ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀನು ಯಾವನೋ ದಲಿತರ ನೀಲಿ ಶಾಲಿನ ಬಗ್ಗೆ ಮಾತಾಡೋಕೆ. ನೀನು ಕೇಸರಿ ಶಾಲಿನ ಬಗ್ಗೆ ಮಾತಾಡಿಕೋ. ನೀನು ಒಂದು ಕೇಸರಿ ಸಾಲು ಹಾಕಿಕೊಂಡು ಬಾ, ನಾವು 1ಸಾವಿರ ನೀಲಿ ಶಾಲು ಹಾಕಿಕೊಂಡು ಬರುತ್ತೇವೆ.
ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ. ಮಸೀದಿ ಮುಂದೆ ನಿಂತು ನಿನ್ನ ಬಾಯಿ ತೆವಲಿಗೆ ಮಾತನಾಡ್ತಿಯಾ, ಇಸ್ಲಾಂ ಧರ್ಮದವರು ನಮ್ಮ ದೇಶ ಎಂದು ಅಡ್ಜಸ್ಟ್ ಮಾಡಿಕೊಂಡು ಹೋಗ್ತಿದ್ದಾರೆ.
ನೀನು ಯಾವನೋ ನಮ್ಮ ದಲಿತರ ಬಗ್ಗೆ ಮಾತನಾಡೋಕೆ, ನೀಲಿ ಶಾಲು ಬಗ್ಗೆ ನೀನು ಯಾರೋ ಮಾತಾನಾಡೋಕೆ ಮಗನೆ ಎಂದು ಪ್ರಶ್ನಿಸಿದ್ದಾರೆ. ಡಿಎಸ್ ಎಸ್ ಬಗ್ಗೆ ಮಾತನಾಡುವಾ ಬಾಯಿಕಂಟ್ರೋಲ್ ನಲ್ಲಿ ಇಟ್ಟಿಕೋ. ಒಂದು ಕೇಸ್ ಹಾಕಿದ್ದೀಯಾ, ಇನ್ನೂ ನೂರು ಕೇಸ್ ಹಾಕೋ ಎಂದಿದ್ದಾರೆ.
ಈ ದೇಶ ಕಟ್ಟಿದ್ದು ದಲಿತರು. ಈ ದೇಶ ಮತ್ತು ಕಾಂಗ್ರೆಸ್ ಪಕ್ಷ ದಲಿತರನ್ನು ದೇವರಂತೆ ಶ್ರೇಷ್ಟವಾಗಿ ನಡೆಸಿಕೊಳ್ಳುತ್ತೆ.. ಬಡ್ಡಿ ಮಗನೇ ನೀನ್ಯಾರೋ ದಲಿತರ ಬಗ್ಗೆ ಮಾತನಾಡೋಕೆ, ನಾನು ದಲಿತರ ಪರವಾಗಿ ಮಾತನಾಡುತ್ತಿದ್ದೀನಿ, ನೀನು ದಲಿತರ ಕ್ಷಮೆ ಕೇಳಬೇಕು. ಡಿಎಸ್ಎಸ್ ಕ್ಷಮೆ ಕೇಳಬೇಕು.. ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಮುಟ್ಟಾಳ, ನೀನು ಕಬರ್ದಾರ್ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.