ರವಿ ಕುಮಾರ್ ಗಣಿಗ 
ರಾಜಕೀಯ

ಟಿಶ್ಯೂ ಪೇಪರ್​ ತರ ಯೂಸ್ ಮಾಡಿ ಬಿಸಾಡಿದ್ರು: ಚಪ್ಪಡಿ ಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ರು; ರವಿ ಕುಮಾರ್ ಗಣಿಗ

ಟಿಶ್ಯೂ ಪೇಪರ್​ ತರ ಯೂಸ್ ಮಾಡಿ ಬಿಸಾಕೋದೆ ಬಿಜೆಪಿ ಕೆಲಸ. ಜೆಡಿಎಸ್​ಗೆ ಬಿಸ್ಕೆಟ್​​ ತರ ಕೇಂದ್ರ ಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ರು. ಇದೀಗ ಬಿಜೆಪಿಯವರು ಮಂಡ್ಯಕ್ಕೆ ಚಪ್ಪಡಿಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ : ಬಿಜೆಪಿ ರಾಜ್ಯಸಭಾ ಟಿಕೆಟ್ ಘೋಷಣೆ ಬಳಿಕ ಒಕ್ಕಲಿಗರಿಗೆ ಅನ್ಯಾಯವಾಗ್ತಿದೆ ಎನ್ನುವ ಕೂಗು ಕೇಳಿ ಬರ್ತಿದೆ. ಕ್ಷೇತ್ರವನ್ನೇ ತ್ಯಾಗ ಮಾಡಿದ ಸುಮಲತಾ ಅಂಬರೀಷ್​ ಅವರಿಗೆ ರಾಜ್ಯಸಭಾ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಟಿಶ್ಯೂ ಪೇಪರ್​ ತರ ಯೂಸ್ ಮಾಡಿ ಬಿಸಾಕೋದೆ ಬಿಜೆಪಿ ಕೆಲಸ. ಜೆಡಿಎಸ್​ಗೆ ಬಿಸ್ಕೆಟ್​​ ತರ ಕೇಂದ್ರ ಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ರು. ಇದೀಗ ಬಿಜೆಪಿಯವರು ಮಂಡ್ಯಕ್ಕೆ ಚಪ್ಪಡಿಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ ಜನರಿಗೆ ಅಂಬರೀಶಣ್ಣನ ಕುಟುಂಬ ಮತ್ತು ದೇವೇಗೌಡರ ಮೇಲೆ ಅಪಾರ ಪ್ರೀತಿ ಇದೆ. ನಿಖಿಲ್ ಕುಮಾರಸ್ವಾಮಿ ಅವರನ್ನ ಎಂಪಿ ಚುನಾವಣೆಗೆ ನಿಲ್ಲಿಸಿದ್ರು. ಅವ್ರ ವಿರುದ್ದ ಸುಮಲತಾ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಅಂದಿನ ಮುಖ್ಯಮಂತ್ರಿ ಮಗನ ವಿರುದ್ದ ಗೆಲ್ಲೋದು ಸುಲಭವಲ್ಲ. ಆದ್ರೂ ಸ್ವತಂತ್ರವಾಗಿ ಸುಮಲತಾ ಅಂಬರೀಶ್ ಗೆದ್ದಿದ್ದರು.

ಬಿಜೆಪಿ ಸೇರಿದ ಬಳಿಕ ಮಾಜಿ ಸಂಸದೆ ಸುಮಲತಾ ಅವರು ತ್ಯಾಗಮಯಿಯಂತೆ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟರು. ಕಾಂಗ್ರೆಸ್​​ ಸೇರಿದ್ರೆ ನಮ್ಮ ಪಕ್ಷದಿಂದ ನಿಲ್ತಿದ್ರು. ಆದರೆ ಬಿಜೆಪಿ ಸೇರಿದ್ದರಿಂದ ತ್ಯಾಗ ಮಾಡಬೇಕಾಯಿತು. ಬಿಜೆಪಿ ಅಂಬರೀಶಣ್ಣನ ಕುಟುಂಬಕ್ಕೆ ರಾಜ್ಯಸಭೆ ಟಿಕೆಟ್ ಕೊಡದೆ, ದೇವೇಗೌಡರಿಗೆ ಕೊಡದೆ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಗಣಿಗ ರವಿಕುಮಾರ್ ಅವರು ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ, ‘ಒಗ್ಗಟ್ಟೇ ನಮ್ಮ ಶಕ್ತಿ’ ಎಂದ ಮಲ್ಲಿಕಾರ್ಜುನ ಖರ್ಗೆ..!

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತಾ?: 3 ಬಾರಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟ DCM!

ಆರ್. ಮಾಧವನ್‌ ಹಿರಿಮೆಗೆ ಮತ್ತೊಂದು ಗರಿ: ಬಹುಮುಖ ಪ್ರತಿಭೆ ನಟ, ಚಿತ್ರಕಥೆಗಾರ, ನಿರ್ದೇಶಕನಿಗೆ Padma Shri ಪ್ರಶಸ್ತಿ

India vs Afghanistan: 2 ಎಸೆತದಲ್ಲಿ 3 ವಿಕೆಟ್, 36 ಓವರ್ ನಲ್ಲೇ ಆಪ್ಘನ್ ಹೆಡೆಮುರಿ ಕಟ್ಟಿದ ಭಾರತ, Gill ಪಡೆಗೆ ಇನ್ನಿಂಗ್ಸ್ ಜಯ

ರಾಜ್ಯಸಭೆಗೆ ಸಾಮಾನ್ಯ ಕಾರ್ಯಕರ್ತನನ್ನು BJP ಅಭ್ಯರ್ಥಿ ಮಾಡಿದೆ, ದೇವೇಗೌಡರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ: BY Vijayendra

SCROLL FOR NEXT