ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ 
ರಾಜಕೀಯ

ಭಾರತದ ಆತ್ಮ ಹಳ್ಳಿಗಳಲ್ಲಿದೆ, ನಿಮ್ಮ ಆತ್ಮ ತಾಜ್ ವೆಸ್ಟೆಂಡ್ ನಲ್ಲಿದೆ! HDK ಗೆ ಪ್ರಿಯಾಂಕ್ ಖರ್ಗೆ ತಿರುಗೇಟು; Video

ಇದೇ ಹೇಳಿಕೆಯನ್ನು ಜೆಡಿಎಸ್ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಜೆಡಿಎಸ್ ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ 'ಗೃಹ ಸಚಿವರೇ ನಾವು ಹಳ್ಳಿ ಗುಗ್ಗು ಏನೀವಾಗ' ಎಂದು ಪ್ರಶ್ನಿಸುವ ಪೋಸ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಕೆಲವು ದಿನಗಳಿಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ, ಏಟು, ಏದಿರೇಟು ನಡೆಯುತ್ತಿದೆ. ಇದೀಗ ಹಳ್ಳಿ ಗುಗ್ಗು ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೇ ಹೇಳಿಕೆಯನ್ನು ಜೆಡಿಎಸ್ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಜೆಡಿಎಸ್ ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ 'ಗೃಹ ಸಚಿವರೇ ನಾವು ಹಳ್ಳಿ ಗುಗ್ಗು ಏನೀವಾಗ' ಎಂದು ಪ್ರಶ್ನಿಸುವ ಪೋಸ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಎಕ್ಸ್ ಪೋಸ್ಟ್ ಮಾಡಿ, "ಭಾರತದ ಆತ್ಮ ಹಳ್ಳಿಗಳಲ್ಲಿದೆ" ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಂದೇಶವನ್ನು ಉಲ್ಲೇಖಿಸುತ್ತಾ, ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಹೇಳಿದ್ದರು.

ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಭಾರತದ ಆತ್ಮ ಹಳ್ಳಿಗಳಲ್ಲಿದೆ. ನಿಮ್ಮ ಆತ್ಮ ತಾಜ್ ವೆಸ್ಟೆಂಡ್ ನಲ್ಲಿದೆ ಎಂದು ಪೋಸ್ಟ್ ಮಾಡುವ ಮೂಲಕ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ಹಳ್ಳಿಗರಾಗುವುದು ಹೆಮ್ಮೆಯೇ, ಆದರೆ ನೀವು ಗುಗ್ಗುತನದ ಪ್ರದರ್ಶನ ಮಾಡಬೇಡಿ ಎನ್ನುವುದಷ್ಟೆ ನನ್ನ ಕಳಕಳಿ ಮತ್ತು ಸಲಹೆ ಎಂದಿದ್ದಾರೆ.

ಅಧಿಕಾರ ಇಲ್ಲದಾಗ ಹಳ್ಳಿಯ ಹಟ್ಟಿ ಜಪ ಮಾಡುತ್ತೀರಿ. ಅಧಿಕಾರವಿದ್ದಾಗ ತಾಜ್ ವೆಸ್ಟೆಂಡ್‌ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ?ಎಂದು ಪ್ರಶ್ನಿಸಿದ್ದು, ಹಳ್ಳಿಗರ ನಂಬಿಕೆ, ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಮಂಕುಬೂದಿ ಎರಚುವ ನಿಮ್ಮ ಸೀರಿಯಲ್ ನಾಟಕವನ್ನು ನಂಬುವುದಕ್ಕೆ ಹಳ್ಳಿಗರು ಮೂರ್ಖರಲ್ಲ, ನಗರದವರೂ ಮುಗ್ಧರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; 20 ಸಾವಿರ ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!

Indian Stock Market: ದೀಪಾವಳಿ ಧಮಾಕಾ, ಸೆನ್ಸೆಕ್ಸ್ 2,009 ಅಂಕ ಜಿಗಿತ, 24,500ರ ಗಡಿ ದಾಟಿದ ನಿಫ್ಟಿ!

ಇಸ್ರೇಲ್ ಧಾರ್ಮಿಕ ಪಕ್ಷಗಳ ಬೆಂಬಲ ಕಳೆದುಕೊಂಡ ನೆತನ್ಯಾಹು: ಪ್ರತಿಸ್ಪರ್ಧಿಗಳು ಸರ್ಕಾರ ರಚಿಸುವ ಸಾಧ್ಯತೆ

ಪಾಕಿಸ್ತಾನ, ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸರಳೀಕರಿಸಿದ ಕೇಂದ್ರ

'ನಿಮ್ಮನ್ನೇನು ರೇಪ್ ಮಾಡಿಲ್ಲ ಅಲ್ವಾ, ಸಿನಿಮಾ ಬಿಟ್ಟುಬರಬಹುದಿತ್ತು'; ಜಾನ್ವಿ ಕಪೂರ್, ರಾಧಿಕಾ ಆಪ್ಟೆಗೆ ಬಟ್ಟೆ ಸುತ್ತಿ ಹೊಡೆದ ನಟಿ ರೆಜಿನಾ! Video