ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ವಿರೋಧ; ಬಸವಕಲ್ಯಾಣ ಕಾರ್ಯಕ್ರಮದಲ್ಲಿ 'ಗೋ ಬ್ಯಾಕ್' ಎಂದು ಪ್ರತಿಭಟನೆ ಬಿಸಿ ಎದುರಿಸಿದ ವಿಜಯೇಂದ್ರ; Video

"ಜಾತಿ, ಧರ್ಮಗಳ ನಡುವೆ ಭೇದಭಾವ ಮಾಡದೆ, 'ನಾವೆಲ್ಲ ಹಿಂದೂಗಳು, ನಾವೆಲ್ಲ ಒಂದೇ' ಎಂಬ ಭಾವನೆಯೊಂದಿಗೆ ಜನರು ಪ್ರಗತಿಯತ್ತ ಸಾಗಬೇಕು," ಎಂದು ಬಿ ವೈ ವಿಜಯೇಂದ್ರ ಹೇಳಿದರು.

ಬಿ ವೈ ವಿಜಯೇಂದ್ರ
Sumana Upadhyaya
Updated On : 29 Nov 2026, 11:31 am

ಬಸವಕಲ್ಯಾಣ: ಲಿಂಗಾಯತರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂಬ ಬೇಡಿಕೆಯನ್ನು ಪರೋಕ್ಷವಾಗಿ ವಿರೋಧಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಲಿಂಗಾಯತ ಸಮುದಾಯದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಸರ್ಕಾರಿ ಸೌಲಭ್ಯಗಳಿಗಾಗಿ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಡಬಾರದು ಎಂದು ಹೇಳಿದರು.

"ಜಾತಿ, ಧರ್ಮಗಳ ನಡುವೆ ಭೇದಭಾವ ಮಾಡದೆ, 'ನಾವೆಲ್ಲ ಹಿಂದೂಗಳು, ನಾವೆಲ್ಲ ಒಂದೇ' ಎಂಬ ಭಾವನೆಯೊಂದಿಗೆ ಜನರು ಪ್ರಗತಿಯತ್ತ ಸಾಗಬೇಕು," ಎಂದು ಹೇಳಿದರು.

Advertisement

Advertisement

Also Read

ಜಾತಿ ಮರು ಸಮೀಕ್ಷೆ: ಸರ್ಕಾರದ ನಡೆ ಸ್ವಾಗತಿಸಿದ ಲಿಂಗಾಯತರು-ಒಕ್ಕಲಿಗರು

ವಿಜಯೇಂದ್ರ ಅವರ ಮಾತಿನಿಂದ ಅಸಮಾಧಾನಗೊಂಡ ಲಿಂಗಾಯತ ಸಮುದಾಯದ ಮುಖಂಡರು, ಬಿಜೆಪಿ ನಾಯಕರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೇ ವಿರೋಧ ವ್ಯಕ್ತಪಡಿಸಿದರು. 'ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು', 'ವಿಜಯೇಂದ್ರ ವಾಪಸ್ ಹೋಗಿ' ಎಂಬ ಘೋಷಣೆಗಳನ್ನು ಕೂಗಿದರು.

'ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಬಲಿಕೊಡಬೇಡಿ' ಎಂದು ಪ್ರತಿಭಟನಾಕಾರರು ವಿಜಯೇಂದ್ರ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು. ಇದರಿಂದ ಕಾರ್ಯಕ್ರಮದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement