ಮೋದಿ, ಅಶೋಕ್ ಮತ್ತು ಪ್ರದೀಪ್ ಈಶ್ವರ್ 
ರಾಜಕೀಯ

'ಪುಂಖಾನುಪುಂಖವಾಗಿ ರೀಲ್ ಬಿಡೊ ತೇಜಸ್ವಿ-ಸೂಲಿಬೆಲೆ ಎಲ್ಲೊದ್ರಿ ಗುರು? ಚರಿಷ್ಮಾ ಕಳೆದುಕೊಂಡು ಒಬ್ಬ ವ್ಯಕ್ತಿ ಪರ ನಿಂತಿರುವ ಮೋದಿ; ನಾಲಾಯಕ್ ಅಶೋಕಣ್ಣ'

ತೇಜಸ್ವಿ ಸೂರ್ಯ ನಿಮಗೆ ಕಾಳಜಿ ಇಲ್ವಾ, ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ. ಯಾಕೆ ಬಾಯಿ ಮುಚ್ಚಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪುಂಖಾನುಪುಂಖವಾಗಿ ರೀಲ್ ಬಿಡ್ತಿದ್ದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಅಡ್ರೆಸ್ ಗೆ ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೇಜಸ್ವಿ ಸೂರ್ಯ ನಿಮಗೆ ಕಾಳಜಿ ಇಲ್ವಾ, ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ. ಯಾಕೆ ಬಾಯಿ ಮುಚ್ಚಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಮೋದಿ ಮತ್ತು ಬಿಜೆಪಿ ಅವರ ನಾಯಕರ ಅವನತಿ ಆರಂಭವಾಗಿದೆ. ನಾವು ವಿದ್ಯಾರ್ಥಿಗಳ ಪರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ನೀವು ನಮ್ಮ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕ್ತೀರಾ, ನಮ್ಮ ಮೇಲೆ ಮೊಟ್ಟೆ ಎಸೆಯುತ್ತೀರಾ. ಚಪ್ಪಲಿ, ಪೊರಕೆ ಎಸೆಯುವುದು ಬಿಜೆಪಿಯವರ ಸಂಸ್ಕೃತಿ ಎಂದಿದ್ದಾರೆ.

ವಿರೋಧ ಪಕ್ಷದ ನಾಯಕರು ಕೋತಿಗಳ ತರ ಆಡಬೇಡಿ, ವಿದ್ಯಾರ್ಥಿಗಳ ವಿಷಯವಾಗಿ ರಾಜಕೀಯ ಮಾಡಬೇಡಿ. ಈ ರಾಜ್ಯದ ಜನ ನಿಮ್ಮನ್ನ ಅದೇ ಪೊರಕೆಯಲ್ಲಿ ಗುಡಿಸುತ್ತಿದ್ದಾರೆ. ಮೋದಿಯವರು ತಮ್ಮ ಚರಿಷ್ಮಾ ಕಳೆದು ಕೊಂಡು ಒಬ್ಬ ವ್ಯಕ್ತಿ ಪರ ನಿಂತಿದ್ದಾರೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ನಾಲಾಯಕ್ ಅಶೋಕಣ್ಣ, ನಾಲಾಯಕ್ ನಾರಾಯಣಸ್ವಾಮಿ ಅಣ್ಣ ನಂತರವರು ವಿರೋಧ ಪಕ್ಷದಲ್ಲಿ ಕೂತರೆ ರಾಜ್ಯದ ಪರಿಸ್ಥಿತಿ ಹೀಗೆ ಆಗುತ್ತದೆ. 20 ಮಕ್ಕಳು ಸತ್ತಿದ್ದಾರೆ. ಶೋಭಕ್ಕ ಬಾಯಿ ತೆಗೆಯಕ್ಕ ಎಂದು ಲೇವಡಿ ಮಾಡಿದ್ದಾರೆ. ನೀಟ್ ವಿಚಾರವಾಗಿ ಚರ್ಚಿಸಲು ನಾನು ಬಿಜೆಪಿ ನಾಯಕರನ್ನು ಬಹಿರಂಗವಾಗಿ ಆಹ್ವಾನಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ನಾನು ದೆಹಲಿಗೆ ಹೋಗಿಲ್ಲ, ಲಾಭಿ ಮಾಡಿಲ್ಲ, ನನಗೆ ಸಚಿವ ಸ್ಥಾನ ಕೊಟ್ರೆ ಸಂತೋಷ, ಇಲ್ಲದಿದ್ದರೆ ತೊಂದರೆ ಇಲ್ಲ. ಕಾಂಗ್ರೆಸ್ ನಲ್ಲಿ ಅನೇಕ ಯುವಕರು ಇದ್ದಾರೆ, ಅವರೆಲ್ಲ ಅರ್ಹರಿದ್ದಾರೆ. ನಾನು ಕಾಂಗ್ರೆಸ್ ಸಿದ್ದಾಂತ ನಂಬಿಕೊಂಡು ಬಂದವನು, ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನಾನು ಕಸ ಗುಡಿಸೋಕು ಕೆಡಿ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video