ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ವಸಂತನಗರದ ಶಾಂಗ್ರೀಲಾ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಅವನೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಶಿವಕುಮಾರ್ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ಸ್ಪಷ್ಟಪಡಿಸಬೇಕು...

ಎಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್
Vishwanath S
Updated On : 11 Oct 2026, 9:32 pm

ಬೆಂಗಳೂರು: ವಸಂತನಗರದ ಶಾಂಗ್ರೀಲಾ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಅವನೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಶಿವಕುಮಾರ್ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಶಿವಕುಮಾರ್‌ ಮಾಡಿದ್ದ ಸ್ಟಿಂಗ್‌ ಆಪರೇಷನ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಶಿವಕುಮಾರ್ ಅವರು ಆ ವ್ಯಕ್ತಿಯನ್ನ ಭೇಟಿ ಮಾಡಿದ ಬಳಿಕ ಕ್ಯಾಬಿನೆಟ್‌ಗೆ ಸ್ಟಿಂಗ್ ಆಪರೇಷನ್ ಪಟ್ಟಿ ತೆಗೆದುಕೊಂಡು ಹೋಗಿದ್ದರು. ಉತ್ತರ ಭಾರತದಿಂದ ನಿರ್ದೇಶನಗಳು ಬರುತ್ತಿವೆ, ಕುಮಾರಸ್ವಾಮಿ ಅವರೇ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಸ್ಟಿಂಗ್ ಆಪರೇಷನ್ ಮಹಾನಾಯಕ, ಸಾಮ್ರಾಟ್ ಎಂದು ಯಾರು ಕರೆಸಿಕೊಳ್ಳುವವರು ಯಾರು ಎಂಬುದು ಜನತೆಗೆ ಗೊತ್ತಿದೆ ಎಂದು ಕುಟುಕಿದರು.

Also Read

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಸಿಎಂ ಶಿವಕುಮಾರ್ ಜನತೆಯ ಮುಂದೆ ಇಡಬೇಕು. ಅಲ್ಲದೆ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಸ್ಟಿಂಗ್ ಆಪರೇಷನ್ ಆಗಿದೆ ಎನ್ನುವ ವಿಚಾರ ಹಾಗೆಯೇ ಸೈಲೆಂಟ್ ಆಯಿತು? ಆ ಸ್ಟಿಂಗ್‍ನಲ್ಲಿ ಸಿಎಂ ಕೂರಿಸಿಕೊಂಡು ಮಾತನಾಡಿರುವ ವ್ಯಕ್ತಿಯ ಪಾತ್ರವೇನು? ಎಂಬುದು ತಿಳಿಯಬೇಕು ಎಂದು ಕುಮಾರಸ್ವಾಮಿ ಕೇಳಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement