ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ - ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ Online Desk
ರಾಜಕೀಯ

ಈ ನನ್ನ ಮಕ್ಕಳು ಎಂದ ವಿಜಯೇಂದ್ರ: ಕೆಂಡಾಮಂಡಲವಾದ ಹರಿಪ್ರಸಾದ್, ಕ್ಷಮೆಗೆ 3 ದಿನಗಳ ಡೆಡ್‌ಲೈನ್‌

ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ, ವಿಜಯೇಂದ್ರ ಏಕವಚನದಲ್ಲೇ "ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ..." ಎಂದು ಮಾತನಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹರಿಪ್ರಸಾದ್, "ಮುಂದಿನ 3 ದಿನದಲ್ಲಿ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಮೀಸಲಾತಿ ಹಾಗೂ ಸರ್ಕಾರಿ ಹುದ್ದೆಗಳ ಭರ್ತಿ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ, ವಿಜಯೇಂದ್ರ ಅವರು ಏಕವಚನದಲ್ಲಿ "ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ..." ಎಂದು ಮಾತನಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, "ವಿಜಯೇಂದ್ರ ಅವರು ಮುಂದಿನ 3 ದಿನಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದೇನು?

ರಾಜ್ಯ ಸರ್ಕಾರದ ಮೀಸಲಾತಿ ಹೆಚ್ಚಳದ ಪ್ರಕರಣಗಳು ಹಾಗೂ ಹಾಲಿನ ದರ ಏರಿಕೆಯ ಕುರಿತು, ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಈ ನನ್ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ..." ಎಂದು ಏಕವಚನದಲ್ಲೇ ಲೇವಡಿ ಮಾಡಿದ್ದರು. ಅವರ ಈ ಆಕ್ರೋಶಭರಿತ ಹೇಳಿಕೆಯ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ವಿರುದ್ಧ 'ನನ್ನ ಮಕ್ಕಳು' ಎಂಬ ಪದಪ್ರಯೋಗ ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೂರು ದಿನಗಳೊಳಗೆ ಕ್ಷಮೆಯಾಚಿಸಬೇಕು, ತಪ್ಪಿದರೆ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಬಗ್ಗೆ ಇಂತಹ ಕೀಳು ಭಾಷೆ ಬಳಸುವುದು ಸರಿಯಲ್ಲ. ಇದು ಕಾಂಗ್ರೆಸ್ ಭಾಷೆಯಲ್ಲ, ಆರ್‌ಎಸ್‌ಎಸ್ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಭಾಷೆ ಎಂದು ಕಿಡಿಕಾರಿದ ಹರಿಪ್ರಸಾದ್, ವಿಜಯೇಂದ್ರ ಅವರಿಂದ ಉತ್ತಮ ರಾಜಕೀಯ ಸಂಸ್ಕೃತಿ ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ತಮ್ಮ ತಂದೆಯ 700 ಸಹಿಗಳನ್ನು ತಾವೇ ಹಾಕಿ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿ, ಶಾ ಅವರೇ ನಿಜವಾದ ದೇಶದ್ರೋಹಿಗಳು

ಮಹಾತ್ಮ ಗಾಂಧೀಜಿಯವರನ್ನು ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನವನ್ನು ಖಂಡಿಸಿದ ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇ ನಿಜವಾದ ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಜೊತೆಗೆ, ಗಾಂಧೀಜಿ ವಿರುದ್ಧ ಮಾತನಾಡುವವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧ್ವಜ ಅಥವಾ ಸಂವಿಧಾನ ಸುಡಲು ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿ, ಇಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಾತಿ ಬಲದಿಂದಲೇ HDK ಸಿಎಂ ಆಗಿದ್ದು, ನಾನೂ ಎಲ್ಲವನ್ನು ಬಿಟ್ಟು ನಿಂತರೆ ಕಷ್ಟವಾಗುತ್ತೆ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಮಹಂತ್ ಕಾಶ್ಮೀರಿ ಗಿರಿ ಮನೆಯಲ್ಲಿ ಡ್ರಗ್ಸ್ ಇಟ್ಟು ಸಿಕ್ಕಿಬಿದ್ದ ಪೊಲೀಸರು; ತಾನೇ ತೋಡಿದ ಖೆಡ್ಡಾಗೆ ಬಿದ್ದ ASI ಅಮಾನತು! Video

ಸ್ಟಿಂಗ್ ಆಪರೇಷನ್: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕನ ಜೊತೆ ಸಿಎಂ ಡಿಕೆಶಿ ಕನೆಕ್ಷನ್! CDR ದಾಖಲೆ ಬಿಡುಗಡೆ; ಕೃಪಾ ಆಳ್ವರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ?- HDK

'ಹೆಸರು ತೆಗೆದುಹಾಕುವುದು ಕಳ್ಳತನವಲ್ಲ'.. 'SIR ವಿರುದ್ಧ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ': ರಾಹುಲ್ ಗಾಂಧಿ ಆರೋಪಕ್ಕೆ ಸಂಬಿತ್ ಪಾತ್ರ ತಿರುಗೇಟು

ಬುಲೆಟ್ ರೈಲು ಕಾರಿಡಾರ್‌ಗೆ PM ಮೋದಿ ಅನುಮೋದನೆ: ಬೆಂಗಳೂರಿನಿಂದ ಚೆನ್ನೈಗೆ ಕೇವಲ 73 ನಿಮಿಷ, Hydಗೆ 2 ಗಂಟೆ ಪ್ರಯಾಣ!