ಹೆಚ್ ಡಿ ದೇವೇಗೌಡ 
ರಾಜಕೀಯ

ಸಿದ್ದರಾಮಯ್ಯ ನಿರ್ಗಮನದ ನಂತರ ಬಿಜೆಪಿಯಿಂದ ಕುರುಬ ಸಮುದಾಯದ ನಾಗರಾಜ್ ಆಯ್ಕೆ; ದೇವೇಗೌಡರ 'ಸುವರ್ಣ ರಾಜಕೀಯ'ದ ಯುಗಾಂತ್ಯ!

ಪಿಎಚ್‌ಡಿ ಪದವಿ ಪಡೆದಿರುವ ನಾಗರಾಜ, ಕುರುಬ ಸಮುದಾಯದಿಂದ ಸಂಸತ್ತಿನಲ್ಲಿ ಏಕೈಕ ಬಿಜೆಪಿ ಸದಸ್ಯರಾಗಲಿದ್ದಾರೆ. ಹುಬ್ಬಳ್ಳಿ ಮೂಲದ ನಾಗರಾಜ ದೀರ್ಘಕಾಲದ ಆರ್‌ಎಸ್‌ಎಸ್, ಎಬಿವಿಪಿ ಸದಸ್ಯ ಮತ್ತು ಮಾಜಿ ಕೆಪಿಎಸ್‌ಸಿ ಸದಸ್ಯರಾಗಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮಿಸಿದ ನಂತರ ಅಚ್ಚರಿಯ ಆಯ್ಕೆಯಲ್ಲಿ, ಬಿಜೆಪಿ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಕುರುಬ ಸಮುದಾಯದ ಪ್ರೊ. ಎಂ. ನಾಗರಾಜ ಅವರನ್ನು ಆಯ್ಕೆ ಮಾಡಿದೆ.

ಪಿಎಚ್‌ಡಿ ಪದವಿ ಪಡೆದಿರುವ ನಾಗರಾಜ, ಕುರುಬ ಸಮುದಾಯದಿಂದ ಸಂಸತ್ತಿನಲ್ಲಿ ಏಕೈಕ ಬಿಜೆಪಿ ಸದಸ್ಯರಾಗಲಿದ್ದಾರೆ. ಹುಬ್ಬಳ್ಳಿ ಮೂಲದ ನಾಗರಾಜ ದೀರ್ಘಕಾಲದ ಆರ್‌ಎಸ್‌ಎಸ್, ಎಬಿವಿಪಿ ಸದಸ್ಯ ಮತ್ತು ಮಾಜಿ ಕೆಪಿಎಸ್‌ಸಿ ಸದಸ್ಯರಾಗಿದ್ದಾರೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮತ್ತು ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರುಗಳು ಕೇಳಿಬರುತ್ತಿದ್ದ ಕಾರಣ ಅವರ ಆಯ್ಕೆ ಕೊನೆಯ ಕ್ಷಣದ ಅಚ್ಚರಿಯಾಗಿತ್ತು. ಕುರುಬ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿರ್ಧಾರವು ಕುರುಬ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮವಾಗಿದೆ ಎಂದು ತೋರುತ್ತದೆ.

ಪರಿಷತ್ ಚುನಾವಣೆಗೆ, ಬಿಜೆಪಿ ರಘು ಕೌಟಿಲ್ಯ (ಒಬಿಸಿ - ಮಡಿವಾಳ) ಮತ್ತು ಲಿಂಗರಾಜ್ ಪಾಟೀಲ್ (ಲಿಂಗಾಯತ) ಅವರನ್ನು ಆಯ್ಕೆ ಮಾಡಿತು. ಲಿಂಗಾಯತರಲ್ಲಿ ತನ್ನ ಪ್ರಮುಖ ಬೆಂಬಲ ನೆಲೆಯನ್ನು ಉಳಿಸಿಕೊಳ್ಳುವ ಮತ್ತು ಒಬಿಸಿಗಳಲ್ಲಿ ಬೆಂಬಲವನ್ನು ಹೆಚ್ಚಿಸುವ ತಂತ್ರದ ಭಾಗವಾಗಿ ಇಬ್ಬರು ಒಬಿಸಿ ಅಭ್ಯರ್ಥಿಗಳನ್ನು (ಒಬ್ಬ ಕುರುಬ, ಒಬ್ಬ ಮಡಿವಾಳ) ಮತ್ತು ಒಬ್ಬ ಲಿಂಗಾಯತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಿಂದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಪ್ರೊಫೆಸರ್ ಎಂ. ನಾಗರಾಜ ಅವರನ್ನು ನಾಮನಿರ್ದೇಶನ ಮಾಡಿರುವುದರಿಂದ, ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ. ದೇವೇಗೌಡರ 35 ವರ್ಷಗಳ ಸಂಸದೀಯ ಚುನಾವಣೆ ಅಂತ್ಯಗೊಳ್ಳುವ ಹಂತಕ್ಕೆ ಬರಬಹುದು ಎನ್ನಲಾಗಿದೆ.

ಬಿಜೆಪಿ ಅವರನ್ನು ಬೇರೆ ರಾಜ್ಯದಿಂದ ಕಣಕ್ಕಿಳಿಸದಿದ್ದರೆ, ಜೂನ್ 30 ಕ್ಕೆ ಕೊನೆಗೊಳ್ಳುವ ಅವರ ಅವಧಿಯು ಒಂದು ಯುಗದ ಅಂತ್ಯವನ್ನು ಸೂಚಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಯು ಮಿತ್ರಪಕ್ಷಗಳಿಗಿಂತ ಭಿನ್ನವಾಗಿ ಯಾವಾಗಲು ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಸುಮಲತಾ ಅಂಬರೀಶ್, ಡಿ.ವಿ. ಸದಾನಂದ ಗೌಡ ಮತ್ತು ನಿರ್ಮಲ್ ಕುಮಾರ್ ಸುರಾನ ಅವರ ಬಗ್ಗೆ ಊಹಾಪೋಹಗಳಿದ್ದರೂ, ಪಕ್ಷವು ಜೆಡಿಎಸ್ ಸ್ಥಾಪಕರನ್ನು ಬದಿಗಿಟ್ಟು, ಕಡಿಮೆ ಪ್ರೊಫೈಲ್ ಹೊಂದಿರುವ ಶಿಕ್ಷಣ ಕ್ಷೇತ್ರದ ವ್ಯಕ್ತಿಯನ್ನು ಆಯ್ಕೆ ಮಾಡಿತು.

ರಾಜ್ಯ ಬಿಜೆಪಿ ಮುಖ್ಯಸ್ಥ ಬಿ ವೈ ವಿಜಯೇಂದ್ರ ಮಾತನಾಡಿ “ದೇವೇಗೌಡರು ಮೋದಿ ಅವರ ಕೈಗಳನ್ನು ಬಲಪಡಿಸಿದ್ದಾರೆ ಮತ್ತು ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಅವರನ್ನು ಬಹಳ ಗೌರವಿಸುತ್ತದೆ. ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಬದಲಾಗಿ ರಾಷ್ಟ್ರೀಯ ನಾಯಕತ್ವ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಿಂದ ಸ್ಪರ್ಧಿಸಲು ದೇವೇಗೌಡರು ನಿರಾಕರಿಸಿದ್ದಾರೆ, ಕರ್ನಾಟಕದ ಗಡಿ ಮತ್ತು ನೀರಿನ ವಿವಾದಗಳು ರಾಜ್ಯದೊಂದಿಗೆ ಹಿತಾಸಕ್ತಿ ಸಂಘರ್ಷವನ್ನು ಉಂಟುಮಾಡಬಹುದು ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು ಎಂದು ವಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ