ಬಳ್ಳಾರಿ: ರಾಜ್ಯದಲ್ಲಿ ಎಡವಟ್ಟು ಮತ್ತು ಅಡಮುಟ್ ಸರ್ಕಾರ ಇದೆ. ಯಾಕೆಂದರೆ ಹೆಜ್ಜೆ ಹೆಜ್ಜೆಗೂ ಎಡವಟ್ಟು ಮಾಡುತ್ತಾರೆ. ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿರುವುದರಿಂದ ಅಡಮುಟ್ ಸರ್ಕಾರ, ಕರ್ನಾಟಕದ ಜನತೆಯ ಯೋಗ್ಯತೆಗೆ ತಕ್ಕಂತೆ ಈ ಸರ್ಕಾರ ಇಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಇದು ಅತ್ಯಂತ ಕಡು ಭ್ರಷ್ಟ ಸರ್ಕಾರ, ಈ ಸರ್ಕಾರ ಕಿತ್ತು ಹಾಕಲು ಬಳ್ಳಾರಿ ಪಾದಯಾತ್ರೆ ನಮಗೆ ಸ್ಫೂರ್ತಿ ನೀಡಿದೆ. ಇನ್ನೊಂದು ಹೋರಾಟ ಮಾಡಲು ನಾವು ಸನ್ನದ್ದರಾಗಿದ್ದೇವೆ. ಇದೇ ನಮ್ಮ ಸಂಕಲ್ಪ, ಇದೇ ನಮ್ಮ ಪ್ರತಿಜ್ಞೆ ಎಂದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ಹುಲಿಯಲ್ಲ, ಕರ್ನಾಟಕದ ಹುಲಿ ಎಂದು ಹಾಡಿ ಹೊಗಳಿದರು. ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರನ್ನು ಪದೇಪದೇ ಪ್ರಸ್ತಾಪಿಸಿ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾಗೇಂದ್ರನನ್ನು ಬೆಳೆಸಿದ್ದೇ ನೀವು. ಆತ ಈಗ ಭೂತಕಾಲ. ಶ್ರೀರಾಮುಲು ಅವರೇ, ನಿಮಗೆ ನಿಮ್ಮ ನಿಜವಾದ ಶಕ್ತಿ ಏನೆಂಬುದು ಗೊತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನೀವು ಬರಿ ಬಳ್ಳಾರಿಯ ಹುಲಿಯಲ್ಲ, ಇಡೀ ಕರ್ನಾಟಕದ ಹುಲಿ. ಎಲ್ಲೆಲ್ಲಿ ಅನ್ಯಾಯವಾಗುತ್ತದೋ ಅಲ್ಲೆಲ್ಲಾ ಮುಂಚೂಣಿಯಲ್ಲಿ ನಿಂತು ಹೋರಾಡಿ. ಪರಿಶಿಷ್ಟ ಪಂಗಡದ ಮೀಸಲಾತಿ ಶೇ 7ಕ್ಕೆ ಏರಿಕೆಯಾಗುವವರೆಗೂ ನಿಮ್ಮ ಹೋರಾಟ ಮುಂದುವರಿಸಿ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರವು ಕಲ್ಯಾಣ ಕರ್ನಾಟಕ ಸೇರಿ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಸರ್ಕಾರದ ಆಯುಷ್ಯ ಇನ್ನು ಕೇವಲ 500 ದಿನ ಮಾತ್ರ. ಅಷ್ಟರಲ್ಲಿ ಏನು ಮಾಡಲು ಸಾಧ್ಯವಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.
ಇದು ಅತ್ಯಂತ ಕಡು ಭ್ರಷ್ಟ ಸರ್ಕಾರ, ಅವರಿಗೆ ಇಲಾಖೆಯಲ್ಲಿನ ಹಣ ತಿನ್ನಲು ಸಾಲುತ್ತಿಲ್ಲ. ಹೀಗಾಗಿ ಜನರಿಂದ ಅರ್ಜಿ ಪಡೆಯುತ್ತಿದ್ದಾರೆ. ಪ್ರಜಾ ಸೇವೆ ಹೆಸರಿನಲ್ಲಿ ಜನರಿಂದ ನೇರವಾಗಿ ಲಂಚ ಪಡೆಯುತ್ತಿದ್ದಾರೆ ಅದಕ್ಕಾಗಿ ಇದು ಕೌಂಟ್ ಡೌನ್ ಸರ್ಕಾರ ಎಂದು ಹೇಳಿದರು.
ಬಳ್ಳಾರಿ ಭಾಗದ ಜನರು ಸತತವಾಗಿ ಎರಡನೇ ಬಾರಿಗೆ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಬರ ವೀಕ್ಷಣೆಗೆ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿ ದ್ದಾರೆ. ಹೆಲಿಕಾಪ್ಟರ್‌ನಿಂದ ಬಡವರ, ರೈತರ ಬರಗಾಲದ ನೋವು ಕಾಣುವುದೇ’ ಎಂದರು. ಜನಾರ್ಧನ ರೆಡ್ಡಿ ನೀನು ಅಶೋಕ್ ಕಂಟ್ರೋಲ್ ಮಾಡ್ಬೇಡ... ಅಶೋಕ್ ಅವರಲ್ಲಿ ಈಗ ನಿಜವಾದ ಗೌಡರ ಪಾತ್ರ ಹೊರಬರ್ತಿದೆ , ಕಾಂಗ್ರೆಸ್ ಸರ್ಕಾರದ ವಿರುದ್ಧ ರೌದ್ರಾವತಾರ ತಾಳುತ್ತಿದ್ದಾರೆ ಎಂದು ಹೇಳಿದರು.