ಮೋದಿ, ಟ್ರಂಪ್ ಮತ್ತು ಪುಟಿನ್ 
ರಾಜಕೀಯ

ರಷ್ಯಾ ತೈಲ ಖರೀದಿಗೆ ಅಮೆರಿಕದ ಒಪ್ಪಿಗೆ: ಗುಲಾಮಗಿರಿ ಸಂಕೇತ; ವಿಶ್ವಗುರುವಿನ ಬೃಹತ್ ಭಾಷಣಗಳ ಹಿಂದೆ ಅಡಗಿರುವ ವಿದೇಶಾಂಗ ದೌರ್ಬಲ್ಯ!

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು “30 ದಿನಗಳ ವಿನಾಯಿತಿ” ನೀಡಲಾಗಿದೆ ಎಂದು ಅಮೇರಿಕಾದ ಸಚಿವರು ಬಹಿರಂಗವಾಗಿ ಹೇಳಿರುವುದು, ಸ್ವತಂತ್ರ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ.

ಬೆಂಗಳೂರು: ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಒಪ್ಪಿಗೆ ಪಡೆಯುವುದು, 30 ದಿನಗಳ ವಿನಾಯಿತಿ ನೀಡುವುದು ಸಾರ್ವಭೌಮ ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ತಳ್ಳಿರುವ ನಿದರ್ಶನಕ್ಕೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆ.

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು “30 ದಿನಗಳ ವಿನಾಯಿತಿ” ನೀಡಲಾಗಿದೆ ಎಂದು ಅಮೇರಿಕಾದ ಸಚಿವರು ಬಹಿರಂಗವಾಗಿ ಹೇಳಿರುವುದು, ಸ್ವತಂತ್ರ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ. ಒಂದು ಸಾರ್ವಭೌಮ ರಾಷ್ಟ್ರ ತನ್ನ ಇಂಧನ ಅವಶ್ಯಕತೆಗಳನ್ನು ಯಾವ ದೇಶದಿಂದ ಪೂರೈಸಿಕೊಳ್ಳಬೇಕು ಎಂಬ ನಿರ್ಧಾರಕ್ಕೂ ಇನ್ನೊಂದು ರಾಷ್ಟ್ರದಿಂದ “ವಿನಾಯಿತಿ” ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರೆ, ಅದು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ; ಅದು ರಾಷ್ಟ್ರದ ಆತ್ಮಗೌರವವನ್ನೇ ತುತ್ತುಮಾಡಿದ ಆಡಳಿತದ ನಗ್ನ ಸತ್ಯ ಎಂದು ಟೀಕಿಸಿದ್ದಾರೆ.

ಸ್ವತಂತ್ರ ನಂತರ ಭಾರತವೂ ಸ್ವತಂತ್ರ ವಿದೇಶಾಂಗ ಧೋರಣೆಯ ಮೂಲಕ ವಿಶ್ವದಲ್ಲಿ ಗೌರವ ಪಡೆದಿದ್ದ ಭಾರತ, ಇಂದು ಅಮೇರಿಕಾದ ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ.

ರಷ್ಯಾದಿಂದ ತೈಲ ಖರೀದಿಸಲು ಅಮೇರಿಕಾದ “ವಿನಾಯಿತಿ” ಬೇಕೆಂಬ ಭಾವ ಮೂಡುವಂತೆ ಮಾತನಾಡುವ ಧೈರ್ಯ ಅವರಿಗೆ ಬಂದಿದ್ದರೆ, ಅದು ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ದೌರ್ಬಲ್ಯ ಮತ್ತು ಆತ್ಮಗೌರವ ಕುಸಿದಿರುವುದಕ್ಕೆ ಜೀವಂತ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

ಅಮೇರಿಕಾದ ಸಚಿವರು ಭಾರತಕ್ಕೆ “30 ದಿನಗಳ ವಿನಾಯಿತಿ” ನೀಡಿದೆ ಎಂದು ಜಗತ್ತಿನ ಮುಂದೆ ಹೇಳುವ ಮಟ್ಟಿಗೆ ಪರಿಸ್ಥಿತಿ ತಲುಪಿರುವುದೇ ಮೋದಿ ಸರ್ಕಾರದ ದುರ್ಬಲತೆ ಮತ್ತು ಆತ್ಮಗೌರವಹೀನತೆಯ ಪರಾಕಾಷ್ಠೆ. ಇದು ಕೇವಲ ರಾಜಕೀಯ ಅಪಮಾನವಲ್ಲ; ಇದು ಭಾರತದ ಸ್ವಾಭಿಮಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹರಾಜು ಹಾಕಿದಂತಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಗೌರವವನ್ನು ಇಷ್ಟು ಮಟ್ಟಿಗೆ ಕುಗ್ಗಿಸಿ, ವಿಶ್ವಗುರುವಿನ ಘೋಷಣೆಗಳ ಹಿಂದೆ ರಾಜತಾಂತ್ರಿಕ ದೀನತೆಯನ್ನು ಮುಚ್ಚಿಟ್ಟ ಪ್ರಧಾನಿಯನ್ನು ನೋಡಲು ಸಾಧ್ಯವಿಲ್ಲ. ಮಾತಿನಲ್ಲಿ ವಿಶ್ವಗುರು, ನಡೆಗಳಲ್ಲಿ ಪರಾಧೀನತೆ ತೋರುವುದು ನರೇಂದ್ರ ಮೋದಿಯ ವಿದೇಶಾಂಗ ನೀತಿಯ ವ್ಯಂಗ್ಯಾತ್ಮಕ ಸತ್ಯ ಎಂದಿದ್ದಾರೆ.

ದೇಶದ ಗೌರವವನ್ನು ಉಳಿಸುವ ಹೊಣೆಗಾರಿಕೆ ಪ್ರಧಾನಮಂತ್ರಿಯದ್ದು. ಆದರೆ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ಅಮೇರಿಕಾದ “ವಿನಾಯಿತಿ”ಗಾಗಿ ಕಾಯುವ ರಾಷ್ಟ್ರದಂತೆ ಕಾಣಿಸಿಕೊಳ್ಳುತ್ತಿರುವುದು ನಾಚಿಕೆಗೇಡಿತನದ ಸಂಗತಿ. ವಿಶ್ವಗುರುವಿನ ಬೃಹತ್ ಭಾಷಣಗಳ ಹಿಂದೆ ಅಡಗಿರುವ ವಿದೇಶಾಂಗ ದೌರ್ಬಲ್ಯವನ್ನು ಇಂದು ಜಗತ್ತೇ ಗಮನಿಸುತ್ತಿದೆ.

ವಿಶ್ವಗುರು ಎಂಬ ಘೋಷಣೆಯಿಂದ ದೇಶದ ಗೌರವ ಉಳಿಯುವುದಿಲ್ಲ. ಆತ್ಮಗೌರವದಿಂದ, ಸ್ವತಂತ್ರ ರಾಜತಾಂತ್ರಿಕ ಧೈರ್ಯದಿಂದ ಮಾತ್ರ ರಾಷ್ಟ್ರದ ಮಾನ ಉಳಿಯುತ್ತದೆ. ಆ ಧೈರ್ಯವೇ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಾಣೆಯಾಗಿರುವುದು ಇಂದಿನ ಭಾರತದ ಅತ್ಯಂತ ಕಹಿ ಸತ್ಯ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel