ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

Video: ಗ್ಯಾರಂಟಿಯಾಗಿ ಹೇಳುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳಿಗೆ ಕುತ್ತು; ಶಿವರಾಜ್ ತಂಗಡಗಿ

ರಾಜ್ಯದ ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ವಾತಾವರಣ ನಿರ್ಮಾಣವಾಗಿದ್ದರೆ, ಅದು ಗ್ಯಾರಂಟಿ ಯೋಜನೆಯಿಂದ ಮಾತ್ರ. ತಾವು ಪಡೆಯುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ‌ ಮನೆ ಬಾಗಿಲಿಗೆ ಬರುವ ಬಿಜೆಪಿಗರಿಗೆ..

ಸಚಿವ ಶಿವರಾಜ್ ತಂಗಡಗಿ
Srinivasa Murthy VN
Updated On : 23 Nov 2026, 11:39 pm

ಕೊಪ್ಪಳ: ರಾಜ್ಯದಲ್ಲಿ‌ ಬಿಜೆಪಿ ಅಧಿಕಾರಕ್ಕೆ ಬಂದರೆ, ಗ್ಯಾರಂಟಿಯಾಗಿ ಹೇಳುತ್ತೇನೆ ಗ್ಯಾರಂಟಿ ಯೋಜನೆಗೆ ಕುತ್ತು ಬರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಹೇಳಿದ್ದಾರೆ.

ಕೊಪ್ಪಳದ ಕನಕಗಿರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 200 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಿದರು.

'ಕಾಂಗ್ರೆಸ್ ಮತ್ತೊಮ್ಮೆ‌‌ ಅಧಿಕಾರಕ್ಕೆ ಬಂದರೆ ನಿಮ್ಮ ಖಾತೆಗೆ ಹಣ ಬರುವುದು ಮುಂದುವರೆಯಲಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹೆಣ್ಣು‌ಮಕ್ಕಳು ಸ್ವಾಭಿಮಾನದಿಂದ‌ ಬದುಕು ಸಾಗಿಸಲು ಸಾಧ್ಯವಾಗಿದ್ದು, ಅವರ ಜೀವನದ ಗುಣಮಟ್ಟ ಸುಧಾರಿಸಿದೆ.

Advertisement

Advertisement

ರಾಜ್ಯದ ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ವಾತಾವರಣ ನಿರ್ಮಾಣವಾಗಿದ್ದರೆ, ಅದು ಗ್ಯಾರಂಟಿ ಯೋಜನೆಯಿಂದ ಮಾತ್ರ. ತಾವು ಪಡೆಯುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ‌ ಮನೆ ಬಾಗಿಲಿಗೆ ಬರುವ ಬಿಜೆಪಿಗರಿಗೆ, ನೀವು ಮೂರೂವರೆ ವರ್ಷ ಅಧಿಕಾರದಲ್ಲಿದ್ರಿ. ಯಾವ ಯೋಜನೆಯನ್ನು ಕೊಟ್ಟಿದ್ದೀರ ಎಂದು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

Also Read

2028ಕ್ಕೆ ರಾಜ್ಯದಲ್ಲಿ ಮೋದಿ, ದೇವೇಗೌಡ, ಕುಮಾರಣ್ಣ ನೇತೃತ್ವದ NDA ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ: ಎಚ್.ಡಿ ರೇವಣ್ಣ; Video

ಬಿಜೆಪಿಗೆ ವೋಟ್ ನೀಡಿದ ಮಹಿಳೆಯರಿಗೂ ಗ್ಯಾರಂಟಿ

ನಮಗೆ ರಾಜ್ಯದ ಹೆಣ್ಣು ಮಕ್ಕಳ ಮೇಲೆ‌‌ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿದೆ.‌ ನಾವು ಕಾಂಗ್ರೆಸ್ ಗೆ ಮತ ನೀಡಿದವರಿಗೆ ಮಾತ್ರ ಗ್ಯಾರಂಟಿ ಯೋಜನೆ‌ ಕೊಟ್ಟಿಲ್ಲ? ಬಿಜೆಪಿಗೆ ಮತ ಹಾಕಿದವರಿಗೂ ಗ್ಯಾರಂಟಿ‌ ಯೋಜನೆ ತಲುಪಿದೆಯಲ್ಲವೇ, ಈ ಬಗ್ಗೆ ನೀವು ಕೂಡ ನಿಮ್ಮ‌ ನೆರೆ ಹೊರೆಯವರಿಗೆ ಜಾಗೃತಿ ಮೂಡಿಸಬೇಕು ಎಂದರು.

ಬಿಜೆಪಿಗರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ, ಬ್ಯಾಂಕ್ ನಲ್ಲಿ ಶೂನ್ಯ ಖಾತೆ ತೆಗೆಯಿರಿ, ಪ್ರತಿ ಮಹಿಳೆಯರ ಖಾತೆಗೆ ತಲಾ‌‌ ಹದಿನೈದು ಲಕ್ಷ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು.‌‌ ಮಹಿಳೆಯರು ಮುಗಿಬಿದ್ದು, ಖಾತೆ ತೆರೆದರು. ಆದರೆ ಕೇಂದ್ರ ಸರ್ಕಾರದಿಂದ ಮಹಿಳೆಯರ ಖಾತೆಗೆ ಹಣ ಬರಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳಿಗೆ ಕುತ್ತು

ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಗ್ಯಾರಂಟಿಯಾಗಿ ಹೇಳುತ್ತೇನೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಕುತ್ತು ಬರಲಿದೆ. ಜನರ ಖಾತೆಗೆ ಹಣ ಬರುವುದು ನಿಲ್ಲಲಿದೆ. ಆದರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಐದು ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ. ನಿಮ್ಮ ಖಾತೆಗೆ ಹಣವೂ ನಿರಂತರವಾಗಿ ಜಮೆಯಾಗಲಿದೆ ಎಂದರು.

ಬಿಜೆಪಿಯ ಭರವಸೆಗಳು ಏನಾಯ್ತು?

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ನೀಡಿದ್ದ ಹಲವು ಭರವಸೆಗಳನ್ನು ಜನರು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಬ್ಯಾಂಕ್ ಖಾತೆ ತೆರೆಯಿರಿ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಬರುತ್ತದೆ ಎಂಬ ಭರವಸೆ ನೀಡಲಾಗಿತ್ತು. ಜನರು ನಂಬಿಕೆಯಿಂದ ಖಾತೆ ತೆರೆದರು.

ಆದರೆ ಆ ₹15 ಲಕ್ಷ ಎಲ್ಲಿದೆ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಭರವಸೆ ನೀಡುವುದಷ್ಟೇ ಅಲ್ಲ. ಭರವಸೆಯನ್ನು ಯೋಜನೆಯಾಗಿ ರೂಪಿಸಿ, ಯೋಜನೆಯ ಹಣವನ್ನು ಜನರ ಖಾತೆಗೆ ತಲುಪಿಸುತ್ತಿದೆ ಎಂದು ತಂಗಡಗಿ ಹೇಳಿದರು.

10 ಸಾವಿರ ಕುಟುಂಬಗಳಿಗೆ ನಿವೇಶನ

ನನ್ನ ಕ್ಷೇತ್ರದಲ್ಲಿ ಸ್ವಂತ ಸೂರಿಲ್ಲದೆ ಬದುಕುತ್ತಿರುವ 10 ಸಾವಿರ ಕುಟುಂಬಗಳಿಗೆ ನಿವೇಶನ ಒದಗಿಸುವ ಗುರಿ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ನಿವೇಶನಕ್ಕಾಗಿ ಸೂಕ್ತ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಸ್ವಂತ ಮನೆ ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement