ಎಸ್,ಟಿ ಸೋಮಶೇಖರ್ 
ರಾಜಕೀಯ

ಡಿಕೆ ಶಿವಕುಮಾರ್ ತೇಜೋವಧೆಗೆ ಕುಮಾರಸ್ವಾಮಿ ಪ್ಲಾನ್: ನಕಲಿ ಸಿಮ್ ಕಾರ್ಡ್ ಖರೀದಿ, ನೇಪಾಳ- ಕೆನಡಾದಿಂದ ರೆಕಾರ್ಡ್; ST ಸೋಮಶೇಖರ್

ಅಮಿತ್ ಶಾ ಅವರ ಸೂಚನೆಯಂತೆ ತಾವು ಕೆಲಸ ಮಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ನಾನು ಮೂರು ವರ್ಷ ಬಿಜೆಪಿಯಲ್ಲಿದ್ದೆ, ಅಮಿತ್ ಶಾ ಅಂತ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿ ಬಗ್ಗೆ ಆರೇಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿ, ವಿಶೇಷ ಅಧಿವೇಶನ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಹಿಸಲಾಗುತ್ತಿಲ್ಲ, ಹೀಗಾಗಿ ಸಿಎಂ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಶಾಸಕ ಎಸ್,ಟಿ ಸೋಮಶೇಖರ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸೋಮಶೇಖರ್, ನಕಲಿ ಸಿಮ್ ಕಾರ್ಡ್ ತೆಗೆದುಕೊಟ್ಟು,ಅಯೋಧ್ಯೆ ಕೆನಡಾ, ನೇಪಾಳಕ್ಕೆ ಕಳುಹಿಸಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ರ್ಯಾಪ್ ಮಾಡುತ್ತಿದ್ದಾರೆ. ಅವರಿಗೆ ಪ್ರವಾಸ ವೆಚ್ಚ ಎಲ್ಲವನ್ನು ಕುಮಾರಸ್ವಾಮಿ ಅವರೇ ಭರಿಸುತ್ತಿದ್ದಾರೆ.

ಅಮಿತ್ ಶಾ ಅವರ ಸೂಚನೆಯಂತೆ ತಾವು ಕೆಲಸ ಮಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ನಾನು ಮೂರು ವರ್ಷ ಬಿಜೆಪಿಯಲ್ಲಿದ್ದೆ, ಅಮಿತ್ ಶಾ ಅಂತ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಕುಮಾರಸ್ವಾಮಿಗೆ ತಾಕತ್ ಇದ್ದರೆ ಬೆಂಗಳೂರಿನಲ್ಲಿದ್ದುಕೊಂಡೆ ಶಿವಕುಮಾರ್ ವಿರುದ್ದ ಕೆಲಸ ಮಾಡಲಿ, ಅದನ್ನು ಬಿಟ್ಟು ನಕಲಿ ಸಿಮ್ ಕಾರ್ಡ್ ತೆಗೆದುಕೊಟ್ಟು ಮುಖ್ಯಮಂತ್ರಿಗಳ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇದು ನಿಮ್ಮ ಘನತೆಗೆ ತಕ್ಕದಲ್ಲ, ಏನೇ ಮಾಡುವುದಿದ್ದರೂ ನೇರವಾಗಿ ಮಾಡಿ, ಬೆನ್ನಿಗೆ ಚೂರಿ ಹಾಕಬೇಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಲ್ಲಿ ಉತ್ತಮ ಖಾತೆ ಹೊಂದಿದ್ದರೂ ಕರ್ನಾಟಕಕ್ಕೆ ಯಾವುದೇ ಒಂದು ಉತ್ತಮ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿ ಹಾಗೂ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ʻಆಡಿಯೋ ಬಾಂಬ್ʼ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಕುಮಾರಸ್ವಾಮಿ ಅವರು ದಾಖಲೆಗಳನ್ನ ಬಿಡುಗಡೆ ಮಾಡುವ ಮುನ್ನವೇ, ಅದರ ಕುರಿತಾದ ಮಾಹಿತಿ ಅಥವಾ ಆಡಿಯೋ ಸೋರಿಕೆಯಾಯಿತಾ ಎಂಬ ಪ್ರಶ್ನೆಯೂ ಎದುರಾಗಿದೆ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಶಾಸಕ ಎಸ್.ಟಿ ಸೋಮಶೇಖರ್ ನೀಡಿರುವ ಹೇಳಿಕೆ ಮತ್ತಷ್ಟು ಸಸ್ಪೆನ್ಸ್‌ಗೆ ಕಾರಣವಾಗಿದೆ. ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಬಹುದು ಎಂಬ ಸುಳಿವಿನ ಬೆನ್ನಲ್ಲೇ ಸೋಮಶೇಖರ್ ನೀಡಿರುವ ಹೇಳಿಕೆಯ ಹಿಂದಿನ ಉದ್ದೇಶವೇನು ಎಂಬ ಚರ್ಚೆ ಕೂಡ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭರ್ಥಿ ಮಾಡಿ, ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ