ಸಂತೋಷ್ ಲಾಡ್ 
ರಾಜಕೀಯ

ಮೋದಿ ಎಲ್ಲಿ ರೋಡ್ ಶೋ ಮಾಡಿದ್ರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ, ಆವಾಗ ದಾರಿ ಮಾಡಿಕೊಡ್ತಾರೆ: ಸಂತೋಷ್ ಲಾಡ್ ವ್ಯಂಗ್ಯ

ಆದಿತ್ಯ ಧರ್ ಅವರು ಈಗಾಗಲೇ ‘ಧುರಂಧರ್’ ಸರಣಿಯ ಸಿನಿಮಾಗಳನ್ನು ಮಾಡಿದ್ದಾರೆ. ನಾನು ಅವರಿಗೆ ಒಂದು ವಿಶೇಷ ಮನವಿ ಮಾಡುತ್ತಿದ್ದೇನೆ. ಅವರು ದಯವಿಟ್ಟು ‘ವ್ಯಾಪಂ’ ಹಗರಣದ ಕುರಿತೂ ಒಂದು ಚಿತ್ರ ನಿರ್ಮಿಸಲಿ.

ಬೆಂಗಳೂರು: ನೀಟ್ ಪರೀಕ್ಷೆ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ವ್ಯಾಪಂ ಹಗರಣದ ಬಗ್ಗೆ ಸಿನಿಮಾ ಮಾಡುವಂತೆ ಖ್ಯಾತ ಚಿತ್ರ ನಿರ್ದೇಶಕ ಆದಿತ್ಯ ಧರ್ ಅವರಿಗೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಲಾಡ್, ನಿರ್ದೇಶಕ ಆದಿತ್ಯ ಧರ್ ಅವರು ಈಗಾಗಲೇ ‘ಧುರಂಧರ್’ ಸರಣಿಯ ಸಿನಿಮಾಗಳನ್ನು ಮಾಡಿದ್ದಾರೆ. ನಾನು ಅವರಿಗೆ ಒಂದು ವಿಶೇಷ ಮನವಿ ಮಾಡುತ್ತಿದ್ದೇನೆ. ಅವರು ದಯವಿಟ್ಟು ‘ವ್ಯಾಪಂ’ ಹಗರಣದ ಕುರಿತೂ ಒಂದು ಚಿತ್ರ ನಿರ್ಮಿಸಲಿ.

ಅದೊಂದು ಅತ್ಯಂತ ರೋಚಕವಾದ ಹಗರಣವಾಗಿದ್ದು, ಸಿನಿಮಾ ಮಾಡಲು ಸೂಕ್ತವಾದ ಕಥಾವಸ್ತುವನ್ನು ಹೊಂದಿದೆ ಎಂದು ಚಾಟಿ ಬೀಸಿದದ್ದಾರೆ. ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಕೇಂದ್ರದ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಸಚಿವರು ಈ ರೀತಿಯಾಗಿ ಸಿನಿಮಾ ವಿಚಾರವನ್ನು ಎಳೆದು ತಂದು ಟಾಂಗ್ ನೀಡಿದ್ದಾರೆ.

ಇನ್ನೂ ಮೋದಿ ರೋಡ್ ಶೋ ಸಂಬಂಧ ವ್ಯಂಗ್ಯವಾಡಿದ ಸಂತೋಷ್ ಲಾಡ್, ಮೋದಿ ಸಾಹೇಬರು ಎಲ್ಲಿ ರೋಡ್ ಶೋ ಮಾಡಿದರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ. ಅದು ಹೇಗೆ ತಿಳಿಯುತ್ತದೋ ಗೊತ್ತಾಗುವುದಿಲ್ಲ. ಪ್ರತಿ ರೋಡ್ ಶೋ ವೇಳೆ ಆ್ಯಂಬುಲೆನ್ಸ್ ಬರುತ್ತೆ... ಆವಾಗ ಮೋದಿ ದಾರಿ ಮಾಡಿಕೊಡುತ್ತಾರೆ. ಇದು ಮೊದಲೆ ಪ್ಲಾನ್ ಆಗಿರುತ್ತೆ ಎಂದು ಲೇವಡಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?