ಹೆಚ್ ಡಿ ಕುಮಾರಸ್ವಾಮಿ  
ರಾಜಕೀಯ

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದು, ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಪ್ರಕರಣ ಉಲ್ಲೇಖಿಸಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ನವರಾತ್ರಿ ಹಬ್ಬದ ಹೊತ್ತಲ್ಲಿ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್​​ ಆಪರೇಷನ್​​ ವಿಚಾರ ಭಾರೀ ಸಂಚಲನ ಉಂಟುಮಾಡುತ್ತಿದೆ.ಕೆಲವು ದಿನಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್​​ ತಮ್ಮ ಸಹೋದ್ಯೋಗಿಗಳಿಗೆ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಚ್ಚರವಾಗಿರಿ ಎಂದು ಸೂಚನೆ ನೀಡಿದ ನಂತರ ಈ ವಿಷಯ ಮುನ್ನಲೆಗೆ ಬಂದು ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ತೀವ್ರ ವಾಗ್ದಾಳಿಗೆ ಕಾರಣವಾಗಿದೆ.

ಈ ನಡುವೆ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೊಗೆ ತಡೆಯಾಜ್ಞೆ ತಂದಿರುವುದು ಮತ್ತಷ್ಟು ಸಂಶಯಕ್ಕೆ ಈಡುಮಾಡಿದೆ. ಈ ಸಂಬಂಧ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದು, ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಪ್ರಕರಣ ಉಲ್ಲೇಖಿಸಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಕುಮಾರ್​​ ಅವರೇ ನೀರು ಹಾಕಿ ಬೆಳೆಸಿದ ಸ್ಟಿಂಗ್ ಆಪರೇಷನ್ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರು ವಿಡಿಯೊವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಏಕೆ ಪಡೆಯುತ್ತಿದ್ದಾರೆ? ಸಿದ್ದರಾಮಯ್ಯ ಅವರು ಇದನ್ನು ಧೈರ್ಯವಾಗಿ ಎದುರಿಸಬೇಕು. ಅವರು ಏಕೆ ಮೌನವಾಗಿದ್ದಾರೆ? ಈ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಆದೇಶಿಸಲಿ. ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು. ಈ ಸಂಬಂಧ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಜ್ವಲ್​​​​ ಕೇಸ್​​ ಉಲ್ಲೇಖಿಸಿದ ಹೆಚ್ ಡಿಕೆ

ನಮ್ಮ ಕುಟುಂಬದ ಒಬ್ಬ ಸದಸ್ಯ ಪ್ರಜ್ವಲ್ ರೇವಣ್ಣ ಮೇಲೆ ಕಳೆದ ಬಾರಿ ಲೋಕಸಭೆ ಎಲೆಕ್ಷನ್​​ಗೆ 2 ದಿನ ಇರಬೇಕಾದರೆ ವಿಡಿಯೋಗಳನ್ನು ಪೆನ್​​ಡ್ರೈವ್ ಮಾಡಿ ಹಂಚುವ ಕೆಲಸ ಮಾಡಿದರು. 5 ವರ್ಷದ ಹಿಂದೆ ಕಂಪ್ಲೇಂಟ್ ಕೊಟ್ಟ ಮಹಿಳೆಯನ್ನು ಕರೆಸಿ ಇಲ್ಲಿಯ ಕೇಂದ್ರ ಕಚೇರಿಯಲ್ಲಿ ದೂರು ಕೊಡಿಸಿದರು. ರಾಹುಲ್ ಗಾಂಧಿ ಇದರ ಬಗ್ಗೆ ದೇಶ-ವಿದೇಶಗಳಲ್ಲಿ ಪ್ರಸ್ತಾಪ ಮಾಡಿ ದೇವೇಗೌಡರ ಮರ್ಯಾದೆ, ವರ್ಚಸ್ಸು ಕಳೆಯೋಕೆ ಹೊರಟರು. ಹಾಸನದ ಮತ್ತೊಬ್ಬರು, ದೇವರಾಜೇಗೌಡ ಮತ್ತು ಮಂಡ್ಯದ ಮಾಜಿ ಎಂಪಿ ಶಿವರಾಮೇಗೌಡರು ಹಾಗೂ ಇನ್ನೊಬ್ಬರು ಮಾತಾಡುವ ಆಡಿಯೋ ಬಂತು.ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕೆಂದು ಅದರಲ್ಲಿ ಕೇಳುತ್ತದೆ, ಡಿಕೆ ಶಿವಕುಮಾರ್ ಮಾತಾಡ್ತಿದ್ದಾರೆ ಎಂದು ದೇವರಾಜೇಗೌಡಗೆ ಫೋನ್ ಕೊಡ್ತಾರೆ. ಆಗ ಈ ಹೆಣ್ಣುಮಗಳನ್ನ ಹುಡುಕೋಕೆ ಸುಸ್ತಾಗಿದ್ದೀನಿ ಇರಪ್ಪ ಎಂದು ಡಿಕೆಶಿ ಹೇಳ್ತಿರುವ ವಿಡಿಯೊ ಮಾಧ್ಯಮಗಳ ಮುಂದೆ ಇಟ್ಟಿದ್ದೇವೆ. ಡಿ ಕೆ ಶಿವಕುಮಾರ್ ಹಲವಾರು ಕುಟುಂಬಗಳ ಹೆಣ್ಮಕ್ಕಳ ವಿಡಿಯೊ ಪೆನ್ ಡ್ರೈವ್ ಲ್ಲಿ ಹಾಕಿ ಹೊರಗಡೆ ಬೀದಿಬೀದಿಯಲ್ಲಿ ಪ್ರಚಾರ ಮಾಡಿ ಅವರ ಮರ್ಯಾದೆ ತೆಗೆದ ಪುಣ್ಯಾತ್ಮ, ಆ ಹೆಣ್ಮಕ್ಕಳು ಯಾರ್ಯಾರೆಂದು ನಮಗಂತೂ ಗೊತ್ತಿಲ್ಲ ಎಂದರು.

ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ’

ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಆಗಿದ್ದ ಬಗ್ಗೆ ನಾನು ಮಾತನಾಡಿದ್ದೆ. ಇತ್ತೀಚೆಗೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಡಿ ಕೆ ಶಿವಕುಮಾರ್ ಸಿಎಂ ಆದ ಮೇಲೆ ಅತ್ಯಾಧುನಿಕ ತಾಂತ್ರಿಕ ಉಪಕರಣಗಳನ್ನು ತರಿಸಿಕೊಂಡು ತಮ್ಮ ಸದಾಶಿವನಗರ ನಿವಾಸದಲ್ಲಿ 4 ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಕೇಳಿ ನನಗೆ ಆಶ್ಚರ್ಯ ಆಯ್ತು ಎಂದರು.

ಪ್ರಜ್ವಲ್ ರೇವಣ್ಣ ಬಗ್ಗೆ ಹರಿದಾಡಿದ ವಿಡಿಯೊ ಎಐ ಎಂದು ನಾವು ಹೇಳಿಲ್ಲ, ಇಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೊಗೆ ಸ್ಟೇ ತರಲು ನ್ಯಾಯಾಲಯ ಮೊರೆ ಹೋಗಿದ್ದಾರೆ, ಆದರೆ ಜನತೆಗೆ ನ್ಯಾಯ ದೊರಕಿಸಬೇಕೆಂದು ನಾವು ತಡೆ ತರಲಿಲ್ಲ ಎಂದರು. ಡಿ ಕೆ ಶಿವಕುಮಾರ್ ಅವರೇ ಸಾಕಿ ಬೆಳೆಸಿದ ಸ್ಟಿಂಗ್ ಆಪರೇಷನ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ, ಅದಕ್ಕೆ ಗೊಬ್ಬರ ನೀರು ಎರೆದು ಬೆಳೆಸಿದವರು ಈ ನಾಡಿನ ಮುಖ್ಯಮಂತ್ರಿಗಳೇ ಎಂದು ದೂಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು