ಸಚಿವ ಪ್ರಿಯಾಂಕ್ ಖರ್ಗೆ  
ರಾಜಕೀಯ

IPL ಸಹ ಹೈಜಾಕ್: ಕರ್ನಾಟಕಕ್ಕೆ ಬರುವ ಬಂಡವಾಳದ ಪಾಲು ಗುಜರಾತ್ ಗೆ ಹರಿದು ಹೋಗ್ತಿದೆ- ಪ್ರಿಯಾಂಕ್ ಖರ್ಗೆ

ಅರ್ಜಿಯಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು ಅಂತ ಇರುತ್ತೆ. ಕರ್ನಾಟಕ ಅಂತ ಬರೆದರೂ, ತಮಿಳುನಾಡು ಅಂತ ಬರೆದರೂ ಕೂಡ ಗುಜರಾತ್‌ಗೆ ಹೋಗುತ್ತೆ ಅಸ್ಸಾಂಗೆ ಹೋಗುತ್ತೆ ಇದು ಹೇಗೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು: ದೇಶದ ಎಲ್ಲಾ ಬಂಡವಾಳ ಗುಜರಾತ್‌ ರಾಜ್ಯಕ್ಕೆ ಹೋಗುತ್ತಿದೆ. ಐಪಿಎಲ್‍ನ್ನೂ ಸಹ ಹೈಜಾಕ್ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಐಪಿಎಲ್ ಮ್ಯಾಚ್‍ಗಳು ಗುಜರಾತ್‌ಗೆ ಹೋಗ್ತಾ ಇದೆ. ಬಂಡವಾಳ ಗುಜರಾತ್‌ಗೆ ಹೋಗ್ತಾ ಇದೆ. ಬಿಸಿಸಿಐ, ಐಸಿಸಿನಲ್ಲಿ ಜೈ ಶಾ ಇದ್ದಾರೆ ಅವರಿಗೆ ಮನಸ್ಸಿಗೆ ಬಂದ ಹಾಗೆ ಹಾಕ್ತಾರೆ. ಬೆಂಗಳೂರಿಂದ ಎತ್ತಿ ಹೈದರಾಬಾದ್‌ಗಾದರೂ ಹಾಕ್ತಾರೆ, ಗುಜರಾತ್‌ಗಾದ್ರೂ ಹಾಕ್ತಾರೆ. ಇಲ್ಲೇನೂ ಭದ್ರತೆ ಇಲ್ವಾ? ಯಾಕೆ ಶಿಫ್ಟ್ ಆಗಿದೆ? ಎಂದು ಪ್ರಶ್ನಿಸಿದರು.

ಗುಜರಾತ್‍ಗೆ ಆರು ಸೆಮಿಕಂಡಕ್ಟರ್ ಯೋಜನೆಗಳು ಹೋಗಿವೆ. ಕಂಪನಿಗಳಿಗೆ ಸಬ್ಸಿಡಿ ಕೊಡುವಾಗ ಅರ್ಜಿ ಹಾಕುತ್ತಾರೆ. ಅರ್ಜಿಯಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು ಅಂತ ಇರುತ್ತೆ. ಕರ್ನಾಟಕ ಅಂತ ಬರೆದರೂ, ತಮಿಳುನಾಡು ಅಂತ ಬರೆದರೂ ಕೂಡ ಗುಜರಾತ್‌ಗೆ ಹೋಗುತ್ತೆ ಅಸ್ಸಾಂಗೆ ಹೋಗುತ್ತೆ ಇದು ಹೇಗೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಅಸ್ಸಾಂ ವಿದ್ಯಾರ್ಥಿಗಳು ಇಲ್ಲಿ ಬಂದು ಖಾಸಗಿ ಕಂಪನಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. 30-40 ವರ್ಷದಿಂದ ಒಂದು ವ್ಯವಸ್ಥೆ ಕಟ್ಟಲಾಗಿದೆ. ಆ ವ್ಯವಸ್ಥೆಯನ್ನು ಹಾಳು ಮಾಡ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೇರಳಂ‌ ಸಿಎಂ ಆಯ್ಕೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಕೇರಳದಲ್ಲಿ ಎಂಎಲ್ಎಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ಹೈಕಮಾಂಡ್‌ಗೆ ತಿಳಿಸುತ್ತಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಬಹುಮತ ಸಾಬೀತಿಗೆ ಗವರ್ನರ್ ಇನ್ನೂ ಅವಕಾಶ‌‌ ಕೊಡದ ವಿಚಾರವಾಗಿ ಗರಂ ಆದ ಖರ್ಗೆ ಅವರು, ಅವರು ನಮ್ಮೆದುರಿಗೂ ಕಿರಿಕ್ ಶುರು ಮಾಡಿದ್ದಾರೆ. ಸರ್ಕಾರ ರಚನೆ ಮಾಡೋದಕ್ಕೆ ಗವರ್ನರ್‌‌ಗಳ ಪಾತ್ರ ಏನು? ತಮಿಳುನಾಡು, ಕೇರಳ, ಕರ್ನಾಟಕ, ಮತ್ತೆ ಎಲ್ಲೆಲ್ಲಿ ವಿರೋಧ ಪಕ್ಷ ಇದೆ ಅಲ್ಲೆಲ್ಲಾ ನೋಡಿದೀವಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!

'ಅವ್ರು ನಿಜವಾದ ರಾಮ ಭಕ್ತರಲ್ಲ: ದೇಣಿಗೆ ವಿವಾದ, ಪ್ರಧಾನಿ ಮೋದಿಯ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್!

Ketan Agarwal Murder case: ಕೇತನ್ ತಲೆ ಜಜ್ಜಿದ್ರಾ ಪಾಪಿಗಳು? ಮೃತದೇಹ ನೋಡಿದ್ರೂ ಶಾಂತವಾಗಿದ್ದ ಸಿಯಾ, ಸಿಬ್ಬಂದಿ ಸ್ಫೋಟಕ ಮಾಹಿತಿ!

'ಲವರ್ ಅಲ್ಲ.. ಬಾಂಬರ್..'; ಕಾರಿನಲ್ಲೇ ಯುವತಿಗೆ ಚಾಕು ಇರಿತ, ಪೆಟ್ರೋಲ್ ಬಾಂಬ್ ಸ್ಫೋಟಿಸಿದ ಭಗ್ನ ಪ್ರೇಮಿ, Video

IPL: ರಜತ್ ಪಾಟಿದಾರ್ ಬಳಿಕ RCB ನಾಯಕ ಯಾರು? ಭಾರೀ ಸುಳಿವು ನೀಡಿದ ಫ್ರಾಂಚೈಸಿ, ಕನ್ನಡಿಗರು ಫುಲ್ ಖುಷ್!