ಮಹಾದೇವಪ್ಪ ಮತ್ತು ಬೈರತಿ ಸುರೇಶ್ 
ರಾಜಕೀಯ

ನಾನೂ ಅಂಬೇಡ್ಕರ್ ಅನುಯಾಯಿ: ಮಹಾದೇವಪ್ಪ ನನ್ನ ತಂದೆ ಸಮಾನ; ಮನೆಯ ಗೋಡೆ ಒಡೆಸಿದ್ದು ನಾನಲ್ಲ- ವರಸೆ ಬದಲಿಸಿದ ಬೈರತಿ ಸುರೇಶ್ !

ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ. ಮನೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಖಾಲಿ ಇದ್ದ ಕಾರಣ ಆ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ವಿವಾದವೇನಿದೆ ಎಂಬುದು ನನಗೆ ಗೊತ್ತಿಲ್ಲ.

ಬೆಂಗಳೂರು: ನನ್ನ ಮತ್ತು ಮಹಾದೇವಪ್ಪ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ನಿವಾಸ ಹಂಚಿಕೆ ವಿಚಾರವಾಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪಮತ್ತು ತನ್ನ ಮಧ್ಯೆ ಕಿತ್ತಾಟ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೈರತಿ ಸುರೇಶ್ ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ.

ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ. ಮನೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಖಾಲಿ ಇದ್ದ ಕಾರಣ ಆ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ವಿವಾದವೇನಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಮಹದೇವಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹೇಳಿದ ಸುರೇಶ್, ನಾನು ಮಹದೇವಪ್ಪಣ್ಣ ಅವರ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ಅವರು ನನ್ನ ಸ್ನೇಹಿತರಲ್ಲ, ನನಗಿಂತ ದೊಡ್ಡವರು, ಅವರ ಮುಂದೆ ನಾನು ಮಗನ ಸಮಾನ ಎಂದರು.

ಮನೆಯ ಗೋಡೆ ಒಡೆಸಿದ್ದು ನಾನಲ್ಲ, ಅದು ನನ್ನ ಮನೆಯೂ ಅಲ್ಲ, ಸಂಬಂಧಪಟ್ಟ ಇಲಾಖೆಯವರು ಮಾಡಿರುವ ಕೆಲಸ. ಕಳೆದ ತಿಂಗಳು 15ನೇ ತಾರೀಖಿಗೆ ಮನೆ ಖಾಲಿ ಮಾಡಲಾಗಿದೆ ಎಂದು ಪತ್ರ ಬಂದಿತ್ತು. ಇದೀಗ ಮಹದೇವಪ್ಪಣ್ಣ ಅವರೇ ಆ ಮನೆಯಲ್ಲಿ ಮುಂದುವರಿಯುವುದಾದರೆ ನನಗೇನೂ ಅಭ್ಯಂತರವಿಲ್ಲ ಎಂದು ಸುರೇಶ್ ಉಲ್ಟಾ ಹೊಡೆದಿದ್ದಾರೆ.

ಸಿಎಂ ಅವರು ಅವರನ್ನೇ ಮುಂದುವರಿಯಲು ಸೂಚಿಸಿದರೆ, ಉಳಿದ ಒಂದೂಮುಕ್ಕಾಲು ವರ್ಷ ಅವರೇ ಇರಲಿ, ನನ್ನ ತಕರಾರಿಲ್ಲ. ಅವರು ಅಂಬೇಡ್ಕರ್ ಅನುಯಾಯಿ, ನಾನೂ ಅಂಬೇಡ್ಕರ್ ಅನುಯಾಯಿ ಎಂದು ಪ್ಲೇಟ್ ಬದಲಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

West Asia Conflict ಎಫೆಕ್ಟ್: ಗಗನಕ್ಕೇರುತ್ತಿದೆ ಜಾಗತಿಕ ತೈಲ ದರ, $100 ತಲುಪಿದ ಕಚ್ಚಾ ತೈಲ ಬೆಲೆ..!

'ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ, ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ': ವಿಜಯ್ ಮಲ್ಯ