ಜಮೀರ್ ಅಹ್ಮದ್ ಖಾನ್  
ರಾಜಕೀಯ

ಸಿದ್ದರಾಮಯ್ಯ ಅರಮನೆ ಕಟ್ಟಿಲ್ಲ, ಸಣ್ಣದೊಂದು ಮನೆ ಕಟ್ಟಿದ್ದಾರೆ: ಅವರು ವೀಕ್ ಆಗಿಲ್ಲ, ರಾಜಕೀಯದಲ್ಲಿ ಟಗರು- ಜಮೀರ್ ಅಹ್ಮದ್ ಖಾನ್

ಸಿದ್ದರಾಮಯ್ಯ ನಮ್ಮ ನಾಯಕರು. ಅವರು ವೀಕ್ ಆಗೋಕೆ ಸಾಧ್ಯವಿಲ್ಲ, ಅವರು ಎಲ್ಲ ಜಾತಿ ಮತ್ತು ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಿಜವಾದ ಅಹಿಂದ ನಾಯಕ. ಅವರು ವೀಕ್ ಆಗಲ್ಲ,

ಬೆಂಗಳೂರು: ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ದುರ್ಬಲರಾಗಿಲ್ಲ, ಅವರು ರಾಜಕೀಯದಲ್ಲಿ "ಟಗರು" ಇದ್ದ ಹಾಗೆ ಗಟ್ಟಿಯಾಗಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರು. ಅವರು ವೀಕ್ ಆಗೋಕೆ ಸಾಧ್ಯವಿಲ್ಲ, ಅವರು ಎಲ್ಲ ಜಾತಿ ಮತ್ತು ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಿಜವಾದ ಅಹಿಂದ ನಾಯಕ. ಅವರು ವೀಕ್ ಆಗಲ್ಲ, ವೀಕ್ ಆಗೋಕು ನಾವು ಬಿಡಲ್ಲ. 2028 ಕ್ಕೂ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ನಮ್ಮ ನಾಯಕ ಡಿಕೆ ಶಿವಕುಮಾರ್ ಹೇಳಿದ್ದಾರೆಂದು ಜಮೀರ್ ತಿಳಿಸಿದ್ದಾರೆ.

ಮನೆ ಗೃಹಪ್ರವೇಶದ ಸ್ಪಷ್ಟನೆ: ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಕಟ್ಟಿಸಿರುವ ಹೊಸ ಮನೆ ಅರಮನೆಯಂತೆ ಇಲ್ಲ, ಅದೊಂದು ಸಾಮಾನ್ಯ ಹಾಗೂ ಸರಳವಾದ ಮನೆ ಎಂದೂ, ಇದು ಕೇವಲ ಕುಟುಂಬದವರಷ್ಟೇ ಸೇರಿ ಮಾಡಿಕೊಂಡ ಖಾಸಗಿ ಕಾರ್ಯಕ್ರಮವಾಗಿತ್ತು ಎಂದೂ ಜಮೀರ್ ಸ್ಪಷ್ಟಪಡಿಸಿದ್ದಾರೆ.

ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದರೂ ಅವರಿಗೆ ಸ್ವಂತ ಮನೆ ಇರಲಿಲ್ಲ. ಯಾವಾಗಲೋ ಒಂದು ಮನೆ ಕಟ್ಟಿದ್ದರಂತೆ, ಆದರೆ ಕಷ್ಟ ಎದುರಾದಾಗ ಅದನ್ನು ಮಾರಿದ್ದರು. ಈಗ ಕಟ್ಟಿರುವುದು ಸಣ್ಣ ಮನೆ ಎಂದು ಹೇಳಿದ್ದಾರೆ. ಅವರು ಗೃಹ ಪ್ರವೇಶಕ್ಕೆ ಯಾರನ್ನು ಕರೆದಿಲ್ಲ ಎಂದರು.

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮುನಿಸಿಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್, ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯಿಸಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!