ಎಸ್ ಎಸ್ ಮಲ್ಲಿಕಾರ್ಜುನ್ 
ರಾಜಕೀಯ

ಕಾಂಗ್ರೆಸ್ 'ಅನ್ನ' ತಿಂತೀರಿ, ಸ್ವಲ್ಪ ನಿಷ್ಠೆಯಿಂದಿರಿ; ನಮ್ಮವರೇ ನಮಗೆ ಶತ್ರುಗಳು; ಪಕ್ಷದಲ್ಲೇ ಬೆನ್ನಿಗೆ ಚಾಕು ಹಾಕುವವರು ಜಾಸ್ತಿ: SS ಮಲ್ಲಿಕಾರ್ಜುನ್

ನಮ್ಮಲ್ಲಿ ಭಿನ್ನಾಭಿಪ್ರಾಯ ಯಾಕೆ ಇರಬೇಕು? ಭಿನ್ನಾಭಿಪ್ರಾಯ ಇರಬಾರದು. ಬಡವರಿಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲೇ ಮೋಸ ಮಾಡುವವರು ಹಾಗೂ ಬೆನ್ನಿಗೆ ಚಾಕು ಹಾಕುವವರು ಇದ್ದಾರೆ. ಕಾಂಗ್ರೆಸ್ ಅನ್ನ ತಿನ್ನುತ್ತೀರಿ, ಸ್ವಲ್ಪ ನಿಷ್ಠೆಯಿಂದ ಇರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ವಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಒಳಜಗಳಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.

ನಮಗೆ ಹೊರಗಿನ ಶತ್ರುಗಳೇ ಇಲ್ಲ, ನಾವು ಆರಾಮವಾಗಿ ಚುನಾವಣೆಗಳನ್ನು ಗೆಲ್ಲಬಹುದು. ಆದರೆ, ನಮ್ಮವರೇ ನಮಗೆ ಶತ್ರುಗಳಾಗಿದ್ದಾರೆ. ನಾವೆಲ್ಲರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದರೆ ಇಲ್ಲಿ ವಿರೋಧ ಪಕ್ಷವೇ ಇರುವುದಿಲ್ಲ. ನಾನು ಎಲ್ಲರನ್ನೂ ನೋಡಿದ್ದೇನೆ, ಯಾವ ಮುಖಂಡ ಏನು ಎತ್ತ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.

ನಮ್ಮಲ್ಲಿ ಭಿನ್ನಾಭಿಪ್ರಾಯ ಯಾಕೆ ಇರಬೇಕು? ಭಿನ್ನಾಭಿಪ್ರಾಯ ಇರಬಾರದು. ಬಡವರಿಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ಈಗಲೇ ಎಂಎಲ್‌ಎ ಆಗಬೇಕು, ಎಂಎಲ್‌ಸಿ ಆಗಬೇಕು ಎಂದು ಆಸೆಪಡಬೇಡ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಅದಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಖಲೀಲವುಲ್ಲಾ ಅವರಿಗೆ ಸಲಹೆ ನೀಡಿದರು.

3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್: ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್; ಅಸಾದುದ್ದೀನ್ ಓವೈಸಿ ಘೋಷಣೆ

ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ...: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ – ಸುಬ್ಬಿ!

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ರಾಜ್ಯ ಸರ್ಕಾರದ ಶೇ. 84 ರಷ್ಟು ವೆಚ್ಚ ಹೇಳಿಕೆ ತಳ್ಳಿಹಾಕಿದ ಸಂಸದ ತೇಜಸ್ವಿ ಸೂರ್ಯ! ಹೇಳೋದ್ದೇನು?

CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

ಇವರೆಲ್ಲ ಮೋದಿ ಹೈ ತೋ ಮುಮ್ಕಿನ್ ಹೈ ಅಂತ ಘೋಷಣೆ ಕೂಗಿಯೇ ಸಾಯೋದು: BJP ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ