ಪ್ರಿಯಾಂಕ್ ಖರ್ಗೆ 
ರಾಜಕೀಯ

ಉರ್ದು ಕೂಡ ಈ ನೆಲದ ಭಾಷೆ; ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಮಾಡಿದ್ರೆ ತಪ್ಪೇನು?: ಪ್ರಿಯಾಂಕ್ ಖರ್ಗೆ

ಆಂಧ್ರ ಪ್ರದೇಶದಲ್ಲಿ ಉರ್ದು ಎರಡನೇ ಅಧಿಕೃತ ಭಾಷೆಯಾಗಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬಲಗೈ ಬಂಟರ ಸರ್ಕಾರವೇ ನಡೆಯುತ್ತಿದೆ. ಅಲ್ಲಿ ಇದು ತಪ್ಪಾಗದಿದ್ದರೆ, ಇಲ್ಲಿ ಕರ್ನಾಟಕದಲ್ಲಿ ಮಾತ್ರ ಏಕೆ ವಿವಾದ ಸೃಷ್ಟಿಸಲಾಗುತ್ತಿದೆ?

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ವನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು, ಆದರೆ ಇದಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಮಧ್ಯೆ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸುವ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಉರ್ದು ಕೂಡ ಈ ನೆಲದ ಭಾಷೆಯೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಹಬ್ಬ ಮಾಡಿದ್ರೆ ತಪ್ಪೇನು? ಉರ್ದು ಹಬ್ಬ ಮಾಡಲಿ, ಹಿಂದಿ ಹಬ್ಬವನ್ನೂ ಮಾಡಲಿ. ನಮ್ಮಲ್ಲಿ ಹಿಂದಿ ಪ್ರಚಾರ ಸಭೆ ಇತ್ತು, ಈಗಲೂ ಇದೆ. ಹಿಂದಿ, ಉರ್ದು, ತಮಿಳು, ತೆಲುಗು, ಒಡಿಯಾ ಎಲ್ಲವೂ ನಮ್ಮ ದೇಶದ ಭಾಷೆಗಳೇ ಅಲ್ಲವೇ? ಎಂದು ಖರ್ಗೆ ಪ್ರಶ್ನಿಸಿದರು.

ಆರೋಗ್ಯ ಸಚಿವ ಯುಟಿ ಖಾದರ್ ಅವರು ಈ ಬಗ್ಗೆ ಏನು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಭಾಷೆಯ ಆಚರಣೆ ಇದ್ದರೂ ಅದನ್ನು ಆಚರಿಸುವುದರಲ್ಲಿ ತಪ್ಪೇನಿದೆ? ಅದರಿಂದ ಏನು ತೊಂದರೆಯಾಗುತ್ತದೆ? ಎಂದರು.

ಆಂಧ್ರ ಪ್ರದೇಶದಲ್ಲಿ ಉರ್ದು ಎರಡನೇ ಅಧಿಕೃತ ಭಾಷೆಯಾಗಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬಲಗೈ ಬಂಟರ ಸರ್ಕಾರವೇ ನಡೆಯುತ್ತಿದೆ. ಅಲ್ಲಿ ಇದು ತಪ್ಪಾಗದಿದ್ದರೆ, ಇಲ್ಲಿ ಕರ್ನಾಟಕದಲ್ಲಿ ಮಾತ್ರ ಏಕೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರ ದ್ವಂದ್ವ ನೀತಿಯನ್ನು ಖರ್ಗೆ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!