ನಿಖಿಲ್ ಕುಮಾರಸ್ವಾಮಿ 
ರಾಜಕೀಯ

ಮೋದಿ ಮೆಚ್ಚಿಸಲು IPL ಪಂದ್ಯ ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದೀರಿ: ನಿಖಿಲ್ ವಿರುದ್ಧ ಕಾಂಗ್ರೆಸ್ ಕಿಡಿ

ನಿಖಿಲ್ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಒಂದು ಫೋನ್ ಕರೆ ಮಾಡಿದ್ದರೆ ಈ ಸ್ಥಳಾಂತರವನ್ನು ತಪ್ಪಿಸಬಹುದಿತ್ತು.

ಬೆಂಗಳೂರು: 2026ರ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಗ್ಯುದ್ಧ ಆರಂಭವಾಗಿದೆ.

ಶಾಸಕರ "ವಿಐಪಿ ಟಿಕೆಟ್ ಮತ್ತು ಪಾಸ್‌ಗಳ ವ್ಯಾಮೋಹ"ದಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಂಭ್ರಮದ ಫೈನಲ್ ಪಂದ್ಯ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕ್ರೀಡಾಂಗಣವು ಅಭಿಮಾನಿಗಳಿಗಾಗಿಯೇ ಹೊರತು ವಿಐಪಿಗಳಿಗಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ನಿಖಿಲ್ ಕುಮಾರಸ್ವಾಮಿ ಅವರನ್ನು "ಡ್ಯಾಡಿಸ್ ಬಾಯ್" (Daddy's Boy) ಎಂದು ವ್ಯಂಗ್ಯವಾಡಿದ್ದಾರೆ.

ನಿಖಿಲ್ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಒಂದು ಫೋನ್ ಕರೆ ಮಾಡಿದ್ದರೆ ಈ ಸ್ಥಳಾಂತರವನ್ನು ತಪ್ಪಿಸಬಹುದಿತ್ತು. ಆದರೆ, ಜೆಡಿಎಸ್-ಬಿಜೆಪಿ ಮೈತ್ರಿಯೇ ಅಹಮದಾಬಾದ್‌ಗೆ ಪಂದ್ಯವನ್ನು "ಗಿಫ್ಟ್" ಆಗಿ ನೀಡಿ ಕನ್ನಡದ ಅಸ್ಮಿತೆಗೆ ದ್ರೋಹ ಬಗೆದಿದೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ಅವರು ವಿಧಾನಸಭೆಯಲ್ಲಿ ಶಾಸಕರಿಗೆ ಟಿಕೆಟ್ ಕೇಳಿ ಗಲಾಟೆ ಮಾಡಿದಾಗ ನಿಮ್ಮ "ಕರ್ನಾಟಕ ಫಸ್ಟ್" ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿವಿಕೆ ಮ್ಯಾಜಿಕ್ ನಂಬರ್ ಪಡೆಯದಿದ್ದರೆ, ಎಡಿಎಂಕೆಗೆ ಡಿಎಂಕೆ ಬೆಂಬಲ; ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸ್ಟಾಲಿನ್ ಗೆ !

‘ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಶೀಘ್ರ ಒಪ್ಪಂದಕ್ಕೆ ಬನ್ನಿ, ಇಲ್ಲವಾದರೆ ಹೊಡೆತ ಇನ್ನಷ್ಟು ಭೀಕರವಾಗಲಿದೆ’: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!

ಕ್ಷಿಪಣಿ ದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: ‘ಸಣ್ಣ ಮಟ್ಟದ ದಾಳಿಯಷ್ಟೇ, ಕದನ ವಿರಾಮ ಮುರಿದಿಲ್ಲ’; ಟ್ರಂಪ್..!

Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ

ಮನ್ರೇಗಾ ಪುನರ್ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ..!

SCROLL FOR NEXT