ರಾಜಕೀಯ

'ಮುಖ ಬದಲಾಗಿದೆ ಲೂಟಿ ಮುಂದುವರೆಯಲಿದೆ': AI ವಿಡಿಯೋ ಹಂಚಿಕೊಂಡು ಡಿ.ಕೆ ಶಿವಕುಮಾರ್ ಅಣಕಿಸಿದ ಬಿಜೆಪಿ!

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಮುಖ ಬದಲಾಗಿದೆ ಲೂಟಿ ಮುಂದುವರೆಯಲಿದೆ ಎಂಬ ಶೀರ್ಷಿಕೆಯಡಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ AI ವಿಡಿಯೋ ಹಂಚಿಕೊಂಡಿದ್ದು, ಲೇವಡಿ ಮಾಡಿದೆ.

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ಸಜ್ಜಾಗಿರುವಂತೆಯೇ ಪ್ರತಿಪಕ್ಷ ಬಿಜೆಪಿ AI ವಿಡಿಯೋ ಹಂಚಿಕೊಂಡು ಅವರನ್ನು ಅಣಕಿಸಿದೆ.

ಹೌದು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಮುಖ ಬದಲಾಗಿದೆ ಲೂಟಿ ಮುಂದುವರೆಯಲಿದೆ ಎಂಬ ಶೀರ್ಷಿಕೆಯಡಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ AI ವಿಡಿಯೋ ಹಂಚಿಕೊಂಡಿದ್ದು, ಲೇವಡಿ ಮಾಡಿದೆ. ಮಳೆ ನೀರಿನ ಮಧ್ಯೆ ನಿಂತ ಕಾರಿನಿಂದ ಕೆಸರು ನೀರಿಗೆ ಹಾರಿ ಡಿಕೆ ಬ್ರದರ್ಸ್ ಈಜುವುದು ವಿಡಿಯೋದಲ್ಲಿದೆ.

ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ ಬೇಕು, ಆದರೆ ಅವರ ಬದುಕಿಗೆ ಮೂಲಸೌಕರ್ಯ ಬೇಡವೇ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು, ಅದೇ ದಲಿತ ಸಮುದಾಯವನ್ನು ಅತ್ಯಂತ ದಯನೀಯ ಸ್ಥಿತಿಗೆ ತಳ್ಳಿರುವ ಹೆಗ್ಗಳಿಕೆ ಈ ಕಾಂಗ್ರೆಸ್ ಸರ್ಕಾರದ್ದು! ಮೂಲಸೌಕರ್ಯಗಳಿಲ್ಲದೆ ದಲಿತರು ಪರದಾಡುತ್ತಿದ್ದರೂ, ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಟೀಕಿಸಿದೆ.

ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದಲಿತರನ್ನು ಬಳಸಿಕೊಂಡು, ಇಂದು ಅವರ ಹಕ್ಕುಗಳು ಹಾಗೂ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಬಲಿಕೊಟ್ಟಿರುವುದು ದಲಿತ ವಿರೋಧಿ ನೀತಿಯನ್ನು ಸ್ಪಷ್ಟಪಡಿಸುತ್ತದೆ ಎಂದು ಟೀಕಾ ಪ್ರಹಾರ ನಡೆಸಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಮುಂಗಾರಿನ ಸಿದ್ಧತೆಯಲ್ಲಿರುವ ಅನ್ನದಾತರಿಗೆ ಸಮರ್ಪಕ, ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಮತ್ತೊಂಡೆದೆ, ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಕೃಷಿಕರಿಗೆ ಪರಿಹಾರ ನೀಡದೆ ರೈತವಿರೋಧಿ ಕಾಂಗ್ರೆಸ್ ದ್ರೋಹ ಬಗೆದಿದೆ. ಕಾಂಗ್ರೆಸ್‌ಗೆ ರೈತರೆಂದರೇ ಅಸಡ್ಡೆ, ಇಂತಹ ಮನಸ್ಥಿತಿಯ ಸರ್ಕಾರ ತೊಲಗುವವರೆಗೂ ಕೃಷಿಕರಿಗೆ ನೆಮ್ಮದಿ ಇಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್‌ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು 'BRICS' ಒಕ್ಕೂಟ ಸ್ಥಾಪನೆ: Iran

ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್, ತ್ರಿಶಾ ಕೃಷ್ಣನ್! ದಳಪತಿ ಫ್ಯಾನ್ಸ್ ಫುಲ್ ಖುಷ್, Video