ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಂತೋಷದ ವಿಚಾರ. ಯಾಕಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಏನೇ ಮಾಡಿದ್ರು ಅಂಧ ಭಕ್ತರು ಖುಷಿ ಪಡುತ್ತಾರೆ ಎಂದು ಶುಕ್ರವಾರ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮೋದಿ ಏನೇ ಮಾಡಿದ್ರು ಅಂಧ ಭಕ್ತರು ಸಂತೋಷ ಪಡುತ್ತಾರೆ. ಮೊನ್ನೆ ಚಿನ್ನ ಖರೀದಿ ಮಾಡಬೇಡಿ ಅಂದಾಗ ಸಪೋರ್ಟ್ ಮಾಡಿದ್ರು. ವಾಹನ ಬಳಸಬೇಡಿ ಅಂದಾಗ ಓಡಾಡಲ್ಲ ಅಂದ್ರು. ಮೋದಿಯವರು ಹೇಳೋದನ್ನ ಎಲ್ಲಾ ಕಡೆ ಕೇಳ್ತಾರೆ ಎಂದು ಟಾಂಗ್ ನೀಡಿದರು.
ಪ್ರಧಾನಿ ಮೋದಿ ಅವರು ಜನಸ್ನೇಹ ಆಡಳಿತ ಕೊಡುತ್ತಿದ್ದಾರೆ ಎಂದು ಹೇಳಿದ್ರು. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗಿರೋದಕ್ಕೆ ಅವರೆಲ್ಲರಿಗೂ ಸಂತೋಷ ಆಗಿದೆ ಎಂದು ಲೇವಡಿ ಮಾಡಿದರು.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾದ ಪರಿಣಾಮ ಕೇಂದ್ರ ಸರ್ಕಾರ ಇಂದು ಬೆಳಗ್ಗೆಯಿಂದ ಪೆಟ್ರೋಲ್, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ ಮಾಡಿದೆ.