ಸಾಬರಷ್ಟೇ ನಿಮಗೆ Vote ಹಾಕ್ತಾರಾ? ಎಲ್ಲಾ ಪಕ್ಷಗಳ ಕಳ್ಳರು ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ; ನೀವು ಸತ್ರೆ ಅಲ್ಲೇ ಮಣ್ಣು ಮಾಡ್ತಾರಾ?

ರೈತರ ಪರವಾಗಿ ಯಾವ ಒಬ್ಬ ಶಾಸಕರು ಸಹ ಮಾತನಾಡಲು ತಯಾರಿಲ್ಲ. ಮಂತ್ರಿ ಸ್ಥಾನಕ್ಕಾಗಿ ಕೆಲ ಶಾಸಕರು ರಾಜೀನಾಮೆ ಕೊಡಲು ಹೋಗಿದ್ದರು. ಈಗ ರೈತರಿಗಾಗಿ ರಾಜೀನಾಮೆ ಕೊಡಲು ಮುಂದೆ ಬರಲಿ ನೋಡೋಣ. ರೈ
Basana Gowda Patil Yatnal
ಬಸನಗೌಡ ಪಾಟೀಲ್ ಯತ್ನಾಳ್
Updated on: 

ವಿಜಯಪುರ: ಭೀಕರ ಬರಗಾಲ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆರು ತಿಂಗಳ‌ ವೇತನವನ್ನು ದೇಣಿಗೆಯಾಗಿ ನೀಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ.

ರೈತರಿಗೆ ಪರಿಹಾರ ನೀಡಲು ಒತ್ತಾಯಿಸಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರ ತೇಜೋವಧೆ ಮಾಡಿ ಅರಾಜಕತೆ ಸೃಷ್ಟಿ ಮಾಡುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಬರಗಾಲ ಪರಿಸ್ಥಿತಿಯಿಂದ ತೊಂದರೆ ಎದುರಿಸುತ್ತಿರುವ ರೈತರಿಗೆ ಕೇವಲ 2,500 ರೂ. ಇನ್ಪುಟ್ ಸಬ್ಸಿಡಿಯನ್ನು ಸರ್ಕಾರ ನೀಡಿದೆ ಎಂದು ಅಸಮಾಧಾನ ಹೊರಹಾಕಿದರು‌.

ರೈತರ ಪರವಾಗಿ ಯಾವ ಒಬ್ಬ ಶಾಸಕರು ಸಹ ಮಾತನಾಡಲು ತಯಾರಿಲ್ಲ. ಮಂತ್ರಿ ಸ್ಥಾನಕ್ಕಾಗಿ ಕೆಲ ಶಾಸಕರು ರಾಜೀನಾಮೆ ಕೊಡಲು ಹೋಗಿದ್ದರು. ಈಗ ರೈತರಿಗಾಗಿ ರಾಜೀನಾಮೆ ಕೊಡಲು ಮುಂದೆ ಬರಲಿ ನೋಡೋಣ. ರೈತರಿಗಾಗಿ ಎಲ್ಲ ಶಾಸಕರು ತಮ್ಮ ಸಂಬಳ ಕೊಡಲಿ ಎಂದು ಸವಾಲು ಹಾಕಿದರು.

ಈಗ ಸರ್ಕಾರ ಘೋಷಿಸಿರುವ 2,500 ರೂ.ಗಳನ್ನು ಗಂಡ-ಹೆಂಡತಿ ಸೇರಿ ಒಂದೇ ದಿನಕ್ಕೆ ದುಡಿಯುತ್ತಾರೆ. ಈ ಹಣ ತರಕಾರಿ ಮಾರಾಟ ಮಾಡುವವರು ಹಾಗೂ ಹಮಾಲಿಗಳ ಒಂದು ದಿನದ ಗಳಿಕೆಯಾಗಿದೆ. ರೈತರ ಬೀಜ ಹಾಗೂ ಗೊಬ್ಬರಕ್ಕೆ ಆಗುವಷ್ಟು ಪರಿಹಾರವಾದರೂ ನೀಡಬೇಕು. ಅದೂ ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದ ಕಿಡಿಕಾರಿದ ಯತ್ನಾಳ್, ರೈತರಿಗೆ ಕನಿಷ್ಠ 25 ಸಾವಿರ ರೂ.‌ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

Basana Gowda Patil Yatnal
ಸಾಲ ಮನ್ನಾ ಮಾಡಿ, ಬರ ಪರಿಹಾರ ನೀಡಿ: ಸರ್ಕಾರಕ್ಕೆ ರೈತರ ಆಗ್ರಹ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾದ್ರೂ ಒಂದು ರೂಪಾಯಿ ತಿಂದಿದ್ರೆ ತೋರ್ಸಿ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ತೀನಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯಾಕಪ್ಪ ದುಬೈ, ಮಾರಿಷಸ್ ಮತ್ತು ಅಮೆರಿಕಾದಲ್ಲಿ ಆಸ್ತಿ ಮಾಡ್ತೀರಾ, ಅಲ್ಲಿ ಅಸ್ತಿ ಮಾಡಿದ್ರೀ ನೀವು ಸತ್ರ ಅಲ್ಲೇ ಮಣ್ಣು ಮಾಡ್ತಾರಾ ಎಂದು ಪ್ರಶ್ನಿಸಿದ ಅವರು, ರೈತನ ಎಕರೆ ಭೂಮಿಗೆ ಸರ್ಕಾರ 2500 ರೂಪಾಯಿ ಘೋಷಿಸವ್ರೆ.. ನಾಚಿಕೆ ಆಗಲ್ವ ಎಂದು ಕಿಡಿಕಾರಿದ್ದಾರೆ.

ಈ ಸಿ. ಎಂ.ಶಿವಕುಮಾರ್ ಮುಸ್ಲಿಮರನ್ನು ಬ್ರದರ್ಸ್ ಎನ್ನುತ್ತಾರೆ, ಇನ್ನೊಂದೆಡೆ ಎಂ.ಬಿ.ಪಾಟೀಲ ವಿಜಯಪುರದಲ್ಲಿ ಮುಂದಿನ ಸಾಬರನ್ನು ಎಂಎಲ್ಎ ಮಾಡುವೆ ಎಂದಿದ್ದಾರೆ. ಅವರ ಕೈಯೊಳಗೆ ಏನಿದೆ ಚೆಂಡು?, ಸಾಬರಷ್ಟೇ ನಿಮಗೆ ವೋಟು ಹಾಕಲಿ ನೋಡೋಣ, ಅವರ ಮತದಿಂದಲೇ ಗೆದ್ದು ಬನ್ನಿ ನೋಡೋಣ ಎಂದರು.

ನಾವು ಎಲ್ಲರನ್ನೂ ಬರೋಬ್ಬರಿ‌ ಮಾಡುತ್ತೇವೆ.‌ ವಿಜಯಪುರ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ರೆಡಿ ಮಾಡಿರುವೆ ಎಂದ ಯತ್ನಾಳ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಸಿದ್ಧವಿರುವುದಾಗಿಯೂ ಪ್ರಕಟಿಸಿದರು.

ರಾಜ್ಯದಲ್ಲಿ ಕಳ್ಳರು ಆಡಳಿತ ನಡೆಸಿದ್ದಾರೆ, ನೀವು ಐದು ವರ್ಷ, ನಾವು ಐದು ವರ್ಷ, ನೀವು ತಿಂದಿದ್ದನ್ನು ನಾವು ಮುಚ್ಚಿ ಹಾಕುತ್ತೇವೆ ಎಂಬ ರಾಜಿ ಮಾಡಿಕೊಳ್ಳುವ ವ್ಯವಸ್ಥೆ ಸಾಕಾಗಬೇಕು. ಹೊಸ ರಾಜಕೀಯ ವ್ಯವಸ್ಥೆ ಮುನ್ನೆಲೆಗೆ ತರಬೇಕಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com