ಸಿದ್ದರಾಮಯ್ಯ 
ರಾಜಕೀಯ

'ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ, 2029ರಲ್ಲಿ ಯಾವುದೇ ಕಾರಣಕ್ಕೂ BJP ಅಧಿಕಾರಕ್ಕೆ ಬರಲ್ಲ; SIR​​ ಇಲ್ಲದಿದ್ದರೆ ಅವರಪ್ಪನಾಣೆ ಗೆಲ್ಲಲ್ಲ'

ಜ್ಞಾನೇಶ್ ಕುಮಾರ್ ಆಯ್ಕೆ ಆಗಿದ್ದು ಹೇಗೆ ಗೊತ್ತಾ? ಎಂದು ವಿವರಣೆ ನೀಡಿದ ಅವರು, 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ NDA 240 ಸ್ಥಾನ ಮಾತ್ರ ಗೆಲ್ತು. ಬಿಜೆಪಿಗೆ ಮೆಜಾರಿಟಿ ಬರಲಿಲ್ಲ, ಅದಕ್ಕೋಸ್ಕರ ಮೋದಿ, ಅಮಿತ್ ಶಾ ಕುತಂತ್ರ ಮಾಡಿದ್ರು.

ಬೆಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ, ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿಯವರು ಗೆಲ್ಲಲಾಗಲ್ಲ. ದೇಶದಲ್ಲಿ ಎಸ್​ಐಆರ್​​ ವಿರುದ್ಧದ ಈ ಹೋರಾಟ ಎರೆನೇ ಸಂಗ್ರಾಮ. ಇದರಲ್ಲಿ ನಾವು ಯಶಸ್ಸು ಗಳಿಸುತ್ತೇವೆ. 2029ರಲ್ಲಿ ಯಾವ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಎಸ್​ಐಆರ್​​ ವಿರೋಧಿಸಿ ಕಾಂಗ್ರೆಸ್ ನಡೆಸಿದ​​ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶಾದ್ಯಂತ ಎಸ್​​ಐಆರ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ಅದಕ್ಕಾಗಿ SIR ರದ್ದಾಗಬೇಕು. ಸಿಇಸಿ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಜ್ಞಾನೇಶ್ ಕುಮಾರ್ ಆಯ್ಕೆ ಆಗಿದ್ದು ಹೇಗೆ ಗೊತ್ತಾ? ಎಂದು ವಿವರಣೆ ನೀಡಿದ ಅವರು, 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ NDA 240 ಸ್ಥಾನ ಮಾತ್ರ ಗೆಲ್ತು. ಬಿಜೆಪಿಗೆ ಮೆಜಾರಿಟಿ ಬರಲಿಲ್ಲ, ಅದಕ್ಕೋಸ್ಕರ ಮೋದಿ, ಅಮಿತ್ ಶಾ ಕುತಂತ್ರ ಮಾಡಿದ್ರು. ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಇತಿಹಾಸ ಸರಿ ಇಲ್ಲ. ಜ್ಞಾನೇಶ್ ಕುಮಾರ್ ಕೇರಳದಲ್ಲಿ ಐಎಎಸ್ ಅಧಿಕಾರಿಯಾಗಿದ್ದರು. ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಸಿಜೆಐ, ವಿಪಕ್ಷ ನಾಯಕರು ಇರ್ತಾರೆ. ಆದರೆ ಇವರನ್ನು ಆಯ್ಕೆ ಮಾಡುವ ಮೊದಲೇ ಸಮಿತಿ ಬದಲಾಯಿಸ್ತಾರೆ.

ಸಿಜೆಐ ತೆಗೆದು ಸಂಪುಟದವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುತ್ತಾರೆ. ಇದಕ್ಕೆ ರಾಹುಲ್ ಗಾಂಧಿ ವಿರೋಧ ಮಾಡಿದ್ದರೂ ಜ್ಞಾನೇಶ್ ಕುಮಾರ್ ಅವರನ್ನು ಆಯ್ಕೆ ಮಾಡ್ತಾರೆ. ಆಮೇಲೆ ಎಸ್​ಐಆರ್ ಏಕಮುಖವಾಗಿ ಮಾಡುವ ಮೂಲಕ ಜ್ಞಾನೇಶ್ ಕುಮಾರ್​ ಅವರನ್ನು ಬಿಜೆಪಿಯ ಕೈಗೊಂಬೆ ಮಾಡಿಕೊಳ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಕಾನೂನು ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎಸ್‌ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ನವೆಂಬರ್ 1ರಂದು ದೆಹಲಿಯಲ್ಲಿ ಈ ಸಂಬಂಧ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಹೋರಾಟವನ್ನು ಮುಂದುವರಿಸಿವೆ. ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರವಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಹೋರಾಟವಾಗಿದೆ ಎಂದು ತಿಳಿಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳನ್ನು ಗೆದ್ದಿದ್ದು, ಸ್ವಂತ ಬಲದಿಂದ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ತರುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂರನೇ ಮುಖ್ಯಮಂತ್ರಿಯ ಪ್ರಶ್ನೆಯೇ ಇಲ್ಲ, ಡಿಕೆಶಿ CM ಆಗಿ ಮುಂದುವರೆಯುತ್ತಾರೆ: ಕುತೂಹಲ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ!

'ಬಾಯಿ ಸುಟ್ಟುಕೊಂಡಿದ್ದೆ': ರಾಜೀವ್ ಗಾಂಧಿ ಜೊತೆ ತಂದೂರಿ ಚಿಕನ್ ಸವಿದಿದ್ದನ್ನು ನೆನಪಿಸಿಕೊಂಡ ಸೋನಿಯಾ!

ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು? ಮಾವ ತಂಬಿ ರಾಮಯ್ಯ ಹೇಳಿದ್ದೇನು?

'ಕಠಿಣ ಕ್ರಮ ಕೈಗೊಳ್ಳಬೇಕು': CJI ಗುರಿಯಾಗಿಸಿಕೊಂಡ ಪೋಸ್ಟ್‌, ಕೆಪಿಸಿಸಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್!

ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ: ಹೊತ್ತಿ ಉರಿದ ನಾಲ್ಕು ಬೋಗಿಗಳು; Video