ಸಿಎಂ ಡಿ ಕೆ ಶಿವಕುಮಾರ್  
ರಾಜಕೀಯ

ಮೆಟಾ ಕನ್ನಡಕ ಧರಿಸಿ ಉದ್ಯಮಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು: ಸ್ಟಿಂಗ್ ಆಪರೇಷನ್ ವಿವಾದ ಬೆನ್ನಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ದೇವರು ನನಗೆ ಒಂದು ಶಕ್ತಿಯನ್ನು ಕೊಟ್ಟಿದ್ದಾನೆ. ಮುಖಭಾವಗಳನ್ನು ಓದುವ ಶಕ್ತಿ. ನನ್ನ ಅನುಭವದ ಆಧಾರದ ಮೇಲೆ ಯಾರೊಬ್ಬರು ನನ್ನ ಬಳಿಗೆ ಏಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಲ್ಲೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ‘ಸ್ಟಿಂಗ್ ಆಪರೇಷನ್‌’ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಮೆಟಾ ಎಐ (Meta AI) ಕನ್ನಡಕ ಧರಿಸಿದ್ದ ಉದ್ಯಮಿಯೊಬ್ಬರು ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದರು. ಈ ವೇಳೆ ಅವರು ತಮ್ಮ ಮೇಲೆ ಕಣ್ಣಿಡುವ ಉದ್ದೇಶದಿಂದ ಬಂದಿರಬಹುದು ಎಂಬ ಅನುಮಾನ ಮೂಡಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ದೇವರು ನನಗೆ ಒಂದು ಶಕ್ತಿಯನ್ನು ಕೊಟ್ಟಿದ್ದಾನೆ. ಅದೇನೆಂದರೆ, ಮುಖಭಾವಗಳನ್ನು ಓದುವ ಶಕ್ತಿ. ನನ್ನ ಅನುಭವದ ಆಧಾರದ ಮೇಲೆ ಯಾರೊಬ್ಬರು ನನ್ನ ಬಳಿಗೆ ಏಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಲ್ಲೆ. ಪ್ರತಿದಿನ ಸಾವಿರಾರು ಜನರು ನನ್ನನ್ನು ಭೇಟಿಯಾಗುತ್ತಾರೆ. ಅವರ ಮುಖಭಾವಗಳನ್ನು ನಾನು ಓದಬಲ್ಲೆ,” ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಉದ್ಯಮಿಯೊಬ್ಬರು ನನ್ನನ್ನು ಭೇಟಿಯಾಗಿ ವ್ಯವಹಾರದ ಬಗ್ಗೆ ಚರ್ಚಿಸಲು ಬಂದಿದ್ದರು. ಅಧಿಕಾರಿಗಳು ಅವರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ಅವರು ನನ್ನನ್ನು ಆ್ಯಂಟೆ ಚೇಂಬರ್‌ಗೆ ಕರೆದೊಯ್ದು ತಮ್ಮ ಲ್ಯಾಪ್‌ಟಾಪ್‌ ತೆರೆದರು. ತಮ್ಮ ಕಂಪನಿ ಅಥವಾ ವ್ಯವಹಾರದ ಬಗ್ಗೆ ಮಾತನಾಡುವ ಬದಲು, ಅವರು ರಾಜಕೀಯ ಮತ್ತು ಚುನಾವಣಾ ವಿಶ್ಲೇಷಣೆಯ ಬಗ್ಗೆ ಚರ್ಚಿಸಲು ಆರಂಭಿಸಿದರು. ಚುನಾವಣಾ ವಿಶ್ಲೇಷಕರಂತೆ ಯಾವ ಮತಗಟ್ಟೆಯಲ್ಲಿ ಏನು ಮಾಡಬಹುದು ಎಂಬುದನ್ನು ವಿವರಿಸಲಾರಂಭಿಸಿದರು ಎಂದು ಡಿ ಕೆ ಶಿವಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

ಇದರಿಂದ ನನಗೆ ಅನುಮಾನ ಮೂಡಿತು. ಹೀಗಾಗಿ, ಅವರ ಬಗ್ಗೆ ಹಾಗೂ ಅವರ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಮಾಡಲು ಬಂದ ವ್ಯಕ್ತಿ ನನ್ನನ್ನು ಮತ್ತು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಭೇಟಿ ಮಾಡಿದ್ದಾರೆ. ಆಗ ಮೆಟಾ ಕನ್ನಡಕ ಧರಿಸಿದ್ದರು ಎಂದು ಹೇಳಿದ್ದಾರೆ. ಆದರೆ ಆ ವ್ಯಕ್ತಿ ಯಾರು, ಅವರ ಹೆಸರೇನು, ಹಿನ್ನಲೆಯೇನು ಎಂದು ಸಿಎಂ ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

ಹುಬ್ಬಳ್ಳಿ ಮಹಿಳೆ ಕತ್ತು ಸೀಳಿದ ಮಾಂಜಾದಾರ: 'ಮನರಂಜನೆಗಾಗಿ ಮತ್ತೊಬ್ಬರ ಜೀವದ ಜೊತೆ ಆಟವಾಡಬೇಡಿ': DCM ಪರಮೇಶ್ವರ್ ಖಡಕ್ ಎಚ್ಚರಿಕೆ

ಗಡಿ ಗಸ್ತು ನಿಯಮ ಬದಲಿಸಿದ ಚೀನಾ; ಎಲ್‌ಎಸಿಯಲ್ಲಿ ಮತ್ತೆ ಉದ್ವಿಗ್ನತೆ: ಭಾರತ ಕೆಂಡ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಭೀತಿ: ಒಡಿಶಾದಲ್ಲಿ ಹೈ ಅಲರ್ಟ್, 30 ಜಿಲ್ಲೆಗಳಲ್ಲಿ ಕಟ್ಟೆಚ್ಚರ!