ಎನ್ ಎಸ್ ಬೋಸರಾಜು  
ರಾಜಕೀಯ

ಮೇ 10 ಡೆಡ್ ಲೈನ್ ಅಂತ ಯಾರು ಹೇಳಿದ್ರು, ಇಂತಹ ಹಲವು ದಿನಾಂಕ ಬರುತ್ತವೆ, ಹೋಗುತ್ತವೆ, ಅವಕ್ಕೆ ಯಾವುದೇ ಮಹತ್ವ ಇಲ್ಲ: ಸಚಿವ ಬೋಸರಾಜು; Video

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 55 ವರ್ಷಗಳಿಂದ ಕಾಂಗ್ರೆಸ್ ಪಾರ್ಟಿಯಲ್ಲಿದ್ದೇನೆ, ನಾಯಕರು ಏನೇ ಅಭಿಪ್ರಾಯಗಳನ್ನು ಹೇಳಿದರೂ ತೀರ್ಮಾನವಾಗುವುದು ದೆಹಲಿಯಲ್ಲಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದರು.

ವಿಜಯಪುರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾಯಕರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ, ಆದರೆ ಏನೇ ತೀರ್ಮಾನವಾಗುವುದಿದ್ದರೂ ಹೈಕಮಾಂಡ್ ಗೆ ಬಿಟ್ಟಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಾರೆ.

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 55 ವರ್ಷಗಳಿಂದ ಕಾಂಗ್ರೆಸ್ ಪಾರ್ಟಿಯಲ್ಲಿದ್ದೇನೆ, ನಾಯಕರು ಏನೇ ಅಭಿಪ್ರಾಯಗಳನ್ನು ಹೇಳಿದರೂ ತೀರ್ಮಾನವಾಗುವುದು ದೆಹಲಿಯಲ್ಲಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದರು.

ಮೇ 10ಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಡೆಡ್ ಲೈನ್ ನೀಡಲಾಗಿದೆ ಎಂಬ ವದಂತಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ,ಯಾರು ಹೇಳಿದರು ನಿಮಗೆ ಎಂದು ಕೇಳಿದರು. ಮೇ 15ಕ್ಕೆ ಡಿ ಕೆ ಶಿವಕುಮಾರ್ ಬರ್ತ್ ಡೇ ಮುನ್ನ ತೀರ್ಮಾನವಾಗಬೇಕೆಂದಾಗಿದೆಯಂತಲ್ಲವೇ ಎಂದು ಕೇಳಿದಾಗ, ಬರ್ತ್ ಡೇಗಳು ಬರುತ್ತವೆ, ಹೋಗುತ್ತವೆ. ಅವರ ಬರ್ತ್ ಡೇಗೂ ನಾಯಕತ್ವ ಬದಲಾವಣೆಗೆ ಸಂಬಂಧವಿಲ್ಲ, ಹೈಕಮಾಂಡ್ ಸಮಯ ಬಂದಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಸೈಬರ್ ವಂಚನೆ ತಡೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಸಂತ್ರಸ್ತರಿಂದ ದೋಚಿದ್ದ 436 ಕೋಟಿ ರೂ freez!

ಕೋವಿಡ್ ಸೃಷ್ಟಿಸಿದ್ದ ವುಹಾನ್ ಲ್ಯಾಬ್ ಗೆ ಅಮೆರಿಕ ವಿಜ್ಞಾನಿಯಿಂದ ಭಾರಿ ಆರ್ಥಿಕ ನೆರವು: DNI ತುಳಸಿ ಗಬಾರ್ಡ್ ಸ್ಫೋಟಕ ಮಾಹಿತಿ!

TMC ಬ್ಯಾಂಕ್ ಖಾತೆಯಲ್ಲಿ 675 ಕೋಟಿ ರೂ ಹಣ: ಪಾರ್ಟಿ ಫಂಡ್‌ ನಿಯಂತ್ರಣದ ಮೇಲೆ ಬಂಡಾಯ ಬಣ ಕಣ್ಣು; ಆಂತರಿಕ ಸಂಘರ್ಷ ಮತ್ತಷ್ಟು ತೀವ್ರ!

₹7,506 ಕೋಟಿ ಹೂಡಿಕೆಯ 55 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಅನುಮೋದನೆ! ಸಚಿವ ಎಂ.ಬಿ. ಪಾಟೀಲ್