ಶೋಭಾ ಕರಂದ್ಲಾಜೆ 
ರಾಜಕೀಯ

'ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಾಗಲ್ಲ': ಶೋಭಾ ಕರಂದ್ಲಾಜೆ

ಈ ಮಧ್ಯೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅಷ್ಟು ಬೇಗ ಕುರ್ಚಿ ಬಿಟ್ಟುಕೊಡುವವರಲ್ಲ, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ, ಯಾವ ಆಟನಾದ್ರೂ ಆಡ್ತಾರೆ ಎಂದರು.

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ನಿನ್ನೆಯಿಂದ ಮಹತ್ವದ ಬೆಳವಣಿಗಳು ನಡೆದಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಹೈಕಮಾಂಡ್​​ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದು ನಾಳೆ ಕ್ಲೈಮಾಕ್ಸ್ ಹಂತ ತಲುಪಲಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್​ ಸೂಚಿಸಿದ್ದು ನಾಳೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅಷ್ಟು ಬೇಗ ಕುರ್ಚಿ ಬಿಟ್ಟುಕೊಡುವವರಲ್ಲ, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ, ಯಾವ ಆಟನಾದ್ರೂ ಆಡ್ತಾರೆ ಎಂದರು.

'ಹಳೇ ಹುಲಿ ಸಿದ್ದರಾಮಯ್ಯ'

ಸಿದ್ದರಾಮಯ್ಯ ರಾಜಿನಾಮೆ ನೀಡುವ ವಿಚಾರದ ಬಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಾಗಲ್ಲ. ಅವ್ರು ರಾಜೀನಾಮೇ ಕೊಡೋವರೆಗೂ ರಾಜೀನಾಮೇ ಕೊಡ್ತಾರೆ ಅನ್ನೋ ಗ್ಯಾರಂಟಿ ಇಲ್ಲ ಎಂದಿದ್ದಾರೆ.

'ಜನರ ಕೆಲಸ ಮರೆತ ಸರ್ಕಾರ'

ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಹೀಗಾಗಿ ಬಿಜೆಪಿ ಅದರ ಬಗ್ಗೆ ಮಾತಾಡೋದು ಏನಿಲ್ಲ, ಇವತ್ತು ರಾಜ್ಯದ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಕಷ್ಟದಲ್ಲಿದ್ದಾರೆ, ಆದರೆ ಆಳುವ ನಾಯಕರು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ, ನಾವು ಹೇಳೋದು ಇಷ್ಟೇ ಜನರ ಕೆಲಸ ಮಾಡೋಕೆ ಅಂತ 136 ಸೀಟು ಕೊಟ್ಟಿದ್ದಾರೆ. ಜನರ ಕೆಲಸ ಮಾಡಿ ಅಷ್ಟೆ. ಜನರ ಕೆಲಸ ಮರೆತು ಕೇವಲ ಖುರ್ಚಿಗಾಗಿ ಜಗಳ ಆಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

'ಸಿಎಂ, ಸಚಿವ ಸ್ಥಾನಕ್ಕೆ ಕಚ್ಚಾಟ ಬೇಡ'

ಕಾಂಗ್ರೆಸ್​​ನಲ್ಲಿ ಯಾರು ಸಿಎಂ ಆಗಬೇಕು, ಯಾರು ಸಚಿವ ಆಗ್ಬೇಕು ಅಂತ ಕಾದಾಟ ಮಾಡ್ತಿದ್ದಾರೆ. ಇದನ್ನ ಬಿಟ್ಬಿಡಿ ಜನರ ನೋವನ್ನ ಆಲಿಸಿ ಎಂದು ಆಗ್ರಹ ಮಾಡುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಬುಡಕಟ್ಟು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹೆಸರೇ ಹೆಚ್ಚು ಡಿಲೀಟ್‌? SIR ವಿರುದ್ಧ ಸಿಡಿದೆದ್ದ ಒಕ್ಕೂಟ..!

Asian Games 2026: ಚಿನ್ನ-ಬೆಳ್ಳಿ ಗೆದ್ದು ಮಿಂಚಿದ ಕರುನಾಡ ಕುವರಿ ಪೂವಮ್ಮ; ಕರ್ನಾಟಕದ ಬಹುಮಾನ ನೀತಿಗೆ ಅಸಮಾಧಾನ, ರಾಜ್ಯ ಸರ್ಕಾರದ ಅಸಡ್ಡೆಗೆ ಬೇಸರ..!