ಎಚ್ ಡಿ ಕುಮಾರಸ್ವಾಮಿ - ಪ್ರಿಯಾಂಕ್ ಖರ್ಗೆ 
ರಾಜಕೀಯ

ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾದವರು HDK ಎಡಗೈ-ಬಲಗೈ ಬಂಟರೇ; ಇಂದಲ್ಲ, ನಾಳೆ ಸತ್ಯ ಆಚೆ ಬರುತ್ತೆ: ಪ್ರಿಯಾಂಕ್ ಖರ್ಗೆ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಸ್ಟಿಂಗ್ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇರುವುದು ಸ್ಪಷ್ಟ. ಸತ್ಯ ಹೊರಬರಲಿ ಅಂತಾನೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾವು ತನಿಖೆಯನ್ನು ಕೈಗೊಂಡಿದ್ದೇವೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಎಡಗೈ-ಬಲಗೈ ಬಂಟರೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಸ್ಟಿಂಗ್ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇರುವುದು ಸ್ಪಷ್ಟ. ಸತ್ಯ ಹೊರಬರಲಿ ಅಂತಾನೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾವು ತನಿಖೆಯನ್ನು ಕೈಗೊಂಡಿದ್ದೇವೆ. ನಮ್ಮ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಇಂದಲ್ಲ, ನಾಳೆ ಸತ್ಯ ಆಚೆ ಬರಲಿದೆ. ಇದರಲ್ಲಿ ಗೊಂದಲ, ಅನುಮಾನ ಪಡುವಂತದ್ದು ಏನೂ ಇಲ್ಲ. ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದಾರೆ.

ಸ್ಟಿಂಗ್ ಯಾರು ಮಾಡಿದ್ದು, ಯಾಕೆ ಮಾಡಿದ್ದು, ಅವರ ಹಿಂದೆ ಯಾರಿದ್ದಾರೆ, ಇಷ್ಟು ವರ್ಷ ಆದಮೇಲೆ ಯಾರ ಕೈಗೆ ಸಿಕ್ತು, ಇದ್ದಕ್ಕಿದ್ದಂತೆ ಯಾಕೆ ಅಪ್ಲೋಡ್ ಆಯ್ತು? ಈ ಎಲ್ಲವೂ ಶೀಘ್ರದಲ್ಲೇ ಬಯಲಾಗಲಿದೆ. ಅದರ ಮೂಲದಿಂದ ಹಿಡಿದು ಇಲ್ಲಿ ತನಕ ಏನೇನಾಗಿದೆ ಎಲ್ಲವನ್ನು ಬಟಾಬಯಲು ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನಾವು ತನಿಖೆಯನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡ್ತೀವಿ. ನಿಷ್ಪಕ್ಷಪಾತವಾದ ತನಿಖೆ ಆಗೆ ಆಗುತ್ತೆ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತೆ. ಯರ‍್ಯಾರ ಹೆಸರು ಉಲ್ಲೇಖಿಸಿದ್ದಾರೆ, ಅವರನ್ನೆಲ್ಲ ತನಿಖೆಗೆ ಒಳಪಡಿಸಿದ್ದೇವೆ. ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿದ್ದೇವೆ, ಇಂಟರಾಗೇಶನ್ ರೆಕಾರ್ಡ್ ಆಗಿದೆ. ಸಮಯ ಬಂದಾಗ ನಿಮ್ಮ ಮುಂದೆ ಇಡ್ತೀವಿ. ಇದರಲ್ಲಿ ತಪ್ಪಿಸಿಕೊಳ್ಳುವುದು ಇಲ್ಲ. ಚಾರ್ಜ್ ಶೀಟ್ ಆಗಲೇಬೇಕು, ಕೋರ್ಟ್ ಗೆ ಸಲ್ಲಿಸಲೇಬೇಕು. ಆರ್‌ಟಿಐನಲ್ಲಿ ಬರಲೇಬೇಕು ಎಂದರು.

ಇನ್ನು ವಿಕ್ಕಿ ಅನ್ನೋ ವ್ಯಕ್ತಿಯ ಹತ್ಯೆ ಮಾಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಕುಮಾರಸ್ವಾಮಿ ಅವರು ಅದ್ಯಾವುದೋ ಹಳೇ ಪ್ರಕರಣ ತಗೊಂಡು ಈಗ ಬಂದಿದ್ದಾರೆ. ಅದರ ಬಗ್ಗೆಯೂ ಕಂಪ್ಲೆಂಟ್ ಕೊಟ್ಟರೆ ತನಿಖೆ ಮಾಡ್ತೀವಿ. ಇಲ್ಲಿವರೆಗೆ ಕಂಪ್ಲೆಂಟ್ ಬಂದಿಲ್ಲ. ಕುಮಾರಸ್ವಾಮಿಯವರೇ ಕಂಪ್ಲೆಂಟ್ ಕೊಡಲಿ ತನಿಖೆ ಮಾಡಿಸ್ತೀವಿ. ನಿಮ್ಮ ವೈಯಕ್ತಿಕ ದ್ವೇಷಗಳನ್ನು ನಮ್ಮ ಮುಖಾಂತರ ತೀರಿಸಿಕೊಳ್ಳೋದು ಬೇಡ ಎಂದರುಯ

ಸ್ಟಿಂಗ್ ವಿಚಾರದಲ್ಲಿ ಇಬ್ಬರು, ಮೂವರು ಅಬ್‌ಸ್ಕ್ಯಾಂಡ್ ಆಗಿದ್ದಾರಲ್ಲ ಯಾರು ಓಡಿಸಿರೋದು? ನೋಟಿಸ್ ಕೊಟ್ಟ ಮೇಲೆ ಎಲ್ಲಿ ಮಾಯ ಆಗಿದ್ದಾರೆ? ಯಾರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ? ಅದು ದೊಡ್ಡವರಿಗೆ ಗೊತ್ತಿರುತ್ತಲ್ಲ, ಕಳಿಸೋಕೆ ಹೇಳಿ ಅವರನ್ನು ಅವಾಗ ಎಲ್ಲಾ ಸತ್ಯ ಗೊತ್ತಾಗುತ್ತೆ. ಅಬ್‌ಸ್ಕ್ಯಾಂಡ್ ಆಗಿರೋರು ಯಾರು ಅಂತ ಕುಮಾರಸ್ವಾಮಿ ಅವರನ್ನು ಕೇಳಿ, ಹೇಳ್ತಾರೆ. ಅವರದೇ ಎಡಗೈ ಬಲಗೈ ಎಂದು ಖರ್ಗೆ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ!

ಮಾತೃಭಾಷೆ ಕನ್ನಡ ಅಂದ್ರೆ ಕೆಲಸ ಕೊಡಲ್ಲ, ಬೆಂಗಳೂರಿನ ಐಟಿ ಕಂಪನಿಗೆ ಕನ್ನಡ ಬೇಡ್ವಂತೆ: ವಿಡಿಯೋ ಮೂಲಕ ನೋವು ಹೇಳಿಕೊಂಡ ಯುವತಿ!

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!

ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಹಾವಳಿ: ಯುವಕನ ಮುಖಕ್ಕೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! Video