ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ಅವರನ್ನು ಭೇಟಿಯಾದ ರೆಬೆಲ್ಸ್ ತಂಡ  
ರಾಜಕೀಯ

ರಾಜ್ಯ ಬಿಜೆಪಿಯಲ್ಲಿನ ರೆಬೆಲ್ಸ್ ತಂಡ ಮತ್ತೆ ಆಕ್ಟೀವ್; ಹರೀಶ್ ದ್ವಿವೇದಿಗೆ ದೂರು; ಯಾರ ವಿರುದ್ಧ ಗೊತ್ತಾ?

ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕುರಿತಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ದಿನಗಳಿಂದ ತಣ್ಣಗಾಗಿರುವಂತೆ ಕಂಡುಬರುತ್ತಿದ್ದ ಭಿನ್ನಮತೀಯರ ತಂಡ ಇದೀಗ ಮತ್ತೆ ಆಕ್ಟೀವ್ ಆಗಿದೆ. ಈ ತಂಡ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿಯನ್ನು ಭೇಟಿ ಮಾಡಿದ್ದು, ಬಿಜೆಪಿಯ ಆಂತರಿಕ ಬೆಳವಣಿಗೆಗಳ ಬಗ್ಗೆ ವಿವರವಾದ ದೂರನ್ನು ನೀಡಿದೆ.

ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕುರಿತಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ರಾಜ್ಯಕ್ಕೆ ಆಗಮಿಸಿರುವ ದ್ವಿವೇದಿ ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಬಿಜೆಪಿಯ ರಾಜ್ಯ ನಾಯಕರ ಜೊತೆಗೆ ಸಭೆಯನ್ನು ನಡೆಸಿದ್ದಾರೆ.

ಈ ನಡುವೆ ರಾಜ್ಯ ಬಿಜೆಪಿ ನೂತನ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಅವರನ್ನು ಭಿನ್ನಮತೀಯ ನಾಯಕರಾದ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಬಿಪಿ ಹರೀಶ್ ಹಾಗೂ ಮಾಜಿ ಸಂಸದ ಭಗವಂತ್ ಖೂಬಾ ಭೇಟಿ ಮಾಡಿದ್ದು, ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ದೂರು ಕೊಟ್ಟಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ಬಿವೈ ವಿಜಯೇಂದ್ರ ಅವರ ಅವಧಿ ನವೆಂಬರ್ 15 ಕ್ಕೆ ಮುಗಿಯಲಿದೆ. ಈ ನಡುವೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುತ್ತಾರಾ? ಇಲ್ಲವೇ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ.

ಈ ನಡುವೆ ರೆಬೆಲ್ಸ್ ನಾಯಕರು ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಭೇಟಿ ಮಾಡಿದ್ದು, ಮುಂದಿನ‌ ವಿಧಾನಸಭೆ ಚುನಾವಣೆ ದೃಷ್ಟಿಯಿಂದ, ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಲುವಾಗಿ ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIRಗೆ ಸಂಬಂಧ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ; ಡಿಸಿ, ಎಸ್‌ಪಿ ಎಡವಟ್ಟಿನಿಂದ ದಾರಿ ತಪ್ಪಿದ ಮಾಜಿ ಸಿಎಂ ಕಾರು!

Yash ಹ್ಯಾಟ್ರಿಕ್ ಸಾಧನೆ: ಸತತ 3 ಚಿತ್ರಗಳು ಮೊದಲ ದಿನವೇ 140+ ಕೋಟಿ ಗ್ರಾಸ್ ಕಲೆಕ್ಷನ್; ಭಾರತೀಯ ಚಿತ್ರರಂಗದ ಮೊದಲ ನಟ!

ಅಕ್ಷಯ್ ಕುಮಾರ್ ಪುತ್ರ ಆರವ್ 'ನನ್ನ ಹಾರ್ಟ್': ನಟಿ ಅನನ್ಯಾ ಪಾಂಡೆಗೆ ಮತ್ತೊಂದು ಲವ್?

ಕಿಟಕಿಯ ಚೌಕಟ್ಟು ಮುರಿದು ಹೋಟೆಲ್‌ನ 7ನೇ ಮಹಡಿಯಿಂದ ಬಿದ್ದು ಯುವತಿ ಸಾವು: ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ; Video