ಡಿ.ಕೆ ಶಿವಕುಮಾರ್ 
ರಾಜಕೀಯ

ಬಿಜೆಪಿಯವರಿಗೆ ಬರಕ್ಕಿಂತ ರಾಜಕಾರಣವೇ ಮುಖ್ಯ ಆಯ್ತು: ಸಿಎಂ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ

ಈ ವರ್ಷ ಭೀಕರವಾದ ಬರಗಾಲ ಇದೆ. ನಾನು ಕೂಡಾ ಅನೇಕ ಕಡೆ ಭೇಟಿ ನೀಡಿದ್ದೇನೆ. ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಈ ವರ್ಷ ಅಂತರ್ಜಲವೂ ಬಹಳ ಕುಸಿದಿದೆ. ಬೆಳೆಗಳು ನಾಶವಾಗಿವೆ.‌

ಕನಕಪುರ: ರಾಜ್ಯದಲ್ಲಿ ಬರ ಆವರಿಸಿದ್ದರೂ ಬಿಜೆಪಿಯವರಿಗೆ ರಾಜಕಾರಣವೇ ಮುಖ್ಯವಾಗಿದೆ. ಸದನದಲ್ಲಿ ಬರದ ಕುರಿತು ಚರ್ಚೆಯನ್ನೇ ಮಾಡಲಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರೂ ನನ್ನ ಬಳಿ ಬಂದು ನೋವು ತೋಡಿಕೊಂಡರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಕನಕಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಈ ನಡವಳಿಕೆ ಕಾರಣಕ್ಕಾಗಿಯೇ ರೈತರ ಸಮಸ್ಯೆ ಮತ್ತು ಅವರ ಬದುಕಿನ ಬಗ್ಗೆ ಚರ್ಚೆ ಮಾಡಲು ಮೂರು ದಿನ ವಿಶೇಷ ಅಧಿವೇಶನ ಕರೆದಿದ್ದೇವೆ. ಕೇವಲ ಬರದ ವಿಚಾರ ಮಾತ್ರ ಚರ್ಚೆ ಮಾಡುತ್ತೇವೆ. ನಮ್ಮ ಕ್ಷೇತ್ರವನ್ನು ಬರ ಪಟ್ಟಿಯಿಂದ ಬಿಟ್ಟಿದ್ದಾರೆ ಅಂತ ಯಾವ ಶಾಸಕರೂ ಆತಂಕಪಡಬೇಕಿಲ್ಲ ಎಂದರು.

ಈ ವರ್ಷ ಭೀಕರವಾದ ಬರಗಾಲ ಇದೆ. ನಾನು ಕೂಡಾ ಅನೇಕ ಕಡೆ ಭೇಟಿ ನೀಡಿದ್ದೇನೆ. ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಈ ವರ್ಷ ಅಂತರ್ಜಲವೂ ಬಹಳ ಕುಸಿದಿದೆ. ಬೆಳೆಗಳು ನಾಶವಾಗಿವೆ.‌ ವಿದ್ಯುತ್‌ಗೂ ಬಹಳ ಅಭಾವ ಉಂಟಾಗುವ ಲಕ್ಷಣಗಳು ಕಾಣುತ್ತಿದ್ದು, ಖರೀದಿ ಮಾಡೋ ಅನಿವಾರ್ಯತೆ ಎದುರಾಗಿದೆ. ಅಕ್ಕಪಕ್ಕದ ರಾಜ್ಯಗಳ ಜೊತೆ ಮಾತನಾಡುವುದಕ್ಕೆ ಸಚಿವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಹಿಂದೆ ನನ್ನ ಕಾಲದಲ್ಲಿ ಬೇಕಾದಷ್ಟು ವಿದ್ಯುತ್ ಶಕ್ತಿ ಉತ್ಪಾದನೆ ಮಾಡಿದ್ದೇವೆ. ಯಾವ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಬಂದಿಲ್ಲ. ಬಿಜೆಪಿ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಆಗಲಿಲ್ಲ. ಖಾಸಗಿಯವರಿಗೂ ಶಕ್ತಿ ತುಂಬಲಿಲ್ಲ. ಈಗ ಕೆ.ಜೆ. ಜಾರ್ಜ್ ಅವರು ಬಂದ ಮೇಲೆ ಅನೇಕ ಯೋಜನೆಗಳನ್ನು ತೆಗೆದುಕೊಂಡಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿನ ನಮ್ಮ ಸರ್ಕಾರ ಹೊಸ ಮಾದರಿಗಳನ್ನು ಮಾಡಿದೆ. ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ನಿಂತಿತ್ತು. ಅದನ್ನೂ ಕೂಡ ನಾವು ಸೇರಿಸಿದ್ದೇವೆ. ಈಗ ಒನ್ ನೇಷನ್ ಒನ್ ಗ್ರಿಡ್ ಅಂತ ಇದೆ. ಎಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ್ರೂ ಇಲ್ಲಿಗೆ ತರಬಹುದು. ಅದಕ್ಕೂ ಟ್ರಾನ್ಸ್‌ಮಿಷನ್ ಕಾಸ್ಟ್ ಆಗುತ್ತಿದೆ‌, ಅದರ ಬಗ್ಗೆ ಚಿಂತೆ ಇಲ್ಲ. ನೀರು ಮತ್ತು ವಿದ್ಯುತ್ ಶಕ್ತಿ ಇಲ್ಲದೇ ನಾವು ಬದುಕೋದಕ್ಕೆ ಆಗಲ್ಲ. ಹಾಗಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಬರುತ್ತಿದ್ದಾರೆ. ಎಲ್ಲರೂ ಕರ್ನಾಟಕದ ನೋಡುತ್ತಿದ್ದಾರೆ. ನೀರು, ವಿದ್ಯುತ್ ಶಕ್ತಿ, ಭೂಮಿ ಕೊಡಿ ಅಂತ ಬೇಡಿಕೆ ಇದೆ. ಈಗ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಬೆಳಗಾವಿ: ಬೈಕ್- ಸಾರಿಗೆ ಬಸ್ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು!

ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ: ಫ್ರಿಡ್ಜ್ ಸ್ಪೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ