ಪ್ರಿಯಾಂಕ್ ಖರ್ಗೆ Online Desk
ರಾಜಕೀಯ

ಇವರೆಲ್ಲ ಮೋದಿ ಹೈ ತೋ ಮುಮ್ಕಿನ್ ಹೈ ಅಂತ ಘೋಷಣೆ ಕೂಗಿಯೇ ಸಾಯೋದು: BJP ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಅವರು ಇಷ್ಟೆಲ್ಲ ಬೈಯ್ಯುವ ಬದಲು ನಮ್ಮ ಜೊತೆ ಬರಲಿ. ಮೋದಿ ಮುಂದೆ ಹೋಗೋಣ.

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ಅವರು ಮೋದಿ ಅಂದ ಕೂಡಲೇ ಗಢಗಢ ಅಂತ ನಡುಗಿ ಹೋಗ್ತಾರೆ. ಇವರೆಲ್ಲ ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತ ಘೋಷಣೆ ಕೂಗಿಯೇ ಸಾಯೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಅವರು ಇಷ್ಟೆಲ್ಲ ಬೈಯ್ಯುವ ಬದಲು ನಮ್ಮ ಜೊತೆ ಬರಲಿ. ಮೋದಿ ಮುಂದೆ ಹೋಗೋಣ. ಪ್ರಸ್ತಾವನೆ ಇಡೋಣ. ಮೋದಿ ಅಂದ ಕೂಡಲೇ ಬಿಜೆಪಿ ಅವರು ಗಢಗಢ ಅಂತ ನಡುಗಿ ಹೋಗ್ತಾರೆ. ಆಗ ಬಿಜೆಪಿ ಅವರು ಬಾಯಿ ಬಿಚ್ಚಲ್ಲ ಎಂದರು.

ನಮಗೆ ಅನ್ಯಾಯ ಆದ್ರು ಪರವಾಗಿಲ್ಲ. ನಮ್ಮನ್ನು ಸಾಯಿಸಿ ಬಿಟ್ಟರೂ ಪರವಾಗಿಲ್ಲ. ಆದರೆ ಮೋದಿ ಮಹಾನ್ ಹೇ ಅಂತಾರೆ. ನಿಮ್ಮ ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತಾನೆ ಘೋಷಣೆ ಕೂಗುತ್ತಾರೆ ಎಂದರು.

ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರದ್ದು ಅರ್ಥನೇ ಆಗಲ್ಲ. ಹಾಲಿನ ದರ ಏರಿಕೆ ಬಗ್ಗೆ ಪ್ರತಿಭಟನೆ ಮಾಡ್ತಾರೆ. ನಿನ್ನೆ ಮಹಾರಾಷ್ಟ್ರದಲ್ಲಿ ಅಮೂಲ್‌ದು ಆಯ್ತು ಅದರದ್ದು ಏನು ವಿಚಾರ? ಪೆಟ್ರೋಲ್-ಡಿಸೇಲ್ ಏರಿಕೆ ಬಗ್ಗೆ ಬಿಜೆಪಿ ಅವರ ವಿಶೇಷ ಟಿಪ್ಪಣಿ ಇಲ್ಲವಾ? ಬೆಲೆ ಏರಿಕೆ 13 ವರ್ಷದಿಂದ ಎಷ್ಟು ಆಗಿದೆ. ನಿತ್ಯ ಬಳಕೆ ವಸ್ತು ದುಬಾರಿ ಆಗ್ತಿದೆ. ಅದರ ಬಗ್ಗೆ ಇಲ್ಲವಾ ಅಂತ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್: ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್; ಅಸಾದುದ್ದೀನ್ ಓವೈಸಿ ಘೋಷಣೆ

CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಬಿಷ್ಣೋಯ್ ಗ್ಯಾಂಗ್‌ನಿಂದ ಅರವಿಂದ್ ಕೇಜ್ರಿವಾಲ್, ಅವರ ಮಗಳಿಗೆ ಕೊಲೆ ಬೆದರಿಕೆ!

ಕರ್ನಾಟಕದ ಶೇ.56 ರಷ್ಟು ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ: ಪ್ರಧಾನಿ ಮೋದಿಗೆ ಉಗ್ರಪ್ಪ ಒತ್ತಾಯ!

'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!