ಎಂ.ಸಿ. ಸುಧಾಕರ್ - ಪ್ರದೀಪ್ ಈಶ್ವರ್ Online Desk
ರಾಜಕೀಯ

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ: "ಸೆಲ್ಫ್ ಮೇಡ್ ಮ್ಯಾನ್, ಲೆಟ್ಸ್ ಫೈಟ್"; ಗುರು ಎಂ.ಸಿ. ಸುಧಾಕರ್ ವಿರುದ್ಧವೇ ತೊಡೆತಟ್ಟಿದ ಶಿಷ್ಯ ಪ್ರದೀಪ್ ಈಶ್ವರ್!

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿನ ಆಂತರಿಕ ಭಿನ್ನಮತ ಇದೀಗ ಬೀದಿಗೆ ಬಂದಿದ್ದು, ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಆ ಕುರಿತ ವರದಿ ಇಲ್ಲಿದೆ:

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿನ ಆಂತರಿಕ ಭಿನ್ನಮತ ಇದೀಗ ಬೀದಿಗೆ ಬಂದಿದ್ದು, ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಹಿಂದೆ ಎಂ.ಸಿ. ಸುಧಾಕರ್ ಅವರನ್ನು ರಾಜಕೀಯ ಗುರು, ಅಣ್ಣ ಎಂದು ಬಹಿರಂಗವಾಗಿ ಹೊಗಳುತ್ತಿದ್ದ ಪ್ರದೀಪ್ ಈಶ್ವರ್, ಈಗ ಅವರ ವಿರುದ್ಧವೇ ನೇರ ಸೋಷಿಯಲ್ ಮೀಡಿಯಾ ವಾರ್ ಆರಂಭಿಸಿದ್ದು, "ನಾನು, ಸೆಲ್ಫ್ ಮೇಡ್ ಮ್ಯಾನ್, ಎದುರಾಳಿಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕೆಂದು ಗೋತ್ತಿದೆ" ಎಂದು ನೇರವಾಗಿಯೇ ಸವಾಲು ಹಾಕಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಇತ್ತೀಚೆಗೆ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ನಿಯೋಗವೊಂದು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ದೌಡಾಯಿಸಿತ್ತು. ಈ ವೇಳೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾದ ನಿಯೋಗವು, ಪ್ರದೀಪ್ ಈಶ್ವರ್ ಅವರ ಏಕಪಕ್ಷೀಯ ಧೋರಣೆ ಹಾಗೂ ಕಾರ್ಯವೈಖರಿ ವಿರುದ್ಧ ಗಂಭೀರ ದೂರು ನೀಡಿದೆ. ಅಷ್ಟೇ ಅಲ್ಲದೆ, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಕಟ್ಟುನಿಟ್ಟಿನ ಒತ್ತಾಯ ಹೇರಿದ್ದಾರೆ.

ಐ ಯಾಮ್ ಎ ಸೆಲ್ಫ್ ಮೇಡ್ ಮ್ಯಾನ್

ಇದರ ಬೆನ್ನಲ್ಲೇ, ಉಯ್ಯಲವಾಡಿಯ ಆಂಜನೇಯನ ದೇವಾಲಯದ ವಿಚಾರವಾಗಿ, ಎಂ.ಸಿ. ಸುಧಾಕರ್ ಹಾಗೂ ವಿರೋಧಿಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಶಾಸಕ ಪ್ರದೀಪ್ ಈಶ್ವರ್, "ಚಿಂತಾಮಣಿ ತಾಲ್ಲೂಕಿನ ಉಯ್ಯಲವಾಡಿಯ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ವಿಚಾರವಾಗಿ ತಾವು ಬರೆದ ಪತ್ರಕ್ಕೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಸ್ಪಂದಿಸಿದ್ದಾರೆ ಎಂದು ಈಶ್ವರ್ ತಿಳಿಸಿದ್ದಾರೆ. ಇದೇ ವೇಳೆ, ಚಿಂತಾಮಣಿಗೆ ತೆರಳಿ ನಡೆಸಬೇಕಿದ್ದ ಪತ್ರಿಕಾಗೋಷ್ಠಿಯನ್ನು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ರದ್ದುಗೊಳಿಸಿದ್ದೇನೆ. ಯಾವುದೇ ಪ್ರಭಾವಿ ರಾಜಕಾರಣಿಯ ಒತ್ತಡದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಕಂಬಾಲಹಳ್ಳಿಯಲ್ಲಿ ನಡೆದ ದಲಿತ ಕುಟುಂಬಗಳ ದಹನ ಪ್ರಕರಣವನ್ನು ಉಲ್ಲೇಖಿಸಿರುವ ಅವರು, 'ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಜಗ್ಗುವ ವ್ಯಕ್ತಿಯಲ್ಲ, ನಾನು ಸೆಲ್ಫ್ ಮೇಡ್ ಮ್ಯಾನ್. ನಿಮ್ಮೊಂದಿಗೆ ಹೇಗೆ ಫೈಟ್ ಮಾಡಬೇಕೆಂಬುದು ನನಗೆ ಸ್ಪಷ್ಟವಾಗಿದೆ. ಲೆಟ್ಸ್ ಫೈಟ್' ಎಂದು ಪರೋಕ್ಷವಾಗಿ ಡಾ. ಎಂ.ಸಿ. ಸುಧಾಕರ್ ಅಂಡ್ ಟೀಮ್‌ಗೆ ಫೇಸ್‌ಬುಕ್ ಮೂಲಕ ತಿರುಗೇಟು ನೀಡಿದ್ದಾರೆ.

ಏತನ್ಮಧ್ಯೆ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ಎಂ.ಸಿ. ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ಇದೇ ಮೊದಲೇನಲ್ಲ! ಈ ಹಿಂದೆ, ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರಕ್ಕೆ ಬರಬೇಕಿದ್ದ ಸುಮಾರು ₹3 ಕೋಟಿ ಅನುದಾನವನ್ನು ಅಂದು ಸಚಿವರಾಗಿದ್ದ ಎಂ.ಸಿ. ಸುಧಾಕರ್ ಅವರು ತಮ್ಮ ಪ್ರಭಾವ ಬಳಸಿ ಚಿಂತಾಮಣಿ ಕ್ಷೇತ್ರಕ್ಕೆ ಡೈವರ್ಟ್ ಮಾಡಿಸಿಕೊಂಡಿದ್ದಾರೆ ಎಂಬ ಅಸಮಾಧಾನ ಶಾಸಕರ ಬಣದಲ್ಲಿದೆ. ಇದರೊಂದಿಗೆ, ಚಿಮುಲ್ (ಚಿಕ್ಕಬಳ್ಳಾಪುರ-ಕೋಲಾರ ಹಾಲು ಒಕ್ಕೂಟ) ಸದಸ್ಯರ ನೇಮಕಾತಿ ವಿಚಾರದಲ್ಲಿ ಪ್ರದೀಪ್ ಈಶ್ವರ್ ಅವರ ಆಪ್ತ ಬೆಂಬಲಿಗನ ನೇಮಕವನ್ನು ಅಂದಿನ ಸಿಎಂ ಸಿದ್ದರಾಮಯ್ಯ ರದ್ದುಗೊಳಿಸಿದ್ದರು. ಇದು ಸುಧಾಕರ್ ಅವರ ಒತ್ತಡದಿಂದಲೇ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದು ಶಾಸಕರಿಗೆ ಭಾರಿ ಮುಖಭಂಗ ಉಂಟುಮಾಡಿತ್ತು.

ಜೊತೆಗೆ, ತೀರ ಇತ್ತೀಚೆಗೆ, "ಮುಂದಿನ 25 ವರ್ಷಗಳಲ್ಲಿ ನಾನು ಸಿಎಂ ಆಗಬೇಕೆಂಬ ಆಸೆ ಇದೆ" ಎಂದು ಪ್ರದೀಪ್ ಈಶ್ವರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಸ್ಥಳೀಯವಾಗಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಕರೆಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎಂದು ಸುಧಾಕರ್ ಬಣ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!