ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸ್ಟಿಂಗ್ ಆಪರೇಷನ್ ಕೋಲಾಹಲ ಸೃಷ್ಟಿಸಿದೆ. ಮಾರುವೇಷದ ಕಾರ್ಯಾಚರಣೆ ಆರೋಪ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಿದೆ. ಈ ಮಧ್ಯೆ ಮೊದಲ ಬಾರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೌನ ಮುರಿದಿದ್ದಾರೆ.
ನನ್ನನ್ನೂ ಸೇರಿ ಕೆಲವು ಸಚಿವರನ್ನು ಟ್ರ್ಯಾಪ್ ಮಾಡಲು ಖಾಸಗಿ ಟೀಮ್ ಸ್ಟಿಂಗ್ ಆಪರೇಷನ್ಗೆ ಯತ್ನಿಸಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಸಂಚಲನ ಸೃಷ್ಟಿ ಮಾಡಿದೆ. ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧವೂ ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಸಿದ್ದರಾಮಯ್ಯ ಸಹ ಮೌನ ಮುರಿದಿದ್ದು, ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸ್ಟಿಂಗ್ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಯಾರು ಮಾಡ್ತಿದ್ದಾರೆ ಅನ್ನೋ ಸತ್ಯ ಗೊತ್ತಾಗಬೇಕಲ್ಲ ಎಂದಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, ಪರೋಕ್ಷವಾಗಿ ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆಯಲ್ಲಿ ಹೊರಬರಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಯಾರು ಮಾಡ್ತಿದ್ದಾರೆ ಅನ್ನೋ ಸತ್ಯ ಗೊತ್ತಾಗಬೇಕಲ್ಲಾ… ಎಂದು ಹೇಳಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ಕುತೂಹಲ ಮೂಡಿದೆ. ಸ್ಟಿಂಗ್ ಆಪರೇಷನ್ ರಾದ್ದಾಂತ.. ತನಿಖೆ ಹಂತ ತಲುಪುತ್ತಾ? ಸಿಎಂ ಡಿಕೆಶಿ ಏನ್ ಮಾಡ್ತಾರೆ..? ಏನ್ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಅವರು, ನನಗೆ 80 ವರ್ಷ ಆಗಿದೆ ಅಂತ ಹಿಂದೇಟು ಹೊಡೆಯಲ್ಲ. ಉಗ್ರಪ್ಪನಿಗೆ 70 ವರ್ಷ ರಾಜಕೀಯದಲ್ಲಿರಲು ಇನ್ನೂ 10 ವರ್ಷ ಇದೆ. ಆದ್ರೆ ನನಗೆ 80 ವರ್ಷ ಆಗಿದೆ ಎಂದರು. ಇದೇ ವೇಳೆ ʻಇನ್ನೊಮ್ಮೆ ಸಿಎಂ ಆಗಬೇಕುʼ ಎಂಬ ಅಭಿಮಾನಿ ಕೂಗಿಗೆ ಓಗೊಟ್ಟು, ಸಿಎಂ ಮಾತ್ರ ಬೇಡಪ್ಪ ಅಂತಾ ನಕ್ಕಿದ್ದಾರೆ.
ಮುಂದುವರಿದು.. ನನ್ನದು ಎಲೆಕ್ಷನ್ ನಿಲ್ಲೋ ವಯಸ್ಸಾ? ರಾಹುಲ್ ಗಾಂಧಿ ರಾಜ್ಯಸಭೆಗೆ ಹೇಳಿದ್ದರು, ಆದ್ರೆ ನಾನು ರಾಜ್ಯಸಭಾ ಸ್ಥಾನ ಬೇಡ ಅಂದೆ. ನನಗೆ ವಯಸ್ಸಾಗಿದೆ, ದೆಹಲಿಗೆ ಬರಲು ಸಾಧ್ಯವಿಲ್ಲ ಅಂದೆ. ಆಗ ವರ್ಕಿಂಗ್ ಕಮಿಟಿ ಮೆಂಬರ್ ಮಾಡಿದ್ರು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ನಡೆಯುತ್ತಿರುವುದು ತಮಗೆ ತಿಳಿದಿದೆ ಎಂದು ಹೇಳಿದ್ದಾರೆ. ಆದರೆ, ಈ ಕಾರ್ಯಾಚರಣೆಯ ಹಿಂದೆ ಯಾರು ಇದ್ದಾರೆ ಎಂಬ ಸತ್ಯ ಹೊರಬರಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.