ಜೆಡಿಎಸ್ 
ರಾಜಕೀಯ

'ಅಭಿವೃದ್ಧಿ ಶೂನ್ಯ', ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಸ್ಟಿಂಗ್ ಮತ್ತು ಬ್ಲ್ಯಾಕ್ ಮೇಲ್ ಭಾಗ್ಯ!

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಪೌರುಷ ತೋರಿದ್ದ ಡಿಕೆ ಶಿವಕುಮಾರ್ ಅವರೇ ಈಗ ಕದ್ದುಮುಚ್ಚಿ ನೀರು ಹರಿಸುತ್ತಿರುವುದು ಯಾರನ್ನು ಮೆಚ್ಚಿಸಲು?

ಬೆಂಗಳೂರು: ಕಾಂಗ್ರೆಸ್ಸಿಗರು ವಿಧಾನಸೌಧದಲ್ಲಿ ಜನಸೇವೆ ಮಾಡುವ ಬದಲು 'ಡರ್ಟಿ ಪಿಕ್ಚರ್' ತೆಗೆಯುವ ಸ್ಟುಡಿಯೋ ತೆರೆದಂತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರೇ ತಮ್ಮದೇ ಪಕ್ಷದವರ ಒಳಸಂಚು ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳ ಬಗ್ಗೆ ಕಣ್ಣೀರು ಹಾಕುತ್ತಿದ್ದಾರೆ.

ಬೀದಿಯಲ್ಲಿ ನಿಂತು ಬಟ್ಟೆ ಹರಿದುಕೊಳ್ಳುವ ಕಾಂಗ್ರೆಸ್ ಸರ್ಕಾರದ ಅಧಿಕಾರದ ಒಳಜಗಳದಲ್ಲಿ, ರಾಜ್ಯದ ಅಭಿವೃದ್ಧಿ ಮಾತ್ರ ಸಂಪೂರ್ಣ ಅನಾಥವಾಗಿದೆ. ರೈತರಿಗೆ ಕೊಡಲು ಹಣವಿಲ್ಲ, ಆದರೆ ಸ್ವಪಕ್ಷೀಯರನ್ನೇ ಮುಗಿಸಲು ಕ್ಯಾಮೆರಾ ಇಡಲು, ಷಡ್ಯಂತ್ರ ರೂಪಿಸಲು ಮಾತ್ರ ಇವರ ಬಳಿ ಭರಪೂರ ಸಮಯ ಮತ್ತು ತಂತ್ರಗಾರಿಕೆ ಇದೆ! ಇದುವೇ ಅಸಲಿ "ಕೈ" ಚಳಕ ಎಂದು ತಪರಾಕಿ ಹಾಕಿದೆ.

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಪೌರುಷ ತೋರಿದ್ದ ಡಿಕೆ ಶಿವಕುಮಾರ್ ಅವರೇ ಈಗ ಕದ್ದುಮುಚ್ಚಿ ನೀರು ಹರಿಸುತ್ತಿರುವುದು ಯಾರನ್ನು ಮೆಚ್ಚಿಸಲು? ತಮಿಳುನಾಡು ಹಾಗೂ ತೆಲಂಗಾಣಕ್ಕೆ ಪದೇ ಪದೇ ನೀರು ಬಿಡುವ ನೀರು ಗಂಟಿ ಕೆಲಸ ಮಾಡುತ್ತಿರುವ ಡಿಕೆ ಶಿವಕುಮಾರ್ ಅವರೇ ಕನ್ನಡಿಗರಿಗೆ ಇನ್ನೆಷ್ಟು ದ್ರೋಹ ಬಗೆಯುತ್ತೀರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.

"ತಮಿಳುನಾಡಿಗೆ ನೀರು ಬಿಟ್ಟರೆ ಬೀದಿಗೆ ಇಳಿಯುತ್ತೇನೆ" ಎಂದಿದ್ದ ಶಾಸಕ ರವಿ ಗಣಿಗ ಅವರೇ, ಈಗ ಹೋರಾಟಕ್ಕೆ ಇಳಿಯಲು ತೊಡೆ ನಡುಗುತ್ತಿದೆಯೇ? ಕಾವೇರಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಂಡ್ಯ ಜಿಲ್ಲೆಯ ಸಚಿವರು, ಕಾಂಗ್ರೆಸ್ ಶಾಸಕರು ಮೌನವ್ರತ ಆಚರಿಸುತ್ತಿರುವುದು ನಾಚಿಕೆಗೇಡು. ​ಪ್ರಾಧಿಕಾರದ ಮುಂದೆ ಸಮರ್ಥ ವಾದ ಮಂಡಿಸಲಾಗದ ಅಸಮರ್ಥಕಾಂಗ್ರೆಸ್ ಸರ್ಕಾರದಿಂದ ರೈತರ ರಕ್ಷಣೆ ಸಾಧ್ಯವೇ ಇಲ್ಲ. ರೈತರ ಹಿತ ಕಾಯದ ಈ ಸರ್ಕಾರದಿಂದ ನಾಡಿನ ಜನ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾದವರು HDK ಎಡಗೈ-ಬಲಗೈ ಬಂಟರೇ; ಇಂದಲ್ಲ, ನಾಳೆ ಸತ್ಯ ಆಚೆ ಬರುತ್ತೆ: ಪ್ರಿಯಾಂಕ್ ಖರ್ಗೆ

ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ!

ಮಾತೃಭಾಷೆ ಕನ್ನಡ ಅಂದ್ರೆ ಕೆಲಸ ಕೊಡಲ್ಲ, ಬೆಂಗಳೂರಿನ ಐಟಿ ಕಂಪನಿಗೆ ಕನ್ನಡ ಬೇಡ್ವಂತೆ: ವಿಡಿಯೋ ಮೂಲಕ ನೋವು ಹೇಳಿಕೊಂಡ ಯುವತಿ!

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!