ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತಾ? ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ: ಭೋಜೇಗೌಡ ಆಕ್ರೋಶ; Video
ಆನೆಗಳಿಗೆ ಬುದ್ಧಿಶಕ್ತಿ ಇದೆ. ಶಾಸಕರು ರಾಜೀನಾಮೆ ಕೊಡ್ತೀವಿ ಅಂತಾರೆ, ರಾಜೀನಾಮೆ ಕೊಡೋಕಾ ಗೆಲ್ಲಿಸಿರೋದು? ಸಮಸ್ಯೆಯನ್ನ ಸಿಎಂ, ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತನ್ನಿ. ನಿಮ್ಮ ರಾಜೀನಾಮೆಯಿಂದ ಏನು ಆಗಲ್ಲ.
ಬೆಂಗಳೂರು: ಸರ್ಕಾರ ನಿಮ್ಮದೇ ಇದೆ, ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮಗೆ ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ. ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತಾ ಎಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಶಾಸಕಿ ನಯನಾ ಮೋಟಮ್ಮ ಅವರಿಗೆ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾತನಾಡಿದ ಅವರು, ಮಾನವ – ಪ್ರಾಣ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಳೆಗಾಲದಲ್ಲಿ ಯಾಕೆ ಈ ಸಂಘರ್ಷ ಇಲ್ಲ? ಋತುವಿನಲ್ಲಿ ಆಹಾರ ಕಡಿಮೆ ಆದಾಗ ಆನೆಗಳು ಊರಿಗೆ ನುಗ್ಗುತ್ತವೆ.
ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ರೈಲ್ವೆ ಕಂಬಿಗಳನ್ನ ಹಾಕ್ತಾ ಇದ್ದಾರೆ. ಇದನ್ನ ಊರುಗಳಿಗೆ ಬಾರದಂತೆ ಹಾಕೋದು ಹೇಗೆ ಅಂತ ಅಧಿಕಾರಿಗಳು ಹೇಳಬೇಕು. ಒಂದು ಅಭಯಾರಣ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು ಎಂದು ಒತ್ತಾಯಿಸಿದರು.
ಆನೆಗಳಿಗೆ ಬುದ್ಧಿಶಕ್ತಿ ಇದೆ. ಶಾಸಕರು ರಾಜೀನಾಮೆ ಕೊಡ್ತೀವಿ ಅಂತಾರೆ, ರಾಜೀನಾಮೆ ಕೊಡೋಕಾ ಗೆಲ್ಲಿಸಿರೋದು? ಸಮಸ್ಯೆಯನ್ನ ಸಿಎಂ, ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತನ್ನಿ. ನಿಮ್ಮ ರಾಜೀನಾಮೆಯಿಂದ ಏನು ಆಗಲ್ಲ. ರಾಜೀನಾಮೆ ಕೊಡ್ತೀವಿ ಅಂತ ಜನಕ್ಕೆ ಹೆದರಿಸ್ತೀರಾ?
ನಮ್ಮ ಜನರ ಜೀವ, ನನ್ನ ಮಾತಿಗೆ ಬೆಲೆ ಇಲ್ಲ; ಶಾಸಕಿಯಾಗಿ ಮುಂದುವರೆಯಲು ಇಷ್ಟವಿಲ್ಲ: ನಯನಾ ಮೋಟಮ್ಮ ಆಕ್ರೋಶ; Video
ಮುಟ್ಟಾಳರಾಗಿದ್ರೆ ಮಾತ್ರ ರಾಜೀನಾಮೆ ಕೊಡ್ತೀವಿ ಅಂತಾರೆ. ನಿಮ್ಮದೆ ಸರ್ಕಾರ ಇದೆ. ಬಂದು ಮಾತಾಡಿ, ಅದನ್ನ ಬಿಟ್ಟು ರಾಜೀನಾಮೆ ಕೊಡ್ತೀವಿ ಅಂತ ಸ್ಪೀಕರ್ ಕಚೇರಿಗೆ ಬಂದು ನಾಟಕ ತೋರಿಸಬೇಡಿ. ಜನರ ಸಮಸ್ಯೆಗೆ ನಿಜವಾಗಿ ಸ್ಪಂದಿಸಿ. ಆನೆಗಳಿಗೆ ಆಹಾರ ಅರಣ್ಯದಲ್ಲಿ ಸಿಗೋ ವ್ಯವಸ್ಥೆ ಮಾಡಿ. ಸರ್ಕಾರ ಆನೆಗಳು ನೆಮ್ಮದಿ ಜೀವನ ಮಾಡೋಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಿಮಗೆ ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ. ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತದೆ ಕೊಟ್ಟು ಬಿಡಿ ಎಂದು ವ್ಯಂಗ್ಯವಾಡಿದ ಅವರು, ಜನರನ್ನ ಹೆದರಿಸಬೇಡಿ ಎಂದು ಲೇವಡಿ ಮಾಡಿದ್ರೆ.