ಯತ್ನಾಳ್ ಮತ್ತು ನಿರಾಣಿ 
ರಾಜಕೀಯ

ಘರ್ ವಾಪ್ಸಿಗೆ ಸಿದ್ಧತೆ: ವಿಜಯೇಂದ್ರ ನಂತರ ನಿರಾಣಿ ಭೇಟಿಯಾದ ಯತ್ನಾಳ್; ರಾಜಕೀಯದಲ್ಲಿ ಗರಿಗೆದರಿದ ಕುತೂಹಲ

ಬನ್ರೀ.. ಹಿಂದೂ ಹೃದಯ ಸಾಮ್ರಾಟ್ ಎಂದು ಯತ್ನಾಳ್ ಅವರನ್ನು ಆಹ್ವಾನಿಸಿದ ನಾರಾಯಣಸಾ ಭಾಂಡಾ, ಅವರನ್ನು ಸೋಫಾದಲ್ಲಿ ಕೂರಿಸಿದರು. ಸೋಫಾದ ಒಂದು ಕಡೆ ಯತ್ನಾಳ್, ಇನ್ನೊಂದು ಕಡೆ ನಿರಾಣಿ, ಮಧ್ಯದಲ್ಲಿ ಭಾಂಡಾ ಅವರಿದ್ದರು

ಬಾಗಲಕೋಟೆ: ಮೊನ್ನೆ ಮೊನ್ನೆಯಷ್ಟೇ ಧಾರವಾಡದ ಛಬ್ಬಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯೇಂದ್ರ ಭೇಟಿ ಬೆನ್ನಲ್ಲೇ ಯತ್ನಾಳ್​ ಅವರು ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿದ್ದಾರೆ. ಬಾಗಲಕೋಟೆಯಲ್ಲಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ನಾರಾಯಣಸಾ ಭಾಂಡಾ ಮನೆಗೆ ಯತ್ನಾಳ್, ಆಹ್ವಾನದ ಮೇರೆಗೆ ಆಗಮಿಸಿದ್ದರು.

ಆವೇಳೆ, ಅಲ್ಲಿ ಮುರುಗೇಶ್ ನಿರಾಣಿ ಕೂಡಾ ಹಾಜರಿದ್ದರು. ಸುಮಾರು ಎರಡು ಗಂಟೆಗಳ ಕಾಲ ಭಾಂಡಗೆ ನಿವಾಸದಲ್ಲಿದ್ದ ನಾಯಕರು ರಾಜಕೀಯ ವೈಷಮ್ಯ ಬಿಟ್ಟು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಘರ್ ವಾಪ್ಸಿಗೆ ವೇದಿಕೆ ಸಿದ್ಧವಾಯ್ತಾ ಅನ್ನೋ ಚರ್ಚೆ ಜೋರಾಗಿದೆ.

ಬನ್ರೀ.. ಹಿಂದೂ ಹೃದಯ ಸಾಮ್ರಾಟ್ ಎಂದು ಯತ್ನಾಳ್ ಅವರನ್ನು ಆಹ್ವಾನಿಸಿದ ನಾರಾಯಣಸಾ ಭಾಂಡಾ, ಅವರನ್ನು ಸೋಫಾದಲ್ಲಿ ಕೂರಿಸಿದರು. ಸೋಫಾದ ಒಂದು ಕಡೆ ಯತ್ನಾಳ್, ಇನ್ನೊಂದು ಕಡೆ ನಿರಾಣಿ, ಮಧ್ಯದಲ್ಲಿ ಭಾಂಡಾ ಅವರಿದ್ದರು. ಯತ್ನಾಳ್ ಮತ್ತು ನಿರಾಣಿ, ಇಬ್ಬರೂ ತಮ್ಮ ನಡುವೆ ಏನೂ ಡಿಫರೆನ್ಸ್ ಇಲ್ಲ ಎನ್ನುವ ರೀತಿಯಲ್ಲಿ ನಗುನಗುತ್ತಾ ಸಮಯವನ್ನು ಕಳೆದರು.

"ರಾಜಕೀಯದಲ್ಲಿ ಯಾರೂ ಶಾಸ್ವತ ಮಿತ್ರರೂ ಇಲ್ಲ, ಶತ್ರುಗಳೂ ಅಲ್ಲ. ಯತ್ನಾಳ್ ನಮ್ಮ ಪಾರ್ಟಿಯಿಂದಲೇ ಶಾಸಕರಾದವರು, ಈಗ, ಅವರು ಉಚ್ಚಾಟನೆಗೊಂಡಿರಬಹುದು. ಯತ್ನಾಳ್ ಅವರು ವಾಪಸ್ ಬರಬೇಕು ಎನ್ನುವುದು ನಮ್ಮೆಲ್ಲರ ಆಶಯ ಮತ್ತು ಒತ್ತಾಯ ಕೂಡಾ" ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ಭೇಟಿ ವಿಚಾರದ ಬಗ್ಗೆ ಎಂಎಲ್​ಸಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಭೇಟಿಯೂ ವೈಯಕ್ತಿಕ ಭೇಟಿಯೋ ಗೊತ್ತಿಲ್ಲ. ದೌರ್ಬಲ್ಯಗಳು ಎಲ್ಲರಲ್ಲೂ ಇದ್ದಾವೆ, ದೌರ್ಬಲ್ಯಗಳನ್ನ ದೂರ ಮಾಡಿಕೊಂಡು ಒಟ್ಟಾಗಿ ಹೋದರೆ ಖಂಡಿತವಾಗಿಯೂ ಒಂದು ಒಳ್ಳೆಯ ಸಂದೇಶ ಸಿಗಲಿದೆ.

ಒಟ್ಟಾಗುವುದನ್ನ ಯಾರು ಬೇಡ ಅಂತಾರೆ. ಒಟ್ಟಾಗಬೇಕು. ದೌರ್ಬಲ್ಯಗಳನ್ನು ದೂರ ಮಾಡ್ಕೊಂಡು ಒಟ್ಟಾದ್ರೆ ಒಳ್ಳೆ ಫಲಿತಾಂಶ ಖಂಡಿತ ಬರುತ್ತೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗುಂಡಿನ ದಾಳಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಟೈಗರ್‌ ಶ್ರಾಫ್‌ ಅಲ್ಲ ಶೂಟರ್ ಗಳ ಟಾರ್ಗೆಟ್; ಮತ್ತೊಬ್ಬ ಸೆಲೆಬ್ರಿಟಿ ಹತ್ಯೆಗೆ ಸ್ಕೆಚ್!

ಅಲ್ಬೇನಿಯಾದಲ್ಲಿ ಭ್ರಷ್ಟ ಪ್ರಧಾನಿ ಎಡಿ ರಾಮಗೆ ಸುಪ್ರೀಂ ಕೋರ್ಟ್ ಸಹಾಯ; ಜನಾಕ್ರೋಶದಿಂದ ಬೆಂಕಿ; ಭಾರತಕ್ಕೂ ಇದೊಂದು ಪಾಠ: ಸಂಜಯ್ ರಾವತ್

ಸಮಯ ನಿಂತಿದೆಯೇ… ನಿಧಾನವಾಗಿದೆಯೇ? (ವಿಜ್ಞಾನ ವಿಶೇಷ)

ಎಲ್ಲರೂ ಒಟ್ಟಾಗಿ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು: ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ; ಸಿಎಂ

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ದೆಹಲಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಬಂಧನ