ಕೊಲ್ಲೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಬೇಕೆಂಬ ಆಸೆ ಬಿಜೆಪಿಯದ್ದಾಗಿದ್ದರೂ, ಹಿಂದಿನಿಂದಲೂ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನೇರ ಹೋರಾಟದ ಕ್ಷೇತ್ರವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಕೊಲ್ಲೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ನ 40,000 ಮತಗಳಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಯಗಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಬಿಜೆಪಿಯವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ವಿಚಾರದಲ್ಲಿ ತಮಗೆ ಯಾವುದೇ ವೈಯಕ್ತಿಕ ಪ್ರತಿಷ್ಠೆಯಾಗಲಿ ಅಥವಾ ಗೊಂದಲವಾಗಲಿ ಇಲ್ಲ, ನಾವು ತಾಳ್ಮೆಯಿಂದ ಇದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ, ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದರೇ ನಮ್ಮ ಪಕ್ಷದ ಮತ ಸಹಾಯವಾಗುತ್ತದೆ.
ಜೆಡಿಎಸ್ ಗೆ 40 ಸಾವಿರ ಮತಗಳಿವೆ. ಹೀಗಾಗಿ ಪ್ರಯೋಜನವಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ.ಇದರ ಬಗ್ಗೆ ವಿವರಣೆ ನೀಡಿದ್ದೇನೆ, ಗೊಂದಲವು ಇಲ್ಲ, ಪ್ರತಿಷ್ಠೆಯೂ ಇಲ್ಲ ತಾಳ್ಮೆಯಿಂದ ಇರುವುದಾಗಿ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸರ್ಕಾರ ಮೂರುವರೆ ವರ್ಷ ಪೂರೈಸಿದ್ದರೂ ಸಾಧನೆಗಳನ್ನು ಚರ್ಚಿಸಲು ಯಾವುದೇ ವಿಚಾರಗಳಿಲ್ಲ ಎಂದು ಟೀಕಿಸಿದರು. ನುಡಿದಂತೆ ನಡೆದಿದ್ದೇವೆ ಎಂದು 5 ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ, ಅದರ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ. ಜನರ ದುಡಿಮೆಯ ತೆರಿಗೆ ಹಣದಿಂದ ಖಜಾನೆ ತುಂಬುತ್ತಿದೆಯೇ ಹೊರತು, ಇದರಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳ ಕೊಡುಗೆ ಏನೂ ಇಲ್ಲ ಎಂದು ಅವರು ಆರೋಪಿಸಿದರು.
ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಲ್ಲ, ಏಕೆಂದರೆ 38 ಸೀಟುಗಳನ್ನು ಇಟ್ಟುಕೊಂಡು2 ಬಾರಿ ಸಿಎಂ ಆಗಿದ್ದೇನೆ ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಸೋತಿರಬಹುದು, ಆದರೆ ನನ್ನ ಆರೋಗ್ಯ ಹದಗೆಟ್ಟ ಕಾರಣ ಇಡಿ ನಿಖಿಲ್ ಕುಮಾರಸ್ವಾಮಿ ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ, ಈಗಾಗಲೇ 70 ವಿಧಾನಸಭೆ ಕ್ಷೇತ್ರ ಪ್ರವಾಸ ಮಾಡಿದ್ದಾರೆ. ಅವರು ಪ್ರವಾಸ ಮಾಡಿದಲೆಲ್ಲಾ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.
ರಾಮನಗರ ರಾಜಕೀಯವಾಗಿ ನನಗೆ ಜನ್ಮ ಕೊಟ್ಟ ಭೂಮಿ, ಇಲ್ಲಿಂದ ನಮ್ಮನ್ನು ಯಾರು ಹೊರ ಕಳಿಸಲಿಲ್ಲ, ನಾನು ಶಾಸಕನಾಗಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಮನೆಬಿಟ್ಟು ಹೊರಗೆ ಬರ್ತಿರಲಿಲ್ಲ, ನಾನು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಕಬ್ಬು ಬೆಳೆಗಾರರ ಹೋರಾಟದ ಬಳಿಕವೂ ಸರ್ಕಾರ ನೆರವಿಗೆ ಬಂದಿಲ್ಲ ಹಾಗೂ ಸರಿಯಾದ ನೀರು ಹಂಚಿಕೆಯಾಗದೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಂಗಲ್ ಹನುಮಂತಯ್ಯ ಕಟ್ಟಿದ್ದ ಕುಮಾರ ಕೃಪಾ ಕಟ್ಟಡಕ್ಕೆ ಗಂಗಾ ಹೆಸರು ಇಟ್ಟಿದ್ದಾರೆ. ಪವಿತ್ರ ನದಿಯ ಹೆಸರು ಇಟ್ಟುಕೊಂಡು ಅಪವಿತ್ರ ಕೆಲಸ ಮಾಡಿದರ ಏನು ಪ್ರಯೋಜನ. ಎಷ್ಟು ದಿನ ಈ ರಾಜ್ಯದ ಮುಖ್ಯ ಮಂತ್ರಿಯಾಗಿರುತ್ತಾರೆ. ಅಂತ ಕಟ್ಟಡವನ್ನು 7 ಸುತ್ತಿನ ಕೋಟೆ ಮಾಡಿದ್ದಾರೆ. ಅಲ್ಲಿ ನಡೆಯುವ ಚಟುವಟಿಕೆಗಳನ್ನು ನಡೆಸುತ್ತಾರೆ. ಎಷ್ಟು ಕೋಟಿ ಖರ್ಚು ಮಾಡಿದ್ದಾರೋ ಗೊತ್ತಿಲ್ಲ ಅಲ್ಲಿ ನಡೆಯುವ ಚಟುವಟಿಕೆಗಳು ಯಾರಿಗೂ ತಿಳಿಯುವುದಿಲ್ಲ, ಗಂಗಾ, ಕಾವೇರಿ ಅಥವಾ ಕೊತ್ವಾಲ್ ಎಂದು ಇಟ್ಟುಕೊಳ್ಳಲಿ ಅದರಿಂದ ಏನು ಉಪಯೋಗವಿಲ್ಲ ಎಂದಿದ್ದಾರೆ.