ಅರ್ಥೈಸಿಕೊಳ್ಳಿ: ಎಚ್.ಸಿ ಬಾಲಕೃಷ್ಣ

ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಹೇಳಿಕೆಯ ಆಶಯವನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.

ಬೆಂಗಳೂರು: ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭ ಕರಂದ್ಲಾಜೆ ಅವರನ್ನ ಅತ್ಯಂತ ಗೌರವದಿಂದ ಶೋಭಕ್ಕ ಎಂದು ಸಂಭೋದಿಸಿದ್ದೇನೆ. ಬಿಡದಿಟೌನ್ ಶಿಪ್ ಯೋಜನೆಗೆ 2010 ರಲ್ಲಿ ಟೆಂಡರ್ ಕರೆದಿದ್ದು ನಿಮ್ಮ ಯಜಮಾನ, ನಿಮ್ಮ ಸಾಹೇಬ ಎಂದು ಉಲ್ಲೇಖಿಸಿದ್ದೆ ಎಂದಿದ್ದಾರೆ.

ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಅವರನ್ನು ಗುರುತಿಸಿ ಸಚಿವೆಯನ್ನಾಗಿ ಮಾಡಿ ರಾಜಕೀಯದಲ್ಲಿ ಉನ್ನತ ಸ್ಥಾನ ನೀಡಿ ಬೆಳೆಸಿದ ನಾಯಕರು ಯಡಿಯೂರಪ್ಪ ಅವರು ಎಂಬ ರಾಜಕೀಯ ಹಿನ್ನೆಲೆಯ ಉದ್ದೇಶದಿಂದ ಮಾತ್ರ ಸಾಹೇಬ, ಯಜಮಾನ ಎಂಬ ಪದಗಳನ್ನು ಬಳಸಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಹೇಳಿಕೆಯ ಆಶಯವನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ ಶಾಸಕ ಎಚ್‌.ಸಿ.ಬಾಲಕೃಷ್ಣ ಸುದ್ದಿಗೋಷ್ಠಿಯೊಂದರಲ್ಲಿ ಬಿಡದಿ ಟೌನ್‌ಶಿಪ್‌ ಹೋರಾಟದ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ತೀರಾ ಲಘು ಭಾಷೆಯಲ್ಲಿ ಮಾತನಾಡಿದ್ದು, ಇದು ಅವರ ಅಸಭ್ಯತನದ ಪರಮಾವಧಿ‌ ಮತ್ತು ಮಹಿಳೆಯರಿಗೆ ಅಗೌರವ ತೋರುವ ಕಾಂಗ್ರೆಸ್‌ನ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ ಎಂದಿದ್ದಾರೆ.

ಬಾಲಕೃಷ್ಣ ಅವರ ಮಾತುಗಳು ಮಹಿಳೆಯರಿಗೆ ಅಗೌರವ ತೋರುವ ಕಾಂಗ್ರೆಸ್ ಪಕ್ಷದ ಅಪ್ಪಟ ಸಂಸ್ಕೃತಿಯನ್ನು ಮತ್ತೆ ಅನಾವರಣಗೊಳಿಸಿದೆ ಎಂದಿದ್ದಾರೆ. ಮಹಿಳಾ ಜನಪ್ರತಿ ನಿಧಿಯೊಬ್ಬರನ್ನು ಏಕವಚನದಲ್ಲಿ ನಿಂದಿಸುತ್ತ ಸಂವೇದನಾರಹಿತ, ದರ್ಪದ ಮಾತನಾಡಿರುವ ಬಾಲಕೃಷ್ಣ ಈ ಕೂಡಲೇ ಮಹಿಳಾ ಸಮುದಾಯದ ಕ್ಷಮೆಯಾಚಿಸಬೇಕು ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!