ಪ್ರದೀಪ್ ಈಶ್ವರ್ 
ರಾಜಕೀಯ

2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ....: ಸಂಚಲನ ಸೃಷ್ಟಿಸಿದ ಪ್ರದೀಪ್‌ ಈಶ್ವರ್ ಹೇಳಿಕೆ!

ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, 2028ರಲ್ಲಿ ಉತ್ತರ ನೀಡುತ್ತೇನೆ. ಶಿಕ್ಷಣ ಸುಧಾರಣಾ ಸಬ್‌ ಕಮಿಟಿಗೆ ಹಲವು ಇನ್‌ಪುಟ್‌ಗಳನ್ನು ನೀಡಿದ್ದೇನೆ ಎಂದರು.

ದಾವಣಗೆರೆ: 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಪ್ರದೀಪ್‌ ಈಶ್ವರ್‌ ಅವರು, 25 ವರ್ಷಗಳ ಬಳಿಕ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, 2028ರಲ್ಲಿ ಉತ್ತರ ನೀಡುತ್ತೇನೆ. ಶಿಕ್ಷಣ ಸುಧಾರಣಾ ಸಬ್‌ ಕಮಿಟಿಗೆ ಹಲವು ಇನ್‌ಪುಟ್‌ಗಳನ್ನು ನೀಡಿದ್ದೇನೆ. ನನಗೂ ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಿಕ್ಷಣ ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ನನಗೂ ಒಂದು ಇಲಾಖೆ ಕೊಟ್ಟು ನೋಡಲಿ ಆಗ ಮಾಡಿ ತೋರಿಸುತ್ತೇನೆ. ನಾನು ಕೂಡ 2028ಕ್ಕೆ ಸಿಎಂ ಅಭ್ಯರ್ಥಿ ಅನ್ನುತ್ತೇನೆ ಮಾಡೋಕೆ ಆಗುತ್ತಾ? ಕೊನೆ ಪಕ್ಷ ಸಚಿವ ಸ್ಥಾನ ಆದ್ರೂ ನೀಡಲಿ'' ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಮ್ಮ ಕ್ಷೇತ್ರದ 7ನೇ ತರಗತಿಯ 359 ವಿದ್ಯಾರ್ಥಿಗಳಿಗೆ ವರ್ಣಮಾಲೆಯೇ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ. 25 ವರ್ಷಗಳ ಬಳಿಕ ನಾನು ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಇದೆ. ಸಚಿವ ಸ್ಥಾನವಾದರೂ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಚುನಾವಣಾ ಆಯೋಗದ(ECI) ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಖಜಾನೆ ಖಾಲಿ ಆಗಿಲ್ಲ

''ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕೇಳುವುದು ಸಹಜ. ನಮ್ಮ ಸರ್ಕಾರದ ಖಜಾನೆ ಖಾಲಿ ಆಗಿಲ್ಲ, ಬಿಜೆಪಿ ಶಾಸಕರಿಗೆ ಅವರ ಕ್ಷೇತ್ರದ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ಮಾಜಿ ಸಂಸದ ಪ್ರತಾಪ್‌ ಸಿಂಹ ಮಸೀದಿ ಎದುರು ಬಳಕೆ ಮಾಡಿರುವ ಪದ ಸರಿ ಇಲ್ಲ. ಮಾಜಿ ಸಂಸದರಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಓದಿಕೊಳ್ಳಿ ಎನ್ನುತ್ತಿದ್ದಾರೆ. ಅವರೇನು ಓದೋಕೇ ಹೇಳೋದು ಅವರ ವಂಶಸ್ಥರ ರಕ್ತದಲ್ಲೇ ಅಂಬೇಡ್ಕರ್‌ ಇದ್ದಾರೆ. ಅವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಭಾಗದಲ್ಲಿ ಬಡ್ಡಿ ಮಗ ಅಂತಾ ಬಳಸೋದು ಕಾಮನ್‌'' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

NDA ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಯಾಗುತ್ತಿದೆ! ತಮ್ಮದೇ ಆಡಳಿತದ ವಿರುದ್ಧ ಕೇಂದ್ರ ಸಚಿವ ಪಾಸ್ವಾನ್ ಆಕ್ರೋಶ!

ಲಾಭದಲ್ಲಿ 11 ಹಾಲು ಒಕ್ಕೂಟಗಳು, ನಷ್ಟದಲ್ಲಿ ಚಿಕ್ಕಬಳ್ಳಾಪುರ ದಾಖಲೆ: ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ನಂತರ ದರ ಏರಿಕೆ ನಿರ್ಧಾರ; ಸಿಎಂ

ಬರ ನೆರವು: ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬರದಿದ್ದರೆ BJP ಕಪಟ ನಾಟಕ ಸಾಬೀತು; ಸಿಎಂ ಡಿ ಕೆ ಶಿವಕುಮಾರ್

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವಂತಿಲ್ಲ: ಶಿವಸೇನಾ ಕಾರ್ಪೊರೇಟರ್‌ಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್!