ಕೆ.ಎಂ. ಶಿವಲಿಂಗೇಗೌಡ 
ರಾಜಕೀಯ

HDK ಒಬ್ಬ ಬೇಜವಾಬ್ದಾರಿ ಕೇಂದ್ರ ಸಚಿವ; ಸಾಬೀತು ಮಾಡದಿದ್ರೆ ಸುಮ್ನೆ ಬಿಡಲ್ಲ: ಲಂಚ ಆರೋಪಕ್ಕೆ ಶಿವಲಿಂಗೇಗೌಡ ಕಿಡಿ!

ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ರೆ ನಾನು ಸುಮ್ನೆ ಬಿಡಲ್ಲ ಎಂದು ಗುಡುಗಿದ ಶಿವಲಿಂಗೇಗೌಡ ಅವರು, ಈ ಚಾಟ್ ನ ಸತ್ಯಾಸತ್ಯತೆಯನ್ನು ತಿಳಿಯಲು ಕಳುಹಿಸಿದ್ದೇವೆ.

ಹಾಸನ: ತಮ್ಮ ವಿರುದ್ಧ ಲಂಚದ ಆರೋಪ ಮಾಡಿದ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು, ಅವರು ಒಬ್ಬ ಬೇಜವಾಬ್ದಾರಿ ಕೇಂದ್ರ ಸಚಿವ ಎಂದು ತಿರುಗೇಟು ನೀಡಿದರು.

ಇಂದು ಹಾಸನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಲಿಂಗೇಗೌಡ ಅವರು, ಇದು ಎಐ ಯುಗ. ಯಾರು ಬೇಕಾದರೂ ಸುಳ್ಳು ವಾಟ್ಸ್ ಆ್ಯಪ್ ಚಾಟ್ ಗಳನ್ನು ಸೃಷ್ಟಿ ಮಾಡಿ ಹಂಚಿಕೊಳ್ಳಬಹುದು. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಚಾಟ್ ನಲ್ಲಿ ಶಶಿಕಿರಣ್ ಎಂಬ ವ್ಯಕ್ತಿಯ ಹೆಸರಿದೆ ಹೊರತು, ಆತ ಯಾರ ಜೊತೆ ಚಾಟ್ ಮಾಡಿದ್ದಾನೆ ಎಂಬ ವಿವರಗಳೇ ಇಲ್ಲ. ರಾತ್ರಿ ಯಾರೋ ತಂದುಕೊಟ್ಟ ದಾಖಲೆ ಎಂದು ಹೇಳುವ ಕುಮಾರಸ್ವಾಮಿ, ಅದನ್ನು ತಂದುಕೊಟ್ಟ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ರೆ ನಾನು ಸುಮ್ನೆ ಬಿಡಲ್ಲ ಎಂದು ಗುಡುಗಿದ ಶಿವಲಿಂಗೇಗೌಡ ಅವರು, ಈ ಚಾಟ್ ನ ಸತ್ಯಾಸತ್ಯತೆಯನ್ನು ತಿಳಿಯಲು ಕಳುಹಿಸಿದ್ದೇವೆ. ಒಂದು ವೇಳೆ ಈ ಆರೋಪ ಸಾಬೀತಾದರೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಸಿದ್ಧ. ಆದರೆ ಸುಳ್ಳು ಎಂದು ಸಾಬೀತಾದಾಗ ಕುಮಾರಸ್ವಾಮಿ ಗೌರವ ಏನಾಗಬೇಕು ಎಂದು ಪ್ರಶ್ನಿಸಿದರು.

ಈ ಸಂಬಂಧ ದೂರು ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ. ಆದರೆ ರಾಜಕೀಯ ಲಾಭಕ್ಕಾಗಿ ನಿರಪರಾಧಿಗಳ ಹಾಗೂ ಮರ್ಯಾದಸ್ಥರ ಮಾನಹಾನಿ ಮಾಡುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ, ದಿಲ್‌ಜಿತ್ ಶೋ ಟಾರ್ಗೆಟ್ ಮಾಡಿ ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆ: ಅಮಿತಾಭ್ ಬಚ್ಚನ್ ಮನೆ ಮೇಲೂ ಉಗ್ರರ ಕಣ್ಣು!

ಭಾರತದ ವಿರುದ್ಧ ಮಹಾ ಷಡ್ಯಂತ್ರ?; ಢಾಕಾ ಬೀದಿಗಳ ತೋರಿಸಿ ದೆಹಲಿ ಎಂದ ಚೈನೀಸ್ ವ್ಲಾಗರ್ ಗಳು, ಬಾಂಗ್ಲಾ ಮಾಧ್ಯಮಗಳಿಂದಲೇ ಬಟಾಬಯಲು!

ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!

ಕರ್ನಾಟಕದ ಬೆನ್ನಲ್ಲೇ ಕೇರಳದಲ್ಲೂ ಪೆಟ್ರೋಲ್ ಪರೀಕ್ಷೆ; ಎಥೆನಾಲ್ ಪ್ರಮಾಣ ಪತ್ತೆಗೆ ದಿಢೀರ್ ದಾಳಿ! ತನಿಖೆ ಆರಂಭ

ದೀಪಾವಳಿ ಹಬ್ಬಕ್ಕೆ ಅಬ್ಬರಿಸಿದ 'ರಾಮಾಯಣ': ನಾಲ್ಕೇ ದಿನಕ್ಕೆ 500 ಕೋಟಿ ಕ್ಲಬ್‌ ಸೇರಿದ ಯಶ್‌ ಸಿನಿಮಾ!